More

    ಭಾರತದ ಸನ್ಯಾಸ ಪರಂಪರೆಯಲ್ಲಿ ವಿವೇಕಾನಂದರು ಮಾಣಿಕ್ಯ

    ಚಿಕ್ಕಮಗಳೂರು: ಹಿಂದು ಧರ್ಮ ಚಲನಶೀಲಗೊಳಿಸಿದ್ದ ಸ್ವಾಮಿ ವಿವೇಕಾನಂದರು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ವಿಶ್ವಕ್ಕೇ ಪರಿಚಯಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

    ನಗರದ ಕುವೆಂಪು ಕಲಾ ಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಭಾರತದ ಸನ್ಯಾಸ ಪರಂಪರೆಯಲ್ಲಿ ವಿವೇಕಾನಂದರು ಮಾಣಿಕ್ಯವಿದ್ದಂತೆ. ಇವರಷ್ಟು ಹಿಂದು ಧರ್ಮ ಟೀಕಿಸಿದವರು ಮತ್ತೊಬ್ಬರಿಲ್ಲ. ಧರ್ಮ ಟೀಕಿಸುವ ಉದ್ದೇಶ ಅವರಿಗಿರಲಿಲ್ಲ. ಆದರೆ ಧರ್ಮದ ಹೆಸರಲ್ಲಿ ನಡೆಯುವ ಅಸ್ಪೃಶ್ಯತೆ, ಕಂದಾಚಾರಗಳು ದೂರಾಗಿ ಉತ್ತಮ ಸಮಾಜ ನಿರ್ವಣದ ಉದ್ದೇಶ ಅವರಿಗಿತ್ತು ಎಂದರು.

    ಧರ್ಮದಲ್ಲಿದ್ದ ಜಡತ್ವಕ್ಕೆ ಚಲನಶೀಲತೆ ತುಂಬಿ ಗೊಡ್ಡು ಆಚರಣೆಗಳನ್ನು ಅವರು ಸದಾ ವಿಮಶಿಸುತ್ತಿದ್ದರು. ಅವರು ಚಿಕಾಗೋದಲ್ಲಿ ಮಾಡಿದ ಭಾಷಣ ಭಾರತವನ್ನು ವಿದೇಶಿಗರು ನೋಡುವ ದೃಷ್ಟಿಕೋನವನ್ನೇ ಬದಲಿಸಿತು. ಅನೇಕ ಸಂಕೊಲೆ, ಬ್ರಿಟಿಷರ ದಾಸ್ಯ, ಗುಲಾಮಗಿರಿ ಆಗ ಇತ್ತು. ವಿವೇಕರು ಆತ್ಮ ವಿಸ್ಮೃತಿ ದೂರ ಮಾಡಿ ಯುವಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದರು ಎಂದು ಬಣ್ಣಿಸಿದರು.

    ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಉಪನ್ಯಾಸ ನೀಡಿ, ಯುವಕರು ದೇಹ ಪ್ರೇಮಕ್ಕಿಂತ ದೇಶಭಕ್ತಿ ಬೆಳೆಸಿಕೊಳ್ಳಿ. ಇಂದಿನ ದಿನಗಳಲ್ಲಿ ಜಾತಿಗೆ ಒಬ್ಬೊಬ್ಬರು ಧರ್ಮ ಗುರುಗಳಿದ್ದಾರೆ. ಆದರೆ ದೇಶಕ್ಕೆ ಇರುವ ಒಬ್ಬರೇ ಒಬ್ಬ ಜಗತ್ ಗುರು ಎಂದರೆ ಅದು ಸ್ವಾಮಿ ವಿವೇಕಾನಂದ ಮಾತ್ರ ಎಂದರು.

    ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ, ವಿವೇಕಾನಂದರ 39 ವರ್ಷಗಳ ಸಾಧನೆ ಅಪಾರ. ಅವರ ಚಿಂತನೆ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು. ವಿಶ್ವ ಮಟ್ಟದಲ್ಲಿ ಭಾರತ ಎಂತಹ ದೇಶ ಎಂಬುದನ್ನು ತೋರಿಸಿಕೊಟ್ಟವರು ವಿವೇಕಾನಂದ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts