More

    ಅಜ್ಜನ ಜಾತ್ರೆಗೆ 251 ಕ್ವಿಂಟಾಲ್​ ಮಾದಲಿ ಸಿದ್ಧತೆ

    ಕೊಪ್ಪಳ: ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ನಡೆವ ಮಹಾ ದಾಸೋಹಕ್ಕೆ ಗವಿಸಿದ್ದೇಶ್ವರ ಗೆಳೆಯರ ಬಳಗದಿಂದ 251 ಕ್ವಿಂಟಾಲ್​ ಮಾದಲಿ ಸಿದ್ಧಪಡಿಸಲಾಗುತ್ತಿದೆ.

    ಗೆಳೆಯರ ಬಳಗ 14ವರ್ಷದಿಂದ ನಿರಂತರ ಮಾದಲಿ ಸೇವೆ ಮಾಡುತ್ತಿದ್ದಾರೆ. ಆರಂಭದಲ್ಲಿ 51 ಕ್ವಿಂಟಾಲ್​ನಿಂದ ಆರಂಭವಾದ ಸೇವೆ ಪ್ರಸಕ್ತ ವರ್ಷ 251 ಕ್ವಿಂಟಾಲ್​ ತಲುಪಿದೆ. ಮಾದಲಿ ತಯಾರಿಕೆಗೆ ವಿವಿಧ ಹಳ್ಳಿಗಳಿಗೆ ಸಾಮಗ್ರಿ ಪೂರೈಸಲಾಗಿದೆ. 125 ಕ್ವಿಂಟಾಲ್​ ಬೆಲ್ಲ, 100 ಕ್ವಿಂಟಾಲ್​ ಹಿಟ್ಟು ಬಳಸಲಾಗಿದೆ. 300 ರಿಂದ 400 ಜನ ಸೇವೆಗೈಯುತ್ತಿದ್ದಾರೆ. ಜ.26 ರಂದು ಮಾದಲಿ ಗವಿಮಠ ದಾಸೋಹಕ್ಕೆ ಆಗಮಿಸಲಿದೆ.

    ಸ್ವಯಂ ಉದ್ಯೋಗ ಜಾಗೃತಿಗಾಗಿ ಈ ಬಾರಿ ಮಠದಿಂದ ಕಾಯಕ ದೇವೋ ಭವ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಅಂಗವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ಜಿಲ್ಲಾದ್ಯಂತ 106 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.

    ಪದವಿ ವಿಭಾಗದಲ್ಲಿ ಎಸ್​.ಜೆ.ಜಿ ವೈದ್ಯಕಿಯ ಮಹಾವಿದ್ಯಾಲಯ ಕೊಪ್ಪಳದ ಅಭೀಷೇಕ್​ ಅನ್ನದಾನಿ (ಪ್ರಥಮ), ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಾಗೀರಥಿ (ದ್ವೀತಿಯ), ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇರಕಲಗಡದ ಸವಿತಾ ತಳಬಾಳ (ತೃತೀಯ) ಸ್ಥಾನ ಪಡೆದಿದ್ದಾರೆ.
    ಪಿಯು ವಿಭಾಗದಲ್ಲಿ ಹಲಗೇರಿ ಸರ್ಕಾರಿ ಪಿಯು ಕಾಲೇಜಿನ ಕವಿತ ಗುಳದಳ್ಳಿ (ಪ್ರಥಮ), ಕೊಪ್ಪಳ ಸರ್ಕಾರಿ ಪಿಯು ಕಾಲೇಜಿನ ಮಧುಮತಿ ಆರ್​.ಕೆ. (ದ್ವೀತಿಯ), ಕೊಪ್ಪಳದ ಮರಿಶಾಂತವೀರ ಪಿಯು ಕಾಲೇಜಿನ ಜಗದೀಶ ಎನ್​.ಎಚ್​.(ತೃತೀಯ) ಸ್ಥಾನ ಪಡೆದಿದ್ದಾನೆ.

    ಪ್ರೌಢಶಾಲಾ ವಿಭಾಗದಲ್ಲಿ ಟಣಕನಕಲ್​ನ ಸರ್ಕಾರಿ ಆದರ್ಶ ವಿದ್ಯಾಲಯದ ಶಾಂಭವಿ ಪತ್ತಾರ (ಪ್ರಥಮ), ಹಲಗೇರಿ ರಾಜೇಶ್ವರಿ ಪ್ರೌಢ ಶಾಲೆಯ ಶ್ರೀದೇವಿ ಮೈನಳ್ಳಿ (ದ್ವೀತಿಯ), ಸಂಕನೂರಿನ ಸರ್ಕಾರಿ ಪ್ರೌಢಶಾಲೆಯ ಸಂಗೀತ ಕಲ್ಲೂರು (ತೃತೀಯ) ಸ್ಥಾನ ಪಡೆದಿದ್ದಾರೆ. ವಿಜೇತರನ್ನು ಜ.24ರಂದು ಜರುಗುವ ಜಾಗೃತಿ ಜಾಥಾ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಗುವುದೆಂದು ಶ್ರೀಮಠ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts