More

    ಪತ್ರಿಕಾ ವಿತರಕರಿಗೆ ವಿಮಾ ಸೌಲಭ್ಯಕ್ಕೆ ನೋಂದಣಿ

    ಕೊಪ್ಪಳ: ಕಾರ್ಮಿಕ ಇಲಾಖೆಯಿಂದ ಪತ್ರಿಕಾ ವಿತರಕರಿಗಾಗಿ ರಾಜ್ಯ ದಿನ ಪತ್ರಿಕೆ ವಿತರಣೆ ಅಪಘಾತ ಪರಿಹಾರ ಮತ್ತು ವೈದ್ಯಕಿಯ ಸೌಲಭ್ಯ ಯೋಜನೆ ಜಾರಿಗೊಳಿಸಿದ್ದು, ಅರ್ಹ ವಿತರಕರು ಸದುಪಯೋಗ ಪಡಿಸಿಕೊಳ್ಳಿ. ವಿಜಯವಾಣಿ ಪತ್ರಿಕಾ ಬಳಗ ಇಲಾಖೆಯೊಂದಿಗೆ ಕೈ ಜೋಡಿಸಿ ವಿತರಕರ ನೋಂದಣಿ ಮಾಡಿಸುತ್ತಿರುವುದು ಅನುಕರಣೀಯ ಎಂದು ಕೊಪ್ಪಳ ಕಾರ್ಮಿಕ ನಿರೀಕ್ಷಕ ಶಿವಶಂಕರ್​ ತಳವಾರ ಹೇಳಿದರು.

    ನಗರದ ಕಾರ್ಮಿಕ ಕಚೇರಿಯಲ್ಲಿ ಕಾರ್ಮಿಕ ಇಲಾಖೆ ಹಾಗೂ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ಕೊಪ್ಪಳ ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿತರಕರ ನೋಂದಣಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

    ಅಸಂಟಿತ ವಲಯದಲ್ಲಿ ಪತ್ರಿಕಾ ವಿತರಕರು ಬರುತ್ತಾರೆ. ನಿತ್ಯ ಮನೆ ಮನೆಗೆ ತೆರಳಿ ಪತ್ರಿಕೆ ವಿತರಿಸುತ್ತಾರೆ. ದ್ವಿಚಕ್ರ ವಾಹನ ಬಳಸಿ ಓಡಾಟ ಮಾಡುತ್ತಾರೆ. ಅಪಘಾತಗಳು ಆಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ನಿಮಗಾಗಿ ಯೋಜನೆ ರೂಪಿಸಲಾಗಿದೆ.

    ನಿಮ್ಮ ಕುಟುಂಬಕ್ಕೆ ಸಾಮಾಜಿಕ ಭದ್ರತೆ ಕಲ್ಪಿಸುವುದು ಯೋಜನೆ ಮುಖ್ಯ ಉದ್ದೇಶ. 16 ರಿಂದ 59ವರ್ಷದೊಳಗಿನ ಆದಾಯ ತೆರಿಗೆ ಪಾವತಿದಾರರಲ್ಲದವರು ಯೋಜನೆಗೆ ಅರ್ಹರು. ಅಗತ್ಯ ದಾಖಲೆಗಳೊಂದಿಗೆ ಇಶ್ರಮ್​ ಪೋರ್ಟಲ್​ನಲ್ಲಿ ಪೇಪರ್​ ಬಾಯ್​ ಎಂದು ನೋಂದಣಿ ಮಾಡಿಕೊಳ್ಳಬೇಕು ಎಂದರು.

    ಪತ್ರಿಕಾ ವಿತರಕರಿಗೆ ವಿಮಾ ಸೌಲಭ್ಯಕ್ಕೆ ನೋಂದಣಿ

    ಅಪಘಾತದಿಂದ ಮೃತಪಟ್ಟಲ್ಲಿ, ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದರೆ 2 ಲಕ್ಷ ರೂ. ಹಾಗೂ ಅಪಘಾತ, ಮಾರಣಾಂತಿಕ ಕಾಯಿಲೆ, ಗಂಭೀರ ಕಾಯಿಲೆಯಿಂದ ಚಿಕಿತ್ಸೆ ಪಡೆದಲ್ಲಿ ವೈದ್ಯಕಿಯ ಮರುಪಾವತಿ 1 ಲಕ್ಷ ರೂ. ಸಿಗಲಿದೆ ಎಂದು ಮಾಹಿತಿ ನೀಡಿದರು.

    ಕಾರ್ಯಕ್ರಮದಲ್ಲಿ ವಿತರಕರಿಗೆ ನೋಂದಣಿ ಮಾಡಿಸಿ ಇ ಶ್ರಮ್​ ಕಾರ್ಡ್​ ವಿತರಿಸಲಾಯಿತು.

    ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂದ ಅಧ್ಯಕ್ಷ ಗವಿರಾಜ ಕಂದಾರಿ, ಉಪಾಧ್ಯಕ್ಷ ಮೆಹಬೂಬ್​ ಸಾಬ್​, ಕಾರ್ಯದರ್ಶಿ ಮಂಜುನಾಥ ಟಪಾಲ್​, ಖಜಾಂಚಿ ರವೀಂದ್ರ ಕಲಾಲ್​, ಗೌರವ ಸಲಹೆಗಾರರಾದ ಮಹೇಶ ಚಕ್ರಸಾಲಿ, ನಾಗರಾಜ ಕಲಾಲ್​, ವಿರುಪಾಕ್ಷಪ್ಪ ಮುರಳಿ,

    ರಮೇಶ ಚಕ್ರಸಾಲಿ, ರವಿ ಚಕ್ರಸಾಲಿ ವಿತರಕರಾದ ಕೃಷ್ಣ ದೊಡ್ಮನಿ, ಬಸವರಾಜ, ಶಿವಾನಂದ ಟಪಾಲ್​, ಪರಶುರಾಮ ಶ್ಯಾವಿ, ವಿಜಯವಾಣಿ ಜಿಲ್ಲಾ ವರದಿಗಾರ ರವೀಂದ್ರ ವಿ.ಕೆ., ಪ್ರಸರಣ ಪ್ರತಿನಿಧಿ ಮಂಜುನಾಥ ಇದ್ದರು.

    ಪತ್ರಿಕಾ ವಿತರಕರನ್ನು ಅಸಂಟಿತ ಕಾರ್ಮಿಕರೆಂದು ಪರಿಗಣಿಸಿ ಯೋಜನೆ ರೂಪಿಸಲಾಗಿದೆ. ವಿಜಯವಾಣಿ ಪತ್ರಿಕೆಯವರು ನಮ್ಮೊಂದಿಗೆ ಕೈ ಜೋಡಿಸಿ ವಿತರಕರಿಗೆ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಸಂತಸ ತಂದಿದೆ. ಎಲ್ಲ ಅರ್ಹ ವಿತರಕರು ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆಯಬೇಕು.

    ಸುಧಾ ಗರಗ. ಜಿಲ್ಲಾ ಕಾರ್ಮಿಕ ಅಧಿಕಾರಿ ಕೊಪ್ಪಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts