More

    ಆಹಾರ ಸಾಮಗ್ರಿ ಕಿಟ್ ವಿತರಣೆ ಸ್ಥಗಿತ

    ಹಾನಗಲ್ಲ: ಕಾರ್ವಿುಕ ಇಲಾಖೆಯಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ ಆಹಾರ ಸಾಮಗ್ರಿ ಕಿಟ್ ವಿತರಣೆ ವೇಳೆ ನೂಕು-ನುಗ್ಗಲು ಉಂಟಾಗಿದ್ದರಿಂದ ವಿತರಣೆ ಸ್ಥಗಿತಗೊಳಿಸಲಾಯಿತು.

    ಜು. 8 ಹಾಗೂ 9ರಂದು ಎಪಿಎಂಸಿಯಲ್ಲಿ ಕಿಟ್ ವಿತರಿಸುವುದಾಗಿ ಕಾರ್ವಿುಕ ಇಲಾಖೆ ಪ್ರಕಟಣೆ ನೀಡಿತ್ತು. ಹೀಗಾಗಿ, ತಾಲೂಕಿನ ಗ್ರಾಮಗಳಿಂದ ಸಾವಿರಾರು ಕಾರ್ವಿುಕರು ಬೆಳಗ್ಗೆ 6 ಗಂಟೆಗೆ ಜಮಾಯಿಸಿದ್ದರು. ಜನ-ವಾಹನಗಳಿಂದಾಗಿ ಹಾನಗಲ್ಲ- ಹುಬ್ಬಳ್ಳಿ ರಸ್ತೆ ಗಿಜುಗುಡುತ್ತಿತ್ತು. ಕಾರ್ವಿುಕರನ್ನು ನಿಯಂತ್ರಿಸಲು ಕಾರ್ವಿುಕ ಇಲಾಖೆ ಸಿಬ್ಬಂದಿ, ಪೊಲೀಸರು ಹರಸಾಹಸ ಪಡುವಂತಾಯಿತು.

    ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ ಅವರು ಕಾರ್ವಿುಕ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಿ, ತಾಲೂಕಿನ ಎಲ್ಲ ಕಾರ್ವಿುಕರನ್ನು ಒಂದೆಡೆ ಸೇರಿಸುವ ಬದಲು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಇಲಾಖೆಯ ಕೂಪನ್ ವಿತರಿಸಬೇಕು. ಕೂಪನ್ ಪಡೆದ ಫಲಾನುಭವಿಗಳು ಹಾನಗಲ್ಲಿನ ಎಪಿಎಂಸಿ ಆವರಣಕ್ಕೆ ಬಂದು ಕಿಟ್ ಪಡೆಯಬೇಕು ಎಂದು ತೀರ್ಮಾನ ಕೈಗೊಂಡರು.

    ಬಳಿಕ ಮಾತನಾಡಿದ ತಹಸೀಲ್ದಾರ್, ತಾಲೂಕಿನಲ್ಲಿ ಒಟ್ಟು 18000 ಕಾರ್ವಿುಕರಿದ್ದಾರೆ. ಅವರಲ್ಲಿ ಅರ್ಹ 8000 ಫಲಾನುಭವಿಗಳ ಪಟ್ಟಿ ಮಾಡಿ ಕಳುಹಿಸಿಕೊಡಲಾಗಿತ್ತು. ಈಗಾಗಲೇ ಆಹಾರ ಸಾಮಗ್ರಿ ಕಿಟ್​ಗಳು ಬಂದಿದ್ದು, ಸಮರ್ಪಕವಾಗಿ ವಿತರಿಸಲು ವ್ಯವಸ್ಥೆ ಕೈಗೊಳ್ಳಬೇಕಿದೆ. ಪಟ್ಟಿಯಲ್ಲಿಲ್ಲದ ಫಲಾನುಭವಿಗಳು ಆಗಮಿಸಿರುವುದರಿಂದ ಜನಜಂಗುಳಿ ಏರ್ಪಟ್ಟಿದೆ. ಪಟ್ಟಿಗನುಗುಣವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ವಿುಕ ಇಲಾಖೆ ಸಿಬ್ಬಂದಿ ದಿನಾಂಕ ನಿಗದಿಪಡಿಸಿ ಕಿಟ್​ಗಳನ್ನು ಫಲಾನುಭವಿಗಳಿಗೆ ತಲುಪಿಸುತ್ತಾರೆ. ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ವಿವರಿಸಿದರು. ಹೀಗಾಗಿ, ಎಲ್ಲ ಕಾರ್ವಿುಕರು ಬರಿಗೈಯಲ್ಲಿ ಗ್ರಾಮಗಳಿಗೆ ವಾಪಸಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts