More

    ಕೊಪ್ಪಳ‌ ಬಿಜೆಪಿ‌ ಜಿಲ್ಲಾ‌ ಅಧ್ಯಕ್ಷರಾಗಿ ನವೀನ್ ಗುಳಗಣ್ಣನವರ್ ನೇಮಕ

    ಕೊಪ್ಪಳ: ಬಹು ನಿರೀಕ್ಷತ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ ಕೊನೆಗೂ ನವೀನ್ ಗುಳಗಣ್ಣನವರ್‌ಗೆ ಒಲಿದಿದೆ. ಹಲವರು ರೇಸ್ ನಲ್ಲಿ ಇದ್ದರೂ ಅಂತಿಮವಾಗಿ ನವೀನ್‌ ನೇಮಕವಾಗಿದ್ದು, ಜಿಲ್ಲೆಯಲ್ಲು ಬಿಜೆಪಿ ಹೈಕಮಾಂಡ್ ಕಾರ್ಯಕರ್ತರು ಹಾಗೂ ಯುವಪಡೆಗೆ ಮಣೆ ಹಾಕಿದೆ.

    ಪಕ್ಷದ ಯುವಮೋರ್ಚಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಸೇವೆ ಸಲ್ಲಿಸಿದ್ದಾರೆ. ತಂದೆ ಮಾಜಿ ಶಾಸಕ ಈಶಣ್ಣ ಗುಳಗಣ್ಣನವರ್ ಜಿಲ್ಲೆಯಲ್ಲಿ ಬಿಜೆಪಿಗೆ ಒಂದು ನೆಲೆ ಕಾಣಿಸಿದವರು. ದುರ್ದೈವವೆಂದರೆ ಅವರು ಶಾಸಕರಾಗಿ ಆಯ್ಕೆಯಾದರೂ ಅನಾರೋಗ್ಯಕ್ಕೆ ತುತ್ತಾದರು. ಪಕ್ಷಕ್ಕೆ ಸಲ್ಲಿಸಿದ ಶ್ರಮದ ಫಲ ದೊರೆತ ವೇಳೆ ಅನುಭವಿಸದಂತಾಗಿದ್ದು ಪಕ್ಷ ನಿಷ್ಠರಲ್ಲಿ‌ ಬೇಸರ ತರಿಸಿತ್ತು.

    ಈಶಣ್ಣ ಪುತ್ರ ನವೀನ್ ಕಳೆದೊಂದು ದಶಕದಿಂದ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಗಾಗಿ‌ ಪೈಪೋಟಿ ನಡೆಸಿದ್ದಾರೆ. ಹೀಗಿದ್ದರೂ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿ ಕೆಲಸ ಮಾಡಿದ್ದಾರೆ. ಇಷ್ಟು ವರ್ಷದ ತಾಳ್ಮೆಯ ತಪಸ್ಸಿಗೆ ಈಗ ಜಿಲ್ಲಾಧ್ಯಕ್ಷ ಪಟ್ಟ ವರವಾಗಿ ದೊರೆತಿದೆ.

    ಸೌರ ಮಂಡಲದ‌ ಅಧಿಪತಿ ಸೂರ್ಯ ತನ್ನ ಫಥ ಬದಲಿಸುವ ಶುಭ ದಿನವಾದ ಮಕರ ಸಂಕ್ರಾಂತಿಯಂದು ಬಿಜೆಪಿ ರಾಜ್ಯ ಘಟಕ‌ ಎಲ್ಲ‌ ಜಿಲ್ಲೆಗಳ‌ ಅಧ್ಯಕ್ಷರ ಘೋಷಣೆ ಮಾಡಿದೆ. ಕೊಪ್ಪಳಕ್ಕೆ ನವೀನ್ ನೇಮಕವಾಗಿದ್ದಾರೆ.

    ಉಳಿದಂತೆ ಜಿಲ್ಲಾಧ್ಯಕ್ಷ‌ ಸ್ಥಾನಕ್ಕೆ ಮಾಜಿ‌ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ರಮೇಶ ನಾಡಿಗೇರ, ಮಹೇಶ ಅಂಗಡಿ, ಚಂದ್ರಶೇಖರ ಕವಲೂರು ಸೇರಿ ಒಂಭತ್ತು ಆಕಾಂಕ್ಷಿಗಳಿದ್ದರು. ಕೆಲವರು ದಿಲ್ಲಿವರೆಗೂ ತೆರಳಿ ಪೈಫೋಟಿ ನೀಡಿದ್ದರು. ಅಂತಿಮವಾಗಿ ನವೀನ್ ಗೆ ಬಿಜೆಪಿ ಮಣೆ ಹಾಕಿರುವುದು ವಿಶೇಷ.

    ಇಷ್ಟು ವರ್ಷ ಪಕ್ಷವಹಿಸಿದ ಎಲ್ಲ ಜವಾಬ್ದಾರಿ ನಿಭಾಯಿಸಿದ್ದೇನೆ. ಎಲ್ಲ ಹಂತದಲ್ಲು ತಾಳ್ಮೆ ಕಾಯ್ದುಕೊಂಡಿರುವೆ. ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದು ಹರ್ಷದ ಜತೆಗೆ ತಾಳ್ಮೆ ಹೆಚ್ಚಿಸಿದೆ. ಪಕ್ಷ ಸಂಘಟನೆ ಜತೆಗೆ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುವೆ.

    ನವೀನ್ ಗುಳಗಣ್ಣನವರ್‌. ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts