

ಚಿತ್ರದುರ್ಗ: ನಗರದ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ಅಮೃತ ಮಹೋತ್ಸವ ಸಮಾರಂಭ ನಗರದ ಹಳೇ ಮಾಧ್ಯಮಿಕ ಶಾಲಾ ಆವ ರಣದಲ್ಲಿ ನ.೨೮ರಿಂದ ೨ ದಿನಗಳ ಕಾಲ ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ ರಘುರಾಮರೆಡ್ಡಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೫೧ಆಗಸ್ಟ್ ೩ರಂದು ಎ. ಭೀಮಪ್ಪನಾಯಕ ಅವರ ನೇತೃತ್ವ ದಲ್ಲಿ ಸ್ಥಾಪನೆಯಾಗಿದ್ದ ಈ ಬ್ಯಾಂಕ್ ೭೫ ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಬ್ಯಾಂಕಿಗೆ ಸೇವೆ ಸಲ್ಲಿಸಿದವರಲ್ಲಿ ಎಂ.ಕೊಟ್ರ ಯ್ಯ, ಕೆ.ಎಚ್.ಸತ್ಯನಾರಾಯಣರಾವ್, ಎಸ್.ಆರ್.ಲಕ್ಷಿ÷್ಮÃಕಾಂತರೆಡ್ಡಿ, ಪಿ.ಎಸ್.ಜಯಪ್ಪ, ಜಂಜುಕೇಶ್ವರ್, ರಾಮಲಿಂಗಶೆಟ್ಟಿ ಪ್ರಾತಃಸ್ಮ ರಣೀಯರಾಗಿದ್ದಾರೆ ಎಂದರು.
ಸಮಾರAಭದಲ್ಲಿ ೩೫ ಮಾಜಿ ನಿರ್ದೇಶಕರಿಗೆ ಸನ್ಮಾನ ಹಾಗೂ ಷೇರುದಾರರು, ಠೇವಣಿದಾರರಿಗೆ ಕೃತಜ್ಞತೆ ಸಮರ್ಪಿಲಾಗುವುದು. ಪ್ರ ಸ್ತುತ ೫೯೦೦ ಷೇರುದಾರರನ್ನು ಹೊಂದಿರುವ ಬ್ಯಾಂಕ್ಗೆ ೫೦.೫ ಕೋಟಿ ರೂ. ಸ್ವಂತ ಬಂಡವಾಳವಿದೆ. ೨೨೫ ಕೋಟಿ ರೂ.ಠೇವಣಿ ಇದೆ. ೧೪೪ ಕೋಟಿ ರೂ.ಸಾಲ ವಿತರಣೆಯೊಂದಿಗೆ ೩೬೫ ಕೋಟಿ ರೂ. ವ್ಯವಹಾರ ನಡೆಸಿದೆ. ಕಳೆದ ಆರ್ಥಿಕ ವಷÀðದ ಮುಕ್ತಾಯದಲ್ಲಿ ಬ್ಯಾಂಕ್ ತೆರಿಗೆ ವ್ಯವಹಾರ ಮುಂಚಿನ ವರಮಾನ ೫.೫೭ ಕೋಟಿ ರೂ.ಗಳಾಗಿದ್ದು, ೧೯ವರ್ಷಗಳ ಕಾಲ ಸದಸ್ಯರಿಗೆ ಶೇ.೨೫ ಡಿವಿಡೆಂಟ್ ನೀಡಲಾಗಿ ದೆ.
ಅಮೃತ ಮಹೋತ್ಸವ ಅಂಗವಾಗಿ ನ.೨೯ ರಂದು ರಕ್ತದಾನ ಶಿಬಿರ ಆಯೋಜಿಸಲಾಗುವುದು. ಐಯುಡಿಪಿ ಲೇಔಟ್ನಲ್ಲಿ ಇ-ಲೈಬ್ರರಿ ಆರಂಭಿಸುವ ಚಿಂತನೆಯಿದೆ. ಬೆಂಗಳೂರು ವಿಭಾಗೀಯ ಮಟ್ಟದಲ್ಲಿ ಹೊಸ ಶಾಖೆಗಳಿಗೆ ಅನುಮತಿ ಸಿಕ್ಕಿದ್ದು, ಚಳ್ಳಕೆರೆ ಹಾಗೂ ದಾವಣ ಗೆರೆ ಜಿಲ್ಲೆಯ ಜಗಳೂರಿನಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.
೨೮ರಂದು ಸಂಜೆ ೬ಕ್ಕೆ ಸಹಕಾರ ಸಚಿವ ಲಕ್ಷ÷್ಮಣ ಎಸ್. ಸವದಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಎಚ್.ಕೆ.ಪಾಟೀಲ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಮಾಜಿ ಸಚಿವರಾದ ಎಚ್. ಏಕಾಂತಯ್ಯ, ಎಚ್.ಆಂಜ ನೇಯ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ. ನಂಜನಗೌಡ, ಮರ್ಚೆಂಟ್ ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಲಕ್ಷಿ÷್ಮÃಕಾಂತರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಅಮೃತ ಮಹೋತ್ಸವದ ಮೊದಲ ದಿನ ಸಂಜೆ ೬.೩೦ಕ್ಕೆ ಎ.ಹರ್ಷ ತಂಡದವರಿAದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ೨೯ರಂದು ಸಂಜೆ ೬.೩೦ಕ್ಕೆ ರಾಜೇಶ್ಕೃಷ್ಣನ್ ತಂಡದವರಿAದ ಸಂಗೀತ ಸಂಜೆ ಆಯೋಜಿಸಲಾಗಿದೆ ಎಂದರು. ಬ್ಯಾಂಕ್ ಉಪಾಧ್ಯಕ್ಷ ಎಲ್.ಇ.ಶ್ರೀನಿ ವಾಸಬಾಬು, ನಿರ್ದೇಶಕರಾದ ಎಲ್.ಜಯಣ್ಣ, ಪಿ.ಎಲ್.ಸುರೇಶ್ರಾಜು, ರಾಜಾನಾಯ್ಕ, ಶ.ಮಂಜುನಾಥ್, ಟಿ.ಎಚ್.ರಾಜಪ್ಪ, ಮು ಕುಂದರಾವ್, ಸುರೇಶ್, ಡಿ.ಪ್ರಕಾಶ್, ಇಂದ್ರಮ್ಮ, ಸುಜಾತ, ವೃತ್ತಿಪರ ನಿರ್ದೇಶಕರಾದ ರಾ ಜೀವ್, ಕಾರ್ತಿಕ್, ಮುಖ್ಯಕರ್ಯನಿರ್ವಹ ಣಾಽಕಾರಿ ಕೆ.ಆರ್.ಮಲ್ಲಿಕಾರ್ಜುನ ಇದ್ದರು.