ವಿದ್ಯಾರ್ಥಿಗಳು ಅನ್ವೇಷಣೆಯತ್ತ ಗಮನಹರಿಸಲಿ|Students should focus on exploration

ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯಿಂದ ವಿಮರ್ಶಾತ್ಮಕ ಆಲೋಚನೆ ಹಾಗೂ ಸಂಶೋಧನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಮತ್ತು ಈ ೇತ್ರದಲ್ಲಿ ಲಭ್ಯವಿರುವ ಅಪಾರ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಚ್​.ಎಸ್​.ವೆಂಕಟಾಚಲಪತಿ ಕರೆ ನೀಡಿದರು.
Students should focus on exploration.
ಗೌರಿಬಿದನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕ್ವಾಂಟಮ್​ ಫಿಸಿಕ್ಸ್​ ಮತ್ತು ತಂತ್ರಜ್ಞಾನಗಳು ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ.ವೆಂಕಟಾಚಲಪತಿ ಉದ್ಘಾಟಿಸಿದರು. ಡಾ.ಬಿ.ಎಸ್​.ಶ್ರೀಕಾಂತ್​, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಆರ್​.ಸರ್ದಾರ್​ ಪಾಷಾ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ರಾಜಶೇಖರ ರೆಡ್ಡಿ, ಐಕ್ಯೂಎಸಿ ಸಂಯೋಜಕ ಡಾ.ಕೆ.ವೆಂಕಟೇಶ್​ ಇದ್ದರು. Students should focus on exploration.
Published on: 
  1. ಪ್ರಾಂಶುಪಾಲ ಡಾ.ಎಚ್​.ಎಸ್​.ವೆಂಕಟಾಚಲಪತಿ ಕರೆ

ಗೌರಿಬಿದನೂರು:ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯಿಂದ ವಿಮರ್ಶಾತ್ಮಕ ಆಲೋಚನೆ ಹಾಗೂ ಸಂಶೋಧನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಮತ್ತು ಈ ೇತ್ರದಲ್ಲಿ ಲಭ್ಯವಿರುವ ಅಪಾರ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಚ್​.ಎಸ್​.ವೆಂಕಟಾಚಲಪತಿ ಕರೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಭೌತಶಾಸ್ತ್ರ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ವಾಂಟಮ್​ ಫಿಸಿಕ್ಸ್​ ಮತ್ತು ತಂತ್ರಜ್ಞಾನಗಳು ಎಂಬ ವಿಷಯದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಪ್ರಸ್ತುತ ಸ್ಪರ್ಧಾತ್ಮಕ ಹಾಗೂ ನಾವೀನ್ಯತೆಯ ಯುಗದಲ್ಲಿ ವಿಜ್ಞಾನ ಶಿಕ್ಷಣದ ಮಹತ್ವ ಅಪಾರವಾಗಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗದ ಜತೆಗೆ ಸಂಶೋಧನಾ ೇತ್ರದಲ್ಲಿ ದೊಡ್ಡ ಭವಿಷ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗದೆ ಹೊಸ ಅನ್ವೇಷಣೆಯತ್ತ ಗಮನ ಹರಿಸಬೇಕು ಎಂದರು.

ಸುರಾನ ಮತ್ತು ಸಿಂಧಿ ಕಾಲೇಜುಗಳ ನಿವೃತ್ತ ನಿರ್ದೇಶಕ ಡಾ. ಬಿ.ಎಸ್​. ಶ್ರೀಕಾಂತ್​ ಮಾತನಾಡಿ, ಮೂಲಭೂತ ವಿಜ್ಞಾನ ಹಾಗೂ ಪ್ರಮುಖವಾಗಿ ಭೌತಶಾಸ್ತ್ರದ ಮಹತ್ವವನ್ನು ವಿವರಿಸಿದರು. ಕ್ವಾಂಟಮ್​ ಭೌತಶಾಸ್ತ್ರದ ಮೂಲಭೂತ ತತ್ವಗಳು ತಂತ್ರಜ್ಞಾನದ ಬೆನ್ನೆಲುಬಾಗಿವೆ. ಸೆಮಿಕಂಡಕ್ಟರ್​ಗಳು, ಮೊಬೈಲ್​, ಲ್ಯಾಪ್​ಟಾಪ್​, ವೈದ್ಯಕಿಯ ತಂತ್ರಜ್ಞಾನದ ಎಂಆರ್​ಐ ಸ್ಕಾ$್ಯನ್​, ಸೂಪರ್​ ಕಂಪ್ಯೂಟಿಂಗ್​ನಂತಹ ತಂತ್ರಜ್ಞಾನಗಳು ಕ್ವಾಂಟಮ್​ ಫಿಸಿಕ್ಸ್​ನ ಕೊಡುಗೆಯಾಗಿವೆ. ಈ ೇತ್ರದಲ್ಲಿ ಭಾರತ ಮುಂದಿನ ದಿನಗಳಲ್ಲಿ ಮಹತ್ವದ ಸಾಧನೆ ಮಾಡಲಿದೆ ಎಂದು ಉದಾಹರಣೆ ಸಹಿತ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net