More

    ರೋಗ ಬಾಧಿತ ಬೆಳೆಗೆ ಸಲಹೆ

    ಕುಕನೂರು: ತಾಲೂಕಿನ ಬನ್ನಿಕೊಪ್ಪ, ವೀರಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ಬೆಳೆದ ಕಡಲೆ ಬೆಳೆಯನ್ನು ಶನಿವಾರ ವಿಕ್ಷಿಸಿದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಕೀಟ, ರೋಗ ಬಾಧಿತ ಬೆಳೆಗೆ ಸೂಕ್ತ ಸಲಹೆ ನೀಡಿದ್ದಾರೆ.

    ಇದನ್ನೂ ಓದಿ: ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಿ

    ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪ ಮಾತನಾಡಿ, ಕಡಲೆ ಬೆಳೆಗೆ ಲದ್ದಿ ಹುಳು ಕಾಟವಿದ್ದು, ಮೋಡ ಕವಿದ ವಾತಾವರಣದಿಂದ ಹೆಚ್ಚು ಕಾಣಿಸಿಕೊಳ್ಳುತ್ತದೆ.

    ಇದರ ನಿಯಂತ್ರಣಕ್ಕೆ ಈಗಾಗಲೇ ವಿಜ್ಞಾನಿಗಳು ಸಲಹೆ ನೀಡಿದ್ದು, ಲ್ಯಾಂಬ್ಡಾ ಸೈಲೋಥ್ರಿನ್ ಶೇ.2.5 ಇಸಿ, ಪ್ರತಿ ಲೀಟರ್ ನೀರಿಗೆ 0.5 ಮಿಲಿ, ಅಥವಾ ಕಾರ್ಟಾಫ್ ಹೈಡ್ರೋಕ್ಲೋರೈಡ್ ಪ್ರತಿ ಲೀಟರ್ 01ಗ್ರಾಂ.,

    ಅಥವಾ ಸೈಪರ್ ಮೆಟ್ರಿನ್ ಪ್ರತಿ ಲೀಟರ್‌ಗೆ 1ಗ್ರಾಂ., ಸ್ಪಿನೆಟೋರಾಮ್ 0.5 ಮಿಲಿ ಪ್ರತಿ ಲೀಟರ್‌ಗೆ ಬೆರಸಿ ಸಿಂಪಡಿಸಿದರೇ ಕೀಟ ಬಾಧೆ ಹತ್ತೋಟಿಗೆ ಬರುತ್ತದೆ. ಅಲ್ಲದೇ ಕಡಲೆ ಬೆಳೆ ಕ್ಷೇತ್ರ ಇರುವ ಪ್ರದೇಶಗಳಿಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಿ, ಕೀಟ ನಿಯಂತ್ರಣ ಮಾಡಲಾಗುವುದು ಎಂದರು.

    ರಾಯಚೂರು ಕೃಷಿ ವಿವಿಯ ಕೀಟಶಾಸ್ತ್ರಜ್ಞ, ಕೃಷಿ ವಿಜ್ಞಾನಿ ಬಸವರಾಜ ಕಾಡಣ್ಣನವರ್, ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ್ ಹಾದಿಮನಿ, ಕುಕನೂರು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳಾದ ಬಸವರಾಜ ತೇರಿನ್, ಸಿದ್ರಾಮರೆಡ್ಡಿ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts