More

    ಬರದಿಂದ ತತ್ತರಿಸಿದ ಜನರಿಗಾಗಿ ಅಕ್ಕಿ ವಿತರಣೆ

    ಸೊರಬ: ಬರದ ಸಂದರ್ಭದಲ್ಲಿ ಜನರಿಗೆ ಹಣ ನೀಡಿ ಹಸಿವು ನೀಗಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಕೇಂದ್ರ ಸರ್ಕಾರ ಕಡಿಮೆ ಬೆಲೆಯಲ್ಲಿ ಜನತೆಗೆ ಅಕ್ಕಿ ವಿತರಿಸುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
    ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ಭಾರತ್ ಅಕ್ಕಿಯನ್ನು ಜನರಿಗೆ ವಿತರಿಸಿ ಮಾತನಾಡಿ, ಬಡವರಿಗೆ ಅಕ್ಕಿ ಕೊಡಲು ಸಾಧ್ಯವಾಗದ ರಾಜ್ಯದ ಕಾಂಗ್ರೆಸ್ ಸರ್ಕಾರ ಹಣ ವಿತರಿಸಿ ವೈಫಲ್ಯ ಒಪ್ಪಿಕೊಂಡಿದೆ. ಆದರೆ ಕೇಂದ್ರ ಸರ್ಕಾರ ಚುನಾವಣೆಯನ್ನು ಮುಂದಿಟ್ಟುಕೊಳ್ಳದೆ ಬರದಿಂದ ತತ್ತರಿಸಿರುವ ಜನರಿಗೆ ಅಕ್ಕಿ ವಿತರಿಸುವ ಮೂಲಕ ಧೈರ್ಯ ತುಂಬುತ್ತಿದ್ದು, ಎಲ್ಲ ವರ್ಗದವರು ಅಕ್ಕಿಯನ್ನು ಪಡೆಯಬಹುದು ಎಂದರು.
    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಲ್ಲೆ, ರಾಜ್ಯದ ಅಭಿವೃದ್ಧಿ ಸೇರಿದಂತೆ ಜನಸಾಮಾನ್ಯರ ಪ್ರಗತಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಉಜ್ವಲ ಯೋಜನೆಯಡಿ 10 ಕೋಟಿ ಕುಟುಂಬಗಳಿಗೆ ಉಚಿತ ಗ್ಯಾಸ್ ವಿತರಣೆ, 300ರಿಂದ 400 ರೂ.ಗಳಿಗೆ ಗ್ಯಾಸ್ ಸಬ್ಸಿಡಿ ಹೆಚ್ಚಳ ಸೇರಿ 12 ಕೋಟಿ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಿದೆ. ಜಲಜೀವನ ಯೋಜನೆಯಡಿ 14 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದರು.
    ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್, ಪ್ರಕಾಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಹೊಳೆಯಮ್ಮ, ಹಿಂದುಳಿದ ಮೋರ್ಚಾ ಅಧ್ಯಕ್ಷ ಎಂ.ಡಿ.ಉಮೇಶ್, ಮುಖಂಡರಾದ ಗುರುಕುಮಾರ್ ಪಾಟೀಲ್, ಎ.ಎಲ್.ಅರವಿಂದ್, ಅಶೋಕ ನಾಯಕ ಅಂಡಿಗೆ, ನಿರಂಜನ ಕುಪ್ಪಗಡ್ಡೆ, ದಿವಾಕರ ಭಾವೆ, ವಿಜೇಂದ್ರ ಪಾಟೀಲ್ ಜಡೆ, ಮಧುರಾಯ್ ಜಿ.ಶೇಟ್, ವಿಜಯಲಕ್ಷ್ಮೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts