

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ಮಹಿಳೆಯೊಬ್ಬರು ಸಂಪುಟ ಸೇರುವ ಸಾಧ್ಯತೆಗಳು ಬಹುತೇಕ ಕ್ಷೀಣ ಆಗಿವೆ.
ಸಿಎಂ ಗೃಹ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗೃಹ ಲಕ್ಷ್ಮಿಯರ ಜತೆ ಸಂವಾದ ಸಭೆಯಲ್ಲಿ ಬೆಳಗಾವಿ ಅಧಿವೇಶನಕ್ಕೆ ಮುನ್ನ ಮಹಿಳಾ ಕೋಟಾ ಭರ್ತಿ ಆಗಲಿದೆ ಎಂದು ಸಿಎಂ ಭರವಸೆ ನೀಡಿದ್ದರು. ಆದರೆ ಅಧಿವೇಶನಕ್ಕೆ ನಾಲ್ಕು ದಿನ ಮಾತ್ರ ಉಳಿದಿದ್ದರೂ ಆ ಬಗ್ಗೆ ಸುಳಿವಿಲ್ಲ
ವಿಧಾನಸೌಧದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಗೆ ಸಿಎಂ ನೋಡೋಣ ಎಂದಷ್ಟೇ ಚುಟುಕಾಗಿ ಉತ್ತರಿಸಿದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಕೂಡ ಇತ್ತೀಚೆಗೆ ಹೇಳಿಕೆ ನೀಡಿ .ಸಮಯ ಬಂದಾಗ ಸಂಪುಟಕ್ಕೆ ಮಹಿಳೆಯೊಬ್ಬರು ಸೇರ್ಪಡೆ ಆಗಲಿದ್ದಾರೆ ಎಂದಿದ್ದರು.
ರಾಜ್ಯದಲ್ಲಿ ಸಚಿವ ಸ್ಥಾನ ಕೊಡಲಾಗಿಲ್ಲ ನಿಜ ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಮಹಿಳೆಯರನ್ನು ಕಡೆಗಣಿಸಿದೆ ಎಂದು ಭಾವಿಸುವುದು ಸರಿಯಲ್ಲ. ಎಐಸಿಸಿ ಹಂತದಲ್ಲಿ ಸೋನಿಯಾ ಗಾಂಧಿ ಅವರಿಲ್ಲವೇ ಎಂದು ಪ್ರಶ್ನಿಸಿದ್ದರು.