More

    ಮತ್ತೆ ಟಾಲಿವುಡ್​ಗೆ ದಿಶಾ ಪಠಾಣಿ; ಪುಷ್ಪಾ ಚಿತ್ರದ ಐಟಂ ಸಾಂಗ್​ನಲ್ಲಿ ಹೆಜ್ಜೆ

    ಪುರಿ ಜಗನ್ನಾಥ್ ನಿರ್ದೇಶನದ ತೆಲುಗು ಚಿತ್ರ ‘ಲೋಫರ್’ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು ದಿಶಾ ಪಠಾಣಿ. ಆದರೆ, ಆ ನಂತರ ಅವರು ಕಾಣಿಸಿಕೊಂಡಿದ್ದು ಹೆಚ್ಚಾಗಿ ಬಾಲಿವುಡ್ ಚಿತ್ರಗಳಲ್ಲೇ. ಈಗ ಆರು ವರ್ಷಗಳ ನಂತರ ಅವರು ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದ ಮೂಲಕ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.

    ಹಾಗಂತ ಈ ಚಿತ್ರದಲ್ಲಿ ಅವರು ಪೂರ್ಣಪ್ರಮಾಣದ ಪಾತ್ರ ಮಾಡುತ್ತಿದ್ದಾರೆ ಅಂದುಕೊಳ್ಳಬೇಡಿ. ‘ಪುಷ್ಪಾ’ ಚಿತ್ರದಲ್ಲಿ ಒಂದು ಐಟಂ ಸಾಂಗ್ ಇದ್ದು, ಈ ಹಾಡಿನಲ್ಲಿ ದಿಶಾ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಹಾಡಿನಲ್ಲಿ ಅಲ್ಲು ಅರ್ಜುನ್ ಸಹ ಹೆಜ್ಜೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಾನು ಅಲ್ಲು ಅರ್ಜುನ್ ಅವರ ಡ್ಯಾನ್ಸ್​ನ ದೊಡ್ಡ ಅಭಿಮಾನಿ ಮತ್ತು ಅವರ ಜತೆಗೆ ಡ್ಯಾನ್ಸ್ ಮಾಡುವಾಸೆ ಇದೆ ಎಂದು ಕೆಲವು ದಿನಗಳ ಹಿಂದಷ್ಟೇ ದಿಶಾ ಹೇಳಿಕೊಂಡಿದ್ದರು. ಆ ಆಸೆ, ‘ಪುಷ್ಪಾ’ ಚಿತ್ರದ ಮೂಲಕ ಈಡೇರುತ್ತಿದೆ.

    ಅಂದಹಾಗೆ, ‘ಪುಷ್ಪಾ’ ಚಿತ್ರವು ಎರಡು ಭಾಗಗಳಲ್ಲಿ ಬಿಡುಡೆಯಾಗುತ್ತಿದ್ದು, ಮೊದಲ ಭಾಗವು ಈ ವರ್ಷದ ಕೊನೆಗೆ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲು ಅಲ್ಲು ಅರ್ಜುನ್ ಜತೆಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು, ನೆಗೆಟಿವ್ ಪಾತ್ರದಲ್ಲಿ ‘ಡಾಲಿ’ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಜಿಲ್ ಸಹ ಇದ್ದಾರೆ. (-ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts