More

    ದ್ವೀತಿಯ ಪಿಯುಸಿ ಫಲಿತಾಂಶ: ಕಕ ಜಿಲ್ಲೆಗಳಲ್ಲಿ ಕೊಪ್ಪಳಕ್ಕೆ ದ್ವೀತಿಯ ಸ್ಥಾನ

    ಕೊಪ್ಪಳ: ದ್ವೀತಿಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿ ಪರೀೆ ಬರೆದ ಶೇ.80.83ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಜ್ಯದಲ್ಲಿ 22 ಸ್ಥಾನ ಕಾಯ್ದುಕೊಂಡಿರುವ ಜಿಲ್ಲೆ, ಕಲ್ಯಾಣ ಕರ್ನಾಟ ಜಿಲ್ಲೆಗಳಲ್ಲಿ ದ್ವೀತಿಯ ಸ್ಥಾನ ಪಡೆದಿರುವುದು ವಿಶೇಷ.

    ಕಳೆದೆರೆಡು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಲಿತಾಂಶ ಸುಧಾರಣೆ ಹಾದಿ ಹಿಡಿದಿದೆ. 2022ರಲ್ಲಿ ರಾಜ್ಯಮಟ್ಟದಲ್ಲಿ 20ನೇ ಸ್ಥಾನ ಪಡೆದಿದ್ದರೆ, ಕಳೆದ ಬಾರಿ 22ನೇ ಸ್ಥಾನಕ್ಕೆ ಕುಸಿದಿದೆ. ಆದರೆ, ಒಟ್ಟಾರೆ ಲಿತಾಂಶದಲ್ಲಿ ಶೇ.12ರಷ್ಟು ಹೆಚ್ಚಳವಾಗಿತ್ತು. ಈ ವರ್ಷ ರಾಜ್ಯಮಟ್ಟದ ರ್ಯಾಂಕ್​ನಲ್ಲಿ ಏರಿಕೆ ಅಥವಾ ಕುಸಿತ ಆಗದೇ 22ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಬದಲಿಗೆ ಶೇ.6.03ರಷ್ಟು ಲತಾಂಶದಲ್ಲಿ ಏರಿಕೆ ಕಂಡಿರುವುದು ತೃಪ್ತಿಕರ ವಿಷಯ.

    ಸಾಮಾನ್ಯ, ಪುನಾರಾವರ್ತಿತ ಮತ್ತು ಖಾಸಗಿ ಸೇರಿ 15,560 ವಿದ್ಯಾರ್ಥಿಗಳು ಈ ಬಾರಿ ಪರೀೆ ಬರೆದಿದ್ದು, 11,817 ಮಕ್ಕಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇ.75.94ರಷ್ಟು ಲಿತಾಂಶ ದಾಖಲಾಗಿದೆ. 13,435 ರೆಗ್ಯೂಲರ್​ ವಿದ್ಯಾರ್ಥಿಗಳಲ್ಲಿ 10,859 (ಶೇ.80.83) ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 6,017ಮಕ್ಕಳು ಪರೀೆಗೆ ಹಾಜರಾಗಿದ್ದು, 4,275 (ಶೇ.71.01), ವಾಣಿಜ್ಯ ವಿಭಾಗದಲ್ಲಿ 2,531 ವಿದ್ಯಾರ್ಥಿಗಳ ಪೈಕಿ 1,997(ಶೇ.78.9), ವಿಜ್ಞಾನ ವಿಭಾಗದಲ್ಲಿ 5,149 ಮಕ್ಕಳಲ್ಲಿ 4,691 (ಶೇ.91.11)ರಷ್ಟು ವಿದ್ಯಾಥಿಗಳು ತೇರ್ಗಡೆ ಹೊಂದಿದ್ದಾರೆ.

    ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. 7,002 ವಿದ್ಯಾರ್ಥಿಗಳಲ್ಲಿ 5,013 (ಶೇ.71.59) ರಷ್ಟು ಪಾಸಾದರೆ, 8,558 ವಿದ್ಯಾರ್ಥಿನಿಯರ ಪೈಕಿ 6,804 (ಶೇ.79.5) ಉತ್ತೀರ್ಣರಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 6,058 ಆಂಗ್ಲ ಮಾಧ್ಯಮ ಮಕ್ಕಳಲ್ಲಿ 5,382 (ಶೇ.88.84), ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ 9,502 ವಿದ್ಯಾರ್ಥಿಗಳಲ್ಲಿ 6,435 (ಶೇ.67.72) ಜನ ಪಾಸ್​ ಆಗಿದ್ದು, ಆಂಗ್ಲ ಮಾಧ್ಯಮದವರೇ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

    ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶದವರನ್ನು ಹಿಂದಿಕ್ಕಿದ್ದು, ಶೇ.1.05ರಷ್ಟು ಹೆಚ್ಚುವರಿ ಲಿತಾಂಶ ಪಡೆದಿದ್ದಾರೆ. 9,331 ನಗರ ಪ್ರದೇಶ ವಿದ್ಯಾರ್ಥಿಗಳಲ್ಲಿ 7,530 (ಶೇ.80.7) ಹಾಗೂ 4,104 ಗ್ರಾಮೀಣ ಮಕ್ಕಳಲ್ಲಿ 3,329 (ಶೇ.81.12) ತೇರ್ಗಡೆ ಹೊಂದುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts