ಸ್ತ್ರೀಯರ ಸ್ವಾವಲಂಬನೆಗೆ ಜ್ಞಾನವಿಕಾಸ ಪೂರಕ

ಹುಮನಾಬಾದ್​ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗುರುವಾರ ಏರ್ಪಡಿಸಿದ್ದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಸಾಧಕಿಯರನ್ನು ಸನ್ಮಾನಿಸಲಾಯಿತು. ತಾಪಂ ಇಒ ದೀಪಿಕಾ ನಾಯ್ಕರ್​, ಮಹಾಲಕ್ಷ್ಮೀ ಪಾಟೀಲ್​, ಡಾ.ರೂಪಲತಾ ಐನಾಪುರೆ, ದಿನೇಶ್​ ಪೂಜಾರಿ ಇತರರಿದ್ದರು.
ಹುಮನಾಬಾದ್​ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗುರುವಾರ ಏರ್ಪಡಿಸಿದ್ದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಸಾಧಕಿಯರನ್ನು ಸನ್ಮಾನಿಸಲಾಯಿತು. ತಾಪಂ ಇಒ ದೀಪಿಕಾ ನಾಯ್ಕರ್​, ಮಹಾಲಕ್ಷ್ಮೀ ಪಾಟೀಲ್​, ಡಾ.ರೂಪಲತಾ ಐನಾಪುರೆ, ದಿನೇಶ್​ ಪೂಜಾರಿ ಇತರರಿದ್ದರು.
Published on: 

ಹುಮನಾಬಾದ್​: ಮಹಿಳೆಯರು ಸ್ವಾವಲಂಬಿ ಮತ್ತು ಸ್ವಾಭಿಮಾನದ ಜೀವನ ನಡೆಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮ ಪೂರಕವಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೀಪಿಕಾ ನಾಯ್ಕರ್​ ಹೇಳಿದರು.

ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಿಂದ ಮಹಿಳೆಯರಲ್ಲಿ ಆರ್ಥಿಕ ಶಿಸ್ತು, ಉಳಿತಾಯ ಮತ್ತು ಸ್ವಾವಲಂಬನೆ ಕುರಿತು ಜಾಗೃತಿ ಮೂಡಿದೆ. ಹೆಣ್ಮಕ್ಕಳು ಯೋಜನೆ ಸೌಲಭ್ಯ ಸದುಪಯೋಗ ಮಾಡಿಕೊಂಡು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಹಾಲಕ್ಷ್ಮೀ ಅಭಿಷೇಕ ಪಾಟೀಲ್​ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ. ಆರೋಗ್ಯ ರಕ್ಷಣೆಗಾಗಿ ವಿಮೆ ಹೊಂದುವುದು ಮುಖ್ಯವಾಗಿದ್ದು, ಯೋಜನೆಯ ವಿಮಾ ಸೌಲಭ್ಯ ಅರ್ಹರು ಬಳಸಿಕೊಳ್ಳಬೇಕು ಎಂದರು.

ಜ್ಞಾನವಿಕಾಸ ವಿಭಾಗದ ನಿರ್ದೇಶಕ ದಿನೇಶ್​ ಪೂಜಾರಿ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶ, ಅನುಷ್ಠಾನ ಮತ್ತು ಮಾತೋಶ್ರೀ ಹೇಮಾವತಿ ಆಶಯ ಹಾಗೂ ಮಹಿಳೆಯರ ಆರೋಗ್ಯ, ಕ್ಯಾನ್ಸರ್​ ತಡೆಗೆ ಕ್ರಮ ಹಾಗೂ ಹೋಮಿಯೋಪಥಿ ಚಿಕಿತ್ಸೆ ಕುರಿತು ಮಾತೋಶ್ರೀ ಆಸ್ಪತ್ರೆ ವೈದ್ಯೆ ಡಾ.ರೂಪಲತಾ ಮಾಹಿತಿ ನೀಡಿದರು.

ಜಿಲ್ಲಾ ನಿರ್ದೇಶಕ ಮುರಳೀಧರ್​ ಎಚ್​.ಎಲ್​. ಅವರು ಸ್ವ ಉದ್ಯೋಗ, ಕೌಶಲ ತರಬೇತಿ, ಉದ್ಯಮಶೀಲತೆ, ಶಿಕ್ಷಣ, ಉಳಿತಾಯ ಮತ್ತು ಆರ್ಥಿಕ ಸಬಲೀಕರಣ ಕುರಿತು ಮಾತನಾಡಿದರು. ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಜ್ಯೋತಿ ಜೋಳದ, ಕ್ಷೇತ್ರ ಯೋಜನಾಧಿಕಾರಿ ವೀರೇಶ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net