More

    ಬರ ನಿರ್ವಹಣೆಗೆ ಅಗತ್ಯ ಕ್ರಮ, ಡಿಸಿ ನಲಿನ್​ ಅತುಲ್​ ಹೇಳಿಕೆ

    ಕೊಪ್ಪಳ: ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಅಗತ್ಯ ಕ್ರಮ ವಹಿಸಲಾಗಿದೆ. ಸಹಾಯವಾಣಿಗೆ ಬಂದ ಕರೆಗಳಿಗೆ ತಕ್ಷಣವೇ ಪರಿಹಾರ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ತಿಳಿಸಿದರು.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬರ ನಿರ್ವಹಣೆ ಕಾರ್ಯಕ್ರಮ ಕುರಿತು ಮಂಗಳವಾರ ಮಾಹಿತಿ ನೀಡಿ ಮಾತನಾಡಿದರು.

    ಜಿಲ್ಲೆಯಲ್ಲಿ 2,334 ಸರ್ಕಾರಿ, 6,366 ಖಾಸಗಿ ಬೋರ್​ವೆಲ್​ಗಳಿದ್ದು, 898 ಖಾಗಿ ಬೋರ್​ವೆಲ್​ಗಳನ್ನು ಬಾಡಿಗೆ ಪಡೆಯಲು ಗುರುತಿಸಿದ್ದು, 150 ಬೋರ್​ವೆಲ್​ ಮಾಲಿಕರೊಂದಿಗೆ ಕರಾರು ಪತ್ರ ಮಾಡಿಕೊಂಡಿದ್ದೇವೆ. ಮುಂದಿನ 3 ತಿಂಗಳಲ್ಲಿ ಜಿಲ್ಲಾದ್ಯಂತ 151 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗುವ ಸಾಧ್ಯತೆಯಿದೆ. ಸದ್ಯ 28 ಗ್ರಾಪಂಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಕೊಪ್ಪಳ, ಕುಕನೂರು ತಾಲೂಕಿನ 7 ಗ್ರಾಮಗಳಲ್ಲಿ ಸಮಸ್ಯೆಯಾಗಿದ್ದು, ನಿತ್ಯ 9 ಟ್ಯಾಂಕರ್​ಗಳ ಮೂಲಕ 34 ಟ್ರಿಪ್​ ನೀರು ಪೂರೈಸಲಾಗುತ್ತಿದೆ. 33 ಗ್ರಾಮಗಳಲ್ಲಿ 38 ಖಾಸಗಿ ಬೋರ್​ವೆಲ್​ ಬಾಡಿಗೆ ಪಡೆಯಲಾಗಿದೆ ಎಂದರು.

    ಟ್ಯಾಂಕರ್​ ನೀರಿಗಾಗಿ 25 ಲಕ್ಷ ರೂ., ಏಳು ತಾಲೂಕುಗಳ ತಹಸೀಲ್ದಾರ್​ ಖಾತೆಯಲ್ಲಿ ತಲಾ 50 ಲಕ್ಷ ರೂ., ಡಿಸಿ ಖಾತೆಯಲ್ಲಿ 19.55 ಕೋಟಿ ರೂ. ಹಾಗೂ ನಗರ, ಸ್ಥಳಿಯ ಸಂಸ್ಥೆಗಳಲ್ಲಿ 20-30 ಲಕ್ಷ ರೂ. ಹಣ ಮೀಸಲಿಡಲಾಗಿದೆ. 4,80,598.5 ಮೆಟ್ರಿಕ್​ ಟನ್​ ಮೇವು ಲಭ್ಯವಿದ್ದು 32 ವಾರಕ್ಕೆ ಸಾಕಾಗಲಿದೆ. 26,659 ಮೇವು ಕಿಟ್​ ದಾಸ್ತಾನಿದ್ದು, 17,609 ಕಿಟ್​ ರೈತರಿಗೆ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಮೇವು ಬ್ಯಾಂಕ್​ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನರ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ಆರಂಭಿಸಿದ್ದು, ಈವರೆಗೆ 314 ದೂರುಗಳು ಬಂದಿವೆ. ಇವುಗಳಲ್ಲಿ 182 ಪೈಪ್​ಲೈನ್​ ದುರಸ್ಥಿ, 91 ಕುಡಿವ ನೀರು, 41 ಮೋಟಾರ್​ ದುರಸ್ಥಿಗೆ ಸಂಬಂಧಿಸಿದ್ದು, 310ಕ್ಕೆ ಪರಿಹಾರ ಒದಗಿಸಲಾಗಿದೆ. 4 ಬಾಕಿ ಇವೆ ಎಂದು ಮಾಹಿತಿ ನೀಡಿದರು.

    ತಹಸೀಲ್ದಾರ್​, ತಾಪಂ ಇಒ ಹಾಗೂ ಗ್ರಾಮ ಮಟ್ಟದಲ್ಲಿ ಟಾಸ್ಕ್​ೋರ್ಸ್​ ಸಮಿತಿ ರಚಿಸಲಾಗಿದೆ. ಪ್ರತಿ ಮಂಗಳವಾರ ಮತ್ತು ಬುಧವಾರ ಗ್ರಾಮ ಮಟ್ಟದ ಕಾರ್ಯಪಡೆ ಮತ್ತು ಪ್ರತಿ ಗುರುವಾರ ತಾಲ್ಲೂಕಾ ಮಟ್ಟದ ಕಾರ್ಯಪಡೆ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿ ಶುಕ್ರವಾರ ಸಭೆ ನಡೆಸಿ ಪ್ರಗತಿ ಪರಿಶೀಲಿಸಲಾಗುತ್ತಿದೆ. ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು, ಪಶು ಸಖಿ, ಕೃಷಿ ಸಖಿ ಮತ್ತು ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಇದ್ದರು.

    ಸಹಾಯವಾಣಿ ಸಂಖ್ಯೆಗಳು : ಡಿಸಿ ಕಚೇರಿ ಮೊ.ಸಂ. 7676732001, ಕೊಪ್ಪಳ ತಾಲೂಕು ಕಚೇರಿ ಮೊಸಂ.9380252346, ಯಲಬುರ್ಗಾ ಮೊ.ಸಂ. 9448833207, ಕುಷ್ಟಗಿ ಮೊ.ಸಂ. 9845791349, ಕನಕಗಿರಿ ಮೊ.ಸಂ.9900433012, ಕುಕನೂರು ಮೊ.ಸಂ.8050303495, ಗಂಗಾವತಿ ಮೊ.ಸಂ.9740793877, ಕಾರಟಗಿ ಮೊ.ಸಂ.9743600343, ನಗರ, ಸ್ಥಳಿಯ ಸಂಸ್ಥೆಗಳು ಕೊಪ್ಪಳ: 08539-230192, ಭಾಗ್ಯನಗರ: 08539-230243, ಕುಕನೂರು: 8197396725, 8431363187, ಯಲಬುರ್ಗಾ: 9880524225, 9743277571, ಕುಷ್ಟಗಿ: 08536-267041, ತಾವರಗೇರಾ: 990057212, 8971014351, ಕಾರಟಗಿ: 08533-274232, ಕನಕಗಿರಿ: 8951133577, ಗಂಗಾವತಿ: 08533-230240, 8050428081 ಇದ್ದು, ಸಾರ್ವಜನಿಕರು ಬರ ನಿರ್ವಹಣೆ ಸಮಸ್ಯೆಗಳಿಗೆ ಕರೆ ಮಾಡಿ ಪರಿಹಾರ ಪಡೆಯಬಹುದು ಎಂದು ಡಿಸಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts