More

    ಲೋಕಸಭೆಗೆ 12ರಂದು ಅಧಿಸೂಚನೆ, ಡಿಸಿ ನಲಿನ್​ ಅತುಲ್​ ಹೇಳಿಕೆ

    ಕೊಪ್ಪಳ: ಲೋಕಸಭೆ ಚುನಾವಣೆಗೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಏ.12ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಹೇಳಿದರು.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಚುನಾವಣೆ ತಯಾರಿ ಕುರಿತು ಮಾಹಿತಿ ನೀಡಿ ಮಾತನಾಡಿದರು.

    ಏ.12ರಿಂದ 19ವರೆಗೆ ನಾಮಪತ್ರ ಸಲ್ಲಿಕೆ, ಏ.20ರಂದು ನಾಮತ್ರ ಪರಿಶೀಲನೆ, ಏ.22ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ವಾಪಸ್​ ಪಡೆಯಲು ಅವಕಾಶ ಇರಲಿದೆ. ಬಳಿಕ ಅಭ್ಯರ್ಥಿಗಳಿಗೆ ಚಿಹ್ನೆ ವಿತರಿಸಲಾಗುವುದು. ಮೇ 7ರಂದು ಮತದಾನ ಹಾಗೂ ಜೂನ್​ 4ರಂದು ಮತ ಎಣಿಕೆ ಇರಲಿದೆ. ಚುನಾವಣಾ ಕರ್ತವ್ಯಕ್ಕೆ 1,681 ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿ.ಆರ್​.ಓ), 1,681 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ (ಎ.ಪಿ.ಆರ್​.ಓ) 3,362 ಮತಗಟ್ಟೆ ಅಧಿಕಾರಿಗಳು (ಪಿಓ) ಒಟ್ಟು 6,724 ಸಿಬ್ಬಂದಿ ನೇಮಿಸಲಾಗಿದೆ. ಏ.8ರಂದು ಬೆಳಗ್ಗೆ 10:30ಕ್ಕೆ ಸಂಬಂಧಪಟ್ಟ ವಿಧಾನಸಭಾಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಅಧಿಕಾರಿಗಳಿಗೆ ತರಬೇತಿ ಆಯೋಜಿಸಲಾಗಿದೆ ಎಂದರು.

    ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರ ಒಳಗೊಂಡು 1,317 ಮತಗಟ್ಟೆಗಳಿದ್ದು, 1,628 ಬ್ಯಾಲೆಟ್​ ಯೂನಿಟ್​, 1,628 ಕಂಟ್ರೋಲ್​ ಯೂನಿಟ್​, 1,723 ವಿವಿ ಪ್ಯಾಟ್​ ನೀಡಿದ್ದು, ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ವಿಕಲಚೇತನ, 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಅಂಚೆ ಮತದಾನಕ್ಕೆ ಅವಕಾಶ ಇದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 38,294 ಮತದಾರರಿದ್ದು, 18,456 ಮತದಾರರಿಗೆ ನಮೂನೆ- 12ಡಿ ನೀಡಲಾಗಿದೆ. 19,838ಗೆ ವಿತರಿಸಿಲ್ಲ. 2,342 ಮತದಾರರು ಅಂಚೆ ಮತ ಪತ್ರ ಪಡೆದರೆ, 15,885 ಮತದಾರರು ತಿರಸ್ಕರಿಸಿದ್ದಾರೆಂದು ಮಾಹಿತಿ ನೀಡಿದರು.

    ಮತದಾರರಿಗೆ ಮತ ಕೇಂದ್ರಗಳಲ್ಲಿ ಅಗತ್ಯ ನೆರಳು, ಕುಡಿವ ನೀರು, ಶೌಚಗೃಹ, ರ್ಯಾಂಪ್​ ಸೌಲಭ್ಯ ಕಲ್ಪಿಸಲಾಗಿದೆ. 49 ್ಲೆಯಿಂಗ್​ ಸ್ಕಾ$್ವಡ್​, 32 ಚೆಕ್​ಪೋಸ್ಟ್​, 27 ವಿಡಿಯೋ ಕಣ್ಗಾವಲು ತಂಡ, 168 ಸೆಕ್ಟರ್​ ಅಧಿಕಾರಿಗಳನ್ನು ನೇಮಿಸಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂನೆ ಆಗದಂತೆ ನಿಗಾವಹಿಸಲಾಗಿದೆ. ಮಾ.16ರಿಂದ ಏ.1ವರೆಗೆ 82.92 ಲಕ್ಷ ರೂ. ನಗದು, 4,011.68 ಲೀ. ಮದ್ಯ ಜಪ್ತಿ ಮಾಡಿದ್ದು 6 ಪ್ರಕರಣ ದಾಖಲಿಸಲಾಗಿದೆ. ಮತದಾರರ ಸಹಾಯಕ್ಕಾಗಿ ಡಿಸಿ ಕಚೇರಿಯಲ್ಲಿ 1950 ಟೋಲ್​ ಫ್ರೀ ಸಂಖ್ಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.
    ಚುನಾವಣಾ ವಿಭಾಗದ ರವಿಕುಮಾರ ವಸ್ತ್ರದ್​, ನಾಗರಾಜ, ಪ್ರಸನ್ನ ಇತರರಿದ್ದರು.

    ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ: ಮತದಾನ ಪ್ರಮಾಣ ಹೆಚ್ಚಳಕ್ಕೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಮತಗಟ್ಟೆ ವ್ಯಾಪ್ತಿಗೆ ತೆರಳಿ ಅಲ್ಲಿನ ಮತದಾರರಿಗೆ ವಿಶೇಷ ಜಾಗೃತಿ ಮೂಡಿಸಲಾಗುವುದು. ಮತಗಟ್ಟೆಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಪ್ರಸ್ತುತ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಮತಗಟ್ಟೆಗಳಲ್ಲಿ ತಂಪಾದ ಕುಡಿವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ನಗರ ಪ್ರದೇಶದ ಕಡಿಮೆ ಮತದಾನ ನಡೆದ ಮತಗಟ್ಟೆಗಳಲ್ಲಿ ಮತದಾರರನ್ನು ಸೆಳೆಯಲು ಮಜ್ಜಿಗೆ, ಟೀ ಅಥವಾ ಬೇರೆ ವ್ಯವಸ್ಥೆ ಕಲ್ಪಿಸುವ ಚಿಂತನೆ ಇದೆ. ಈ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲಿಸಿಕೊಂಡು ಕ್ರಮವಹಿಸಲಾಗುವುದು ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ತಿಳಿಸಿದರು.

    ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಏ.1ರ ಅಂತ್ಯಕ್ಕೆ 9,15,535 ಪುರುಷ, 9,42,442 ಮಹಿಳಾ 135 ಇತರ, ಒಟ್ಟು 18,58,112 ಮತದಾರರಿದ್ದಾರೆ. ಇದರಲ್ಲಿ 48,220 ಯುವ ಮತದಾರರು, 25,734 ವಿಕಲಚೇತನ ಮತದಾರರು, 85 ವರ್ಷ ಮೇಲ್ಪಟ್ಟ 12,904 ಮತದಾರರಿದ್ದಾರೆ. 615 ಸೇವಾ ಮತದಾರರಿದ್ದಾರೆ.

    ನಲಿನ್​ ಅತುಲ್​. ಕೊಪ್ಪಳ ಡಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts