ಕಣಜ ಹುಳುಗಳ ದಾಳಿ: ಕೂಲಿ ಕಾರ್ಮಿಕ ಸಾವು

wasp
Published on

ವಿಟ್ಲ: ಕಣಜ ಹುಳಗಳು ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಕೂಲಿ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಮಾಣಿಲ ಗ್ರಾಮದ ಪಕಳಕುಂಜ ನಿವಾಸಿ ಕೃಷ್ಣ ನಾಯಕ್(50) ಮೃತ ದುರ್ದೈವಿ. ಸೋಮವಾರ ಸಂಜೆ ಪೆರುವಾಯಿ ಸಮೀಪ ಶೀಕೃಷ್ಣ ನಾಯಕ್​ರ ಮೇಲೆ ಕಣಜದ ಹುಳುಗಳು ದಾಳಿ ಮಾಡಿದ್ದವು. ಹತ್ತಾರು ಕಣಜದ ಹುಳುಗಳು ಕೃಷ್ಣ ಅವರನ್ನ ಕಚ್ಚಿದ್ದರಿಂದ ಅವರ ಸ್ಥಿತಿ ಗಂಭೀರವಾಗಿತ್ತು.

ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ, ಪತ್ನಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net