More

    ನಶೆ ಮುಕ್ತ ಸಮಾಜ ಜಾಗೃತಿ ನಡಿಗೆ

    ಕೊಪ್ಪಳ: ಸಾಲಿಡಾರಿಟಿ ಯೂತ್​ ಮೂವ್​ಮೆಂಟ್​ನಿಂದ ನಗರದ ಲಾಲ ಬಹಾದ್ದೂರ ಶಾಸ್ತ್ರಿ ವೃತ್ತದಿಂದ ಅಶೋಕ ವೃತ್ತವರೆಗೆ ಸೋಮವಾರ ನಮ್ಮ ನಡಿಗೆ ನಶೆ ಮುಕ್ತ ಹಾಗೂ ಮಾದಕ ಮುಕ್ತ ಸಮಾಜದ ಕಡೆಗೆ ಜಾಗೃತಿ ಜಾಥಾ ನಡೆಯಿತು.

    ಸಾಲಿಡಾರಿಟಿ ಯೂತ್​ ಮೂವ್​ಮೆಂಟ್​ ರಾಜ್ಯಾಧ್ಯಕ್ಷ ಲಬೀದ್​ ಶಾಫಿ ಮಾತನಾಡಿ, ಇಂದು ಯುವಕರು ಅಮಲು ಪದಾರ್ಥ, ಮದ್ಯಪಾನ, ಮಾದಕ ದ್ರವ್ಯ ಚಟಗಳಿಗೆ ಬಲಿಯಾಗುತ್ತಿದ್ದಾರೆ. 12ನೇ ವಯಸ್ಸಿಗೆ ಡ್ರಗ್​ ದಾಸರಾಗುತ್ತಿರುವುದು ಆತಂಕಕಾರಿ. ಶಾಲೆ, ವಠಾರದವರೆಗೆ ಮಾದಕ ಜಾಲ ಆವರಿಸಿದೆ. ಚಟಕ್ಕೆ ದಾಸರಾದವರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 2020ರಲ್ಲಿ 9,169 ಯುವಕರು ಮಾದಕ ದ್ರವ್ಯ ಚಟದಿಂದ ಆತ್ನಹತ್ಯೆಗೆ ಶರಣಾಗಿದ್ದಾರೆ. ಇದನ್ನು ತಪ್ಪಿಸಬೇಕಿದೆ ಎಂದರು.

    ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ, ರಾಜ್ಯದಲ್ಲಿ ನಿತ್ಯ ಸರಾಸರಿ 16 ಡ್ರಗ್​ ಪ್ರಕರಣ ವರದಿಯಾಗುತ್ತಿವೆ. ಮಾದಕ ವಸ್ತುಗಳ ಸೇವನೆ, ಸ್ವಾಧಿನ ಮತ್ತು ವ್ಯವಹರಗಳ ಪ್ರಕರಣಗಳು ದಾಖಲಾಗುತ್ತಿದೆ. ಸಾವಿರ ಯುವಕರಲ್ಲಿ ಶೇ.47ರಷ್ಟು ಸಿಗರೇಟು ದಾಸರಾಗಿದ್ದಾರೆ. ಶೇ.20ರಷ್ಟು ಮಾದಕ ದ್ರವ್ಯ ಸೇವಿಸುತ್ತಿದ್ದಾರೆ. ಅವರಿಗೆ ಚಟದಿಂದ ಹೊರ ಬರುವುದು ತಿಳಿದಿಲ್ಲ. ಈ ಸಾಮಾಜಿಕ ಪಿಡುಗು ತೊಡೆದು ಹಾಕಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

    ಮಫ್ತಿ ನಜೀರ್​ ಅಹಮದ್​, ಎಂ.ಲಾಯಕ್​ ಅಲಿ, ಲಬೀದ್​ ಶಾಫಿ, ಆದಿಲ್​ ಪಟೇಲ್​, ಆಸಿಫ್​ ಕರ್ಕಿಹಳ್ಳಿ, ಅಬ್ದುಲ್​ ಹಸೀಬ್​, ಜಕ್ರಿಯಾ, ಇಲಿಯಾಸ್​, ಗೌಸ್​ ಪಟೇಲ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts