More

    ಕುಡಿವ ನೀರು ಪೂರೈಕೆಗೆ ಆದ್ಯತೆ ನೀಡಿ, ಜಿಪಂ ಸಿಇಒ ರಾಹಲ್​ ರತ್ನಂ ಪಾಂಡೆಯ ಸೂಚನೆ

    ಕೊಪ್ಪಳ: ಜಿಲ್ಲಾಂದ್ಯಂತ ಗ್ರಾಮೀಣ ಭಾಗಗಳಲ್ಲಿ ಕುಡಿವ ನೀರು ಪೂರೈಕೆಗೆ ಆದ್ಯತೆ ನೀಡುವಂತೆ ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಡಿವ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

    ಬೇಸಿಗೆ ತೀವ್ರತೆ ಹೆಚ್ಚಿದೆ. ಈಗಾಗಲೇ ತಾಪಮಾನ 40 ಡಿಗ್ರಿ ಸೆಲ್ಸಿಯಸ್​ ಮೀರುತ್ತಿದೆ. ಜನ-ಜಾನುವಾರುಗಳಿಗೆ ಕುಡಿವ ನೀರು ಕೊರತೆ ಆಗದಿರಲಿ. ಸಮಸ್ಯೆ ಕಂಡು ಬಂದಲ್ಲಿ ಹೊಸ ಬೋರ್​ವೆಲ್​ ಕೊರೆಸಿ. ಖಾಸಗಿ ಬೋರ್​ವೆಲ್​ ಬಾಡಿಗೆ ಪಡೆದು ನೀರು ಸರಬರಾಜು ಮಾಡಿ. ಖಾಸಗಿ ಬೋರ್​ವೆಲ್​ ಸಿಗದಿದ್ದಲ್ಲಿ ಟ್ಯಾಂಕರ್​ ಮೂಲಕ ನೀರು ಒದಗಿಸಿ. ಸದ್ಯ ಇರುವ ಬೋರ್​ವೆಲ್​ಗಳ ಸ್ಥಿತಿ ಪರಿಶೀಲಿಸಿ. ಸಣ್ಣಪುಟ್ಟ ದುರಸ್ಥಿ ಇದ್ದಲ್ಲಿ ಸರಿಪಡಿಸಿ. ಹೊಸದಾಗಿ ಬೋರ್​ವೆಲ್​ ಕೊರೆಸಲು ಅಗತ್ಯ ಇರುವ ಗ್ರಾಮಗಳ ಪಟ್ಟಿ ರಚಿಸಿ. 15 ದಿನದಲ್ಲಿ ಸಲ್ಲಿಸಿದಲ್ಲಿ ಅನುಮೋದನೆ ನೀಡಲಾಗುವುದು. ಪ್ರಸ್ತಾವನೆ ಜತೆಗೆ ನೀರಿನ ಲಭ್ಯತೆ ಕುರಿತು ಭೂ ವಿಜ್ಞಾನಿಗಳ ವರದಿ ಇರಲಿ. ವರದಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ಅನುಮತಿ ನೀಡಲಾಗುವುದು ಎಂದರು.

    ವಿಲ ಬೋರ್​ವೆಲ್​ಗಳ ಮಾಹಿತಿ ನೀಡಿ. ಅಲ್ಪ ನೀರಿರುವ ಕಾರಣ ವಿಲವೆಂದು ಕೈಚೆಲ್ಲಬೇಡಿ. ಬದಲಿಗೆ ಹ್ಯಾಂಡ್​ ಪಂಪ್​ ಅಳವಡಿಸಿ. ನೀರು ಬಂದಲ್ಲಿ ನೀರು ಕಡಿಮೆ ಇರುವ ಎಲ್ಲೆಡೆ ಹ್ಯಾಂಡ್​ ಪಂಪ್​ ಅಳವಡಿಸಲು ಅನುಕೂಲವಾಗಲಿದೆ. ಜಿಲ್ಲೆಯ ನಗರ ಪ್ರದೇಶದ 117 ಮತ್ತು ಗ್ರಾಮೀಣ ಭಾಗದ 560 ಅಂಗನವಾಡಿ ಕೇಂದ್ರಗಳಲ್ಲಿ ಕುಡಿವ ನೀರು ಸಮಸ್ಯೆ ಇದೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ನೀರು ಪೂರೈಕೆಗೆ ಆದ್ಯತೆ ನೀಡಿ. ಶಿಕ್ಷಣಾಧಿಕಾರಿಗಳು ಶಾಲೆಗಳಲ್ಲಿ ಕುಡಿವ ನೀರಿನ ಲಭ್ಯತೆ ವರದಿ ನೀಡಿ. ಸಮಸ್ಯೆ ಇದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ನಿರ್ದೇಶಿಸಿದರು.

    ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​ ಹಾಗೂ ಇತರ ಅಧಿಕಾರಿಗಳಿದ್ದರು.

    ಜಿಲ್ಲೆಯಲ್ಲಿನ ಶುದ್ಧ ಕುಡಿವ ನೀರಿನ ಟಕಗಳಲ್ಲಿ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಿ. ಸಮಸ್ಯೆ ಇದ್ದಲ್ಲಿ ವಾರದಲ್ಲಿ ಸರಿಪಡಿಸಿ. ಪ್ರತಿ ತಾಲೂಕಿಗೆ ಎರಡು ಟ್ಯಾಂಕರ್​ ಖರೀದಿಗೆ ತಾಪಂ ಅಧಿಕಾರಿಗಳು ಕ್ರಮವಹಿಸಿ. ಆರೋಗ್ಯಾಧಿಕಾರಿಗಳು ಕುಡಿವ ನೀರು ಮೂಲಗಳನ್ನು ಕಾಲ ಕಾಲಕ್ಕೆ ಪರೀಸಿ ವರದಿ ನೀಡಿ.

    ರಾಹುಲ್​ ರತ್ನಂ ಪಾಂಡೆಯ. ಜಿಪಂ ಸಿಇಒ ಕೊಪ್ಪಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts