7ನೇ ವೇತನ ಆಯೋಗ ಸೌಲಭ್ಯ ಪಡೆಯಲು ಯತ್ನ (7th Pay Commission)

Retired Government Employees' Association
ಅಜ್ಜಂಪುರದಲ್ಲಿ ಏರ್ಪಡಿಸಿದ್ದ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆಯನ್ನು ಜಿಲ್ಲಾ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಉದ್ಘಾಟಿಸಿದರು. ಅಣ್ಣಪ್ಪಸ್ವಾಮಿ, ಟಿ.ಶಿವಕುಮಾರಸ್ವಾಮಿ, ಎಸ್.ಎಲ್.ರಾಜಶೇಖರಯ್ಯ, ಕೃಷ್ಣಮೂರ್ತಿ, ಕಾಳಯ್ಯ ಇತರರಿದ್ದರು.

Published on: 

ತರೀಕೆರೆ: ನಿವೃತ್ತ ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣ ಹೇಳಿದರು.

ಅಜ್ಜಂಪುರದಲ್ಲಿ ಏರ್ಪಡಿಸಿದ್ದ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, 7ನೇ ವೇತನ ಆಯೋಗ ಶಿಫಾರಸು ಮಾಡಿದ್ದ ಸೌಲಭ್ಯಗಳ ಪೈಕಿ ಬಾಕಿ ಉಳಿದವುಗಳನ್ನು ಪಡೆಯಲು ಸಂಘ ಸತತ ಪ್ರಯತ್ನ ನಡೆಸುತ್ತಿದೆ. ತಾಲೂಕಿನಲ್ಲಿ ಮತ್ತೊಂದು ಸಂಘ ರಚನೆಯಾಗಿರುವುದು ಕ್ರಿಯಾಶೀಲ ಚಟುವಟಿಕೆಗೆ ಅಡಚಣೆಯಾಗಿದೆ. ಎರಡೂ ಸಂಘದ ಪದಾಧಿಕಾರಿಗಳು ಚರ್ಚಿಸಿ ಸಮಾಲೋಚಿಸುವ ಮೂಲಕ ಒಂದಾಗಬೇಕು ಎಂದು ಸಲಹೆ ನೀಡಿದರು.

ತಾಲೂಕು ಅಧ್ಯಕ್ಷ ಅಣ್ಣಪ್ಪಸ್ವಾಮಿ ಮಾತನಾಡಿ, ರಾಜ್ಯ ಸಂಘ ಡಿಸೆಂಬರ್‌ನಲ್ಲಿ ಆಯೋಜಿಸಲು ಉದ್ದೇಶಿಸಿರುವ ರಾಜ್ಯಮಟ್ಟದ ಸಮ್ಮೇಳನದಲ್ಲಿ ತಾಲೂಕು ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಪಾಲ್ಗೊಳ್ಳಬೇಕು ಎಂದರು.

ನಿವೃತ್ತ ನೌಕರ ಎಸ್.ಎಲ್.ರಾಜಶೇಖರಯ್ಯ, ಶಿಕ್ಷಕಿ ಮಂಜುಳಾ, ರಾಜಶೇಖರಯ್ಯ, ಮಹೇಂದ್ರಪ್ಪ, ಟಿ.ಶಿವಕುಮಾರಸ್ವಾಮಿ, ಕೃಷ್ಣಮೂರ್ತಿ, ಕಾಳಯ್ಯ, ಕುಮಾರಪ್ಪ, ನಿಂಗಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net