ಬಿಎಸ್​ಎಸ್​ಕೆ ಪುನಶ್ಚೇತನಕ್ಕೆ ಸಿಎಂಗೆ ಮನವಿ

ಮಾಜಿ ಸಚಿವ ರಾಜಶೇಖರ ಪಾಟೀಲ್​ ನೇತೃತ್ವದಲ್ಲಿ ರೈತರ ನಿಯೋಗ ಭೇಟಿ
ಬೀದರ್​ ಸಹಕಾರ ಸಕ್ಕರೆ ಕಾರ್ಖಾನೆ  ಪುನಶ್ಚೇತನಗೊಳಿಸುವಂತೆ ಒತ್ತಾಯಿಸಿ ಮಾಜಿ ಸಚಿವ ರಾಜಶೇಖರ ಪಾಟೀಲ್​ ನೇತೃತ್ವದ ನಿಯೋಗ ಬುಧವಾರ ಬೆಂಗಳೂರಿನಲ್ಲಿ  ಸಿಎಂ ಡಿ.ಕೆ.ಶಿವಕುಮಾರ್​ ಅವರಿಗೆ ಮನವಿ ಸಲ್ಲಿಸಿತು. ಎಂಎಲ್​ ಸಿಗಳಾದ  ಡಾ.ಚಂದ್ರಶೇಖರ ಪಾಟೀಲ್​, ಭೀಮರಾವ ಪಾಟೀಲ್​, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಬ್ದುಲ್​ ಮನ್ನಾನ್​ ಶೇಠ್​,  ಅರವಿಂದಕುಮಾರ ಅರಳಿ, ಧನರಾಜ ತಾಳಂಪಳ್ಳಿ, ಶ್ರೀಮಂತರಾವ ಬಿರಾದಾರ, ಸಿದ್ರಾಮಪ್ಪ ಆಣದೂರೆ, ದಯಾನಂದ ಸ್ವಾಮಿ,  ರಾಜಶೇಖರ ಹಂದ್ರಾಳೆ, ಅರ್ಜುನ್​ ತಮಗಿಕರ್​, ಗುರುಲಿಂಗಯ್ಯ ಹಾಲಾ, ಝರ್ನಾರಡ್ಡಿ, ರಾಜು ಪಾಟೀಲ್​, ಮಲ್ಲಿಕಾರ್ಜುನ ಭಂಡಾರಿ, ಶಿವಕುಮಾರ ಚಳಕಾಪುರೆ, ಝರನು ಕಾವಲೆ, ಜಾನ್ಸನ್​ ಇತರರಿದ್ದರು.

Published on

ಹುಮನಾಬಾದ್​: ಬೀದರ್​ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್​ಎಸ್​ಕೆ) ಪುನಶ್ಚೇತನಗೊಳಿಸುವಂತೆ ಅಥವಾ ಎಲ್​ಆರ್​ಒಟಿ (ಔ್ಕಣಖ) ಆಧಾರದ ಮೇಲೆ ಗುತ್ತಿಗೆ ನೀಡುವಂತೆ ಒತ್ತಾಯಿಸಿ ಮಾಜಿ ಸಚಿವ ರಾಜಶೇಖರ ಪಾಟೀಲ್​ ನೇತೃತ್ವದ ರೈತರ ನಿಯೋಗ ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ವಿಧಾನಮಂಡಲದ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ನಿಯೋಗ, ಬಿಎಸ್​ಎಸ್​ಕೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಮೂಲಕ ಜಿಲ್ಲೆಯ ಕಬ್ಬು ಬೆಳೆಗಾರರು, ಕಾರ್ಮಿಕರು ಹಾಗೂ ಕಾರ್ಖಾನೆಯನ್ನೇ ಅವಲಂಬಿಸಿರುವ ಕುಟುಂಬಗಳ ಹಿತ ಕಾಪಾಡಬೇಕು ಎಂದು ಮನವಿ ಮಾಡಿತು.

ಕಾರ್ಖಾನೆಯ ಮೇಲಿರುವ ಅಪೆಕ್ಸ್​ ಬ್ಯಾಂಕ್​, ಬೀದರ್​ ಡಿಸಿಸಿ ಬ್ಯಾಂಕ್​ ಹಾಗೂ ಎಸ್​ಬಿಐ ಬ್ಯಾಂಕ್​ಗಳ ಬಡ್ಡಿ ಮೊತ್ತವನ್ನು ಮನ್ನಾ ಮಾಡಿದರೆ ಬಿಡ್​ದಾರರು ಮುಂದೆ ಬಂದು ಎಲ್​ಆರ್​ಒಟಿ ಆಧಾರದ ಮೇಲೆ ಕಾರ್ಖಾನೆಯನ್ನು ಗುತ್ತಿಗೆ ಪಡೆದು ಮರು ಆರಂಭಿಸಲು ಸಾಧ್ಯವಾಗಲಿದೆ ಎಂದು ನಿಯೋಗ ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು.

ರೈತರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಸಂಬಂಧಿಸಿದ ಎಲ್ಲ ಬ್ಯಾಂಕ್​ಗಳ ಅಧಿಕಾರಿಗಳನ್ನು ಕರೆದು ಸಮಾಲೋಚನೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ನಿಯೋಗ ತಿಳಿಸಿದೆ. ಇದಕ್ಕೂ ಮೊದಲು ನಿಯೋಗವು ಸಹಕಾರ ಸಚಿವ ಲಕ್ಷ$್ಮಣ ಸವದಿ ಅವರನ್ನು ಭೇಟಿ ಮಾಡಿ ಬಿಎಸ್​ಎಸ್​ಕೆ ಮೇಲಿನ ಹರಾಜು ಪ್ರಕ್ರಿಯೆ ರದ್ದುಪಡಿಸಿ, ಎಲ್​ಆರ್​ಒಟಿ ಆಧಾರದ ಮೇಲೆ ಕಾರ್ಖಾನೆ ಮರು ಆರಂಭಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿತ್ತು.

ವಿಧಾನ ಪರಿಷತ್​ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್​, ಭೀಮರಾವ ಪಾಟೀಲ್​, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಬ್ದುಲ್​ ಮನ್ನಾನ್​ ಶೇಠ್​, ವಿಧಾನ ಪರಿಷತ್​ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತರಾವ ಬಿರಾದಾರ, ರೈತ ಸಂಘದ ಗೌರವಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಬಿಎಸ್​ಎಸ್​ಕೆ ಕಾರ್ಮಿಕರಾದ ರಾಜಶೇಖರ ಹಂದ್ರಾಳೆ, ಅರ್ಜುನ್​ ತಮಗಿಕರ್​, ಗುರುಲಿಂಗಯ್ಯ ಹಾಲಾ, ಝರ್ನಾರಡ್ಡಿ, ರಾಜು ಪಾಟೀಲ್​, ಮಲ್ಲಿಕಾರ್ಜುನ ಭಂಡಾರಿ, ಶಿವಕುಮಾರ ಚಳಕಾಪೂರೆ, ಝರನು ಕಾವಲೆ, ಜಾನ್ಸನ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net