ನವರಾತ್ರಿ ಕನ್ನಡಿಗರ ಹೆಮ್ಮೆಯ ಸಾಂಸ್ಕೃತಿಕ ಹಬ್ಬ

ಭಾಲ್ಕಿ ಪಟ್ಟಣದ ದೇವಿನಗರ ಭವಾನಿ ಮಂದಿರದಲ್ಲಿ ಕಸಾಪದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ  ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ರೇಖಾ ಮಹಾಜನ, ಸೋಮನಾಥಪ್ಪ ಅಸ್ಟೂರೆ, ಶಿವಾನಂದ ಗುಂದಗೆ, ಗಣಪತಿ ಭೂರೆ, ದಿಲೀಪ ಢವಳೆ ಇತರರಿದ್ದರು.
ಭಾಲ್ಕಿ ಪಟ್ಟಣದ ದೇವಿನಗರ ಭವಾನಿ ಮಂದಿರದಲ್ಲಿ ಕಸಾಪದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ರೇಖಾ ಮಹಾಜನ, ಸೋಮನಾಥಪ್ಪ ಅಸ್ಟೂರೆ, ಶಿವಾನಂದ ಗುಂದಗೆ, ಗಣಪತಿ ಭೂರೆ, ದಿಲೀಪ ಢವಳೆ ಇತರರಿದ್ದರು.
Published on: 

ಭಾಲ್ಕಿ: ದಸರಾ ಮತ್ತು ನವರಾತ್ರಿ ಕನ್ನಡಿಗರ ಹೆಮ್ಮೆಯ ಸಾಂಸ್ಕೃತಿಕ ಹಬ್ಬವಾಗಿವೆ ಎಂದು ವಿಶ್ರಾಂತ ಪ್ರಾಚಾಯೆರ್ ರೇಖಾ ಮಹಾಜನ ಹೇಳಿದರು.

ಪಟ್ಟಣದ ದೇವಿನಗರದ ಶ್ರೀ ಭವಾನಿ ದೇವಾಲಯದಲ್ಲಿ ತಾಲೂಕು ಕಸಾಪ, ಜಯಕರ್ನಾಟಕ ಜನಪರ ವೇದಿಕೆ, ಭವಾನಿ ದೇವಾಲಯ ನವರಾತ್ರಿ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಬ್ಬ ಮತ್ತು ಉತ್ಸವಗಳು ನಮ್ಮ ನೆಮ್ಮದಿಯ ಸಂಕೇತಗಳಾಗಿ ಆಚರಿಸುತ್ತೇವೆ. ಕನ್ನಡ ಸಾಹಿತ್ಯ ಪರಿಷತ್​ನವರು ಪ್ರತಿವರ್ಷ ಕವಿಗೋಷ್ಠಿ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿ, ನವರಾತ್ರಿ ನಿಮಿತ್ತ ಪ್ರತಿವರ್ಷ ತಾಲೂಕು ಪರಿಷತ್​ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಇದರಿಂದ ಗಡಿ ಭಾಗದಲ್ಲಿ ಕನ್ನಡ ಕಲಿಯಲು ಪ್ರೋತ್ಸಾಹಿಸುವಂತಾಗುತ್ತಿದೆ ಎಂದು ಹೇಳಿದರು.

ಉದ್ಯಮಿ ಸೋಮನಾಥಪ್ಪ ಅಸ್ಟೂರೆ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಮಾಜಿ ತಾಲೂಕು ಅಧ್ಯಕ್ಷ ಶಿವಾನಂದ ಗುಂದಗೆ, ಹಿರಿಯ ಸಾಹಿತಿ ಗಣಪತಿ ಭೂರೆ, ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ದಿಲೀಪ ಢವಳೆ, ಬಸವಭಾಗ್ಯ ಎಜುಕೇಷನ್​ ಮತ್ತು ಚಾರಿಟೇಬಲ್​ ಟ್ರಸ್ಟ್​ ಅಧ್ಯಕ್ಷೆ ಶೃತಿ ಸಂತೋಷ ಪಾಟೀಲ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಚಂದ್ರಕಾಂತ ತಳವಾಡೆ, ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿಪಾಟೀಲ, ಕುಪೇಂದ್ರ ಜಗಶೆಟ್ಟಿ, ಐಜಿಕ ಬಂಗಾರೆ, ಬಸವರಾಜ ಕುಸನೂರೆ, ಸುನಿತಾ ಮಮ್ಮಾ, ಚಂದ್ರಕಲಾ ಪ್ರಭು ಡಿಗ್ಗೆ ಇದ್ದರು. ಗಿಪ್ಸನ್​ ಕೋಟೆ ಮತ್ತು ತಂಡದವರಿಂದ ಸಂಗೀತ ಸಂಭ್ರಮ ನೆರವೇರಿತು. ಚಂದ್ರಕಾಂತ ತಳವಾಡೆ ಸ್ವಾಗತಿಸಿದರು. ಕುಪೇಂದ್ರ ಜಗಶೆಟ್ಟಿ ನಿರೂಪಣೆ ಮಾಡಿದರು. ಸಂತೋಷ ಬಿಜಿಪಾಟೀಲ ವಂದಿಸಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net