More

    ಹಳ್ಳಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಲಿ

    ಕರಜಗಿ: ಗ್ರಾಮೀಣ ಭಾಗದಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಇಲ್ಲಿನ ಮಕ್ಕಳು ಉನ್ನತ ಸ್ಥಾನ ತಲುಪಲು ಸಾಧ್ಯ ಎಂದು ಜಿಲ್ಲಾದಿಕಾರಿ ಫೌಜಿಯಾ ತರನ್ನುಮ್ ಹೇಳಿದರು.

    ಕೂಸಿನ ಮನೆ, ಡಿಜಿಟಲ್ ಗ್ರಂಥಾಲಯ, ಉಪ ತಹಸೀಲ್ದಾರ್ ಕಚೇರಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಪಾಲಕರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರ ಸಾಕಷ್ಟು ಸೌಕರ್ಯ ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಬಾಲ ಕಾರ್ಮಿಕತೆಗೆ ನಿರ್ಮೂಲನೆ ಮಾಡಬೇಕಿದೆ. ತಂದೆ-ತಾಯಿಯರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಬೇಕು. ಅಂದಾಗಲೇ ನಿಮ್ಮ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಸಾಧ್ಯ ಎಂದರು.

    ಸುಮಾರು ೧.೨೭ ಲಕ್ಷ ರೂ. ವೆಚ್ಚದಲ್ಲಿ ಸುಂದರ ಗ್ರಂಥಾಲಯ ನಿರ್ಮಿಸಲಾಗಿದೆ. ಸ್ಥಳೀಯರು ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೆ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗಾಗಿ ಕೂಸಿನ ಮನೆ ಯೋಜನೆ ಜಾರಿಗೊಳಿಸಲಾಗಿದೆ. ಮಕ್ಕಳು ದೇವರ ಸಮಾನ, ಯಾವುದೇ ತಾರತಮ್ಯ ಮಾಡದೆ ಆರೈಕೆ ಮಾಡಿ ಎಂದು ತಾಕೀತು ಮಾಡಿದರು.

    ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಪಾಠೋಳಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಗಜಾನನ ಬಾಳೆ, ತಹಸೀಲ್ದಾರ್ ಸಂಜಿವಕುಮಾರ ದಾಸರ್, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ರಮೇಶ ಪಾಟೀಲ್, ಕಂದಾಯ ನಿರೀಕ್ಷಕ ಆನಂದ ನೇರಳೆ, ಪಿಡಿಒ ಚಂದ್ರಶೇಖರ ಕುಂಬಾರ, ಪ್ರಮುಖರಾದ ರಮೇಶ ಕೋಲಾರ, ಇರ್ಫಾನ್ ಜಮಾದಾರ, ಪೀರಪ್ಪ ನಾಯ್ಕೋಡಿ, ನಿಂಗಪ್ಪ ಕೊನ್ನಳ್ಳಿ, ಉಸ್ಮಾನ್ ಚೌದರಿ, ಅಶೋಕ ದೇವಣಗಾಂವ್, ರಮೇಶ ಜಾಧವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts