ನಾಯ್ಕ್ ಪಶು ವಿವಿ ಕುಲಪತಿ

ಜಿಪಂ ಸಿಇಒಗೆ ವಿನೋದಕುಮಾರ ಅಪ್ಪೆ ಮನವಿ ಪತ್ರ
bidar
ಬೀದರ್‌ನಲ್ಲಿ ಗುರುವಾರ ಪಶು ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ.ಎ.ಟಿ. ರಾಮಚಂದ್ರ ನಾಯ್ಕ್ (ನಡುವೆ ಇರುವವರು) ಅಧಿಕಾರ ಸ್ವೀಕರಿಸಿದರು. ವಿವಿ ಆಡಳಿತ ಮಂಡಳಿ ಸದಸ್ಯ ವಿಜಯಕುಮಾರ ಪಾಟೀಲ್ ಗಾದಗಿ, ಡಾ.ಕೆ.ಸಿ. ವೀರಣ್ಣ ಇದ್ದರು.
Published on: 

ಬೀದರ್: ಇಲ್ಲಿನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ (ಪ್ರಭಾರ)ಯಾಗಿ ಡಾ.ಎ.ಟಿ. ರಾಮಚಂದ್ರ ನಾಯ್ಕ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.

ಡಾ.ಕೆ.ಸಿ. ವೀರಣ್ಣ ಅಧಿಕಾರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಯ್ಕ್ ಅವರು ರಾಜ್ಯಪಾಲರ ಆದೇಶದನ್ವಯ ಜವಾಬ್ದಾರಿ ವಹಿಸಿಕೊಂಡರು.

ನಾಯ್ಕ್ ಅವರು ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯದಲ್ಲಿ 25 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ವಿಶ್ವವಿದ್ಯಾಲಯದ ಕಲ್ಯಾಣ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದು, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಅನುಭವ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net