

ಹುಲಸೂರು: ವಿಶ್ವಕರ್ಮ ಸಮಾಜದ ಕಲಾವಿದರು ತನ್ನದೇ ಆದ ವ್ಯಕ್ತಿತ್ವ ಹೊಂದಿದ್ದಾರೆ. ಶ್ರಮಜೀವಿ ವಿಶ್ವಕರ್ಮ ಸಮಾಜ ಇಂದಿಗೂ ಶ್ರೇಷ್ಠವಾಗಿದೆ ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ ಆವರಣದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು, ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ 3ನೇ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ವಿಶ್ವಕರ್ಮರ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ಅವರ ತಾಂತ್ರಿಕ ಸಾಮರ್ಥ್ಯ ಹಾಗೂ ಕೊಡುಗೆಗಳು ಇಡೀ ಜಗತ್ತಿಗೆ ಆದರ್ಶವಾಗಿವೆ ಎಂದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಠಾಧಿಪತಿಗಳ ಸಂಘಟನಾ ವೇದಿಕೆ ರಾಜ್ಯಾಧ್ಯಕ್ಷರು ಹಾಗೂ ಬೀದರ್&ಸುಲೇಪೇಟ್ ಮಠದ ಪೀಠಾಧಿಪತಿ ಶ್ರೀ ದೊಡ್ಡೇಂದ್ರ ಸ್ವಾಮೀಜಿ ಮಾತನಾಡಿ, ಬ್ರಹ್ಮ, ವಿಷ್ಣು, ಮಹೇಶ್ವ ಹುಟ್ಟುವುದಕ್ಕಿಂತ ಪೂರ್ವದಲ್ಲಿ ವಿಶ್ವಕರ್ಮ ಹುಟ್ಟಿಕೊಂಡಿದೆ ಎಂದು ವೇದಗಳು ಹೇಳುತ್ತಿವೆ. ವಿಶ್ವ ಕರ್ಮದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ತಾವು ಮಾಡುವ ಕಾಯಕ ರ್ನಿಲಕ್ಷ$್ಯ ಮಾಡಬಾರದು. ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರದ ಜತೆಗೆ ಕಾಯಕದ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂದು ಹೇಳಿದರು.
ಗಡಿಗೌಂಡಗಾವದ ಶ್ರೀ ಶಾಂತವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ನಿವೃತ್ತ ಪ್ರಾಧ್ಯಾಪಕ ಭೀಮೇಶ್ ಪಂಚಾಳ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಲತಾ ಹಾರಕೂಡೆ, ಜಿಪಂ ಮಾಜಿ ಸದಸ್ಯರಾದ ಮಲ್ಲಪ್ಪ ಧಬಾಲೆ, ಸುಧೀರ ಕಾಡಾದಿ, ದತ್ತಾತ್ರೆ ವಿಶ್ವಕರ್ಮ, ಅಶೋಕ ಪೋದ್ದಾರ್ ಮಾತನಾಡಿದರು. ಕಾಡಾ ನಿಗಮ ಮಂಡಳಿ ಅಧ್ಯಕ್ಷ ಬಾಬು ಹೊನ್ನಾನಾಯಕ್, ಚಂದ್ರಕಾಂತ ದೇಟ್ನೆ, ಬಂಡುರಾವ ಪಾಟೀಲ್, ಪಾಂಡುರಂಗ ಪಂಚಾಳ, ಸುಲೋಚನಾ ವಿಶ್ವಕರ್ಮ, ಅನುರಾಧ ಪಂಚಾಳ, ವೀರೇಶ ಕೆ. ಪಂಚಾಳ, ಕೃಷ್ಣ ಪಂಚಾಳ, ರಾಜೇಂದ್ರ ಪಂಚಾಳ, ಸಿರೀಶ್ ಕಂಚಗಾರ್, ಪ್ರಶಾಂತ ಪಂಚಾಳ ಇದ್ದರು. ಮಹೇಶ್ವರಿ ಪಂಚಾಳ ಸಂಗೀತ ಸೇವೆ ನಡೆಸಿಕೊಟ್ಟರು. ಎಂ.ಬಿ.ಪಂಚಾಳ ಸ್ವಾಗತಿಸಿದರು. ರೂಪೇಶ ಪಂಚಾಳ ನಿರೂಪಣೆ ಮಾಡಿದರು.