More

    52,000 ಅಡಿ ಎಲ್ಇಡಿ ಪರದೆಯ ಮೇಲೆ ‘ಆರ್​ಆರ್​ಆರ್’ ಚಿತ್ರತಂಡದಿಂದ ಅಪ್ಪುಗೆ ವಿಶೇಷ ಗೌರವ!

    ಚಿಕ್ಕಬಳ್ಳಾಪುರ: ಭಾರತ ದೇಶದಲ್ಲಿ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ತಮ್ಮ ಉತ್ತಮ ಸಿನಿಮಾಗಳ ಮೂಲಕ ಅವರ ಹೆಸರು ಸೇರಿಸಿಕೊಂಡ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ತಮ್ಮ ಮುಂಬರುವ ‘ಆರ್​ಆರ್​ಆರ್’ ಚಿತ್ರತಂಡದ ಜತೆಗೆ ಇಂದು ಮಾರ್ಚ್ 19 ರಂದು ಚಿಕ್ಕಬಳ್ಳಾಪುರಕ್ಕೆ ತೆರಳಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ‘ಆರ್​ಆರ್​ಆರ್’ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮ ಬರೋಬ್ಬರಿ 100 ಏಕರೆಯಲ್ಲಿ ನಡೆಯಲಿದ್ದು, 52,000 ಅಡಿ ಎಲ್ಇಡಿ ಪರದೆಯ ಮೇಲೆ ಈ ಚಿತ್ರತಂಡದ ಮಂದಿ ಅಭಿಮಾನಿಗಳು ಮುಂದೆ ಮಿಂಚಲಿದ್ದಾರೆ.
    ಇನ್ನು, ಪ್ರೀರಿಲೀಸ್ ಕಾರ್ಯಕ್ರಮಕ್ಕೂ ಮೊದಲು ನಂದಿ ಬೆಟ್ಟದ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್​ನಲ್ಲಿ ‘ಆರ್​ಆರ್​ಆರ್’ ಚಿತ್ರತಂಡ ಮಾಧ್ಯಮ ಮಿತ್ರರಿಗೆ ಒಂದು ಸುದ್ದಿಗೋಷ್ಠಿ ನಡೆಸಿದೆ. ಈ ವೇಳೆ ಸಿನಿಮಾ ಬಗ್ಗೆ ಹಾಗೂ ಸಂಜೆ ನಡೆಯುತ್ತಿರುವ ಪ್ರೀರಿಲೀಸ್ ಕಾರ್ಯಕ್ರಮದ ಬಗ್ಗೆ ಚಿತ್ರದ ನಿರ್ದೇಶಕ ರಾಜಮೌಳಿ ಮಾಹಿತಿಯನ್ನು ನೀಡಿದ್ದರು. ಸಂಜೆ ನಡೆಯಲಿರುವ ಪ್ರೀರಿಲೀಸ್ ಇವೆಂಟ್​​ನಲ್ಲಿ ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ‘ಆರ್​ಆರ್​ಆರ್’ ತಂಡ ವಿಶೇಷ ನಮನ ಅರ್ಪಿಸಲಿದೆ. ನಟ ಪುನೀತ್ ಅವರ ಹತ್ತು ಹಾಡುಗಳನ್ನು ರಿಮಿಕ್ಸ್ ಮಾಡಿದ್ದು, ಡ್ಯಾನ್ಸ್ ಪರ್ಫಾಮೆನ್ಸ್ ನೀಡಲು ಸಿದ್ಧತೆ ನಡೆದಿದೆ. ಇನ್ನೂ ಹಲವು ವಿಚಾರಗಳು ಈ ಪ್ರೀರಿಲೀಸ್ ಇವೆಂಟ್​ನಲ್ಲಿ ಇರಲಿದೆ”, ಎಂದು ಎಸ್.ಎಸ್.ರಾಜಮೌಳಿ ಅವರು ತಿಳಿಸಿದ್ದಾರೆ.
    ಇನ್ನು, ಸಿನಿಮಾದ ನಟರು ಜೂ.ಎನ್​ಟಿಆರ್, ರಾಮ್ ಚರಣ್ ತೇಜ್ ಕೂಡಾ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದು, ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಸದ್ಯ, ಅಪ್ಪು ಅವರಿಗೆ 52,000 ಅಡಿ ಎಲ್ಇಡಿ ಪರದೆಯ ಮೇಲೆ ವಿಶೇಷ ಗೌರವ ಸಿಗಲಿದೆ ಎಂಬ ಮಾಹಿತಿ ದೊರಕಿದ್ದು, ಅದು ಅಪ್ಪು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಜತೆಗೆ, ‘ಆರ್​ಆರ್​ಆರ್’ ಪ್ರೀರಿಲೀಸ್ ಕಾರ್ಯಕ್ರಮವನ್ನು ನೋಡಿ ಕಣ್ತುಂಬಿಕೊಳ್ಳಲು ಜನ ಕಾದು ಕುಳಿತ್ತಿದ್ದಾರೆ ಎನ್ನಬಹುದು

    52,000 ಅಡಿ ಎಲ್ಇಡಿ ಪರದೆಯ ಮೇಲೆ ‘ಆರ್​ಆರ್​ಆರ್’ ಚಿತ್ರತಂಡದಿಂದ ಅಪ್ಪುಗೆ ವಿಶೇಷ ಗೌರವ! 52,000 ಅಡಿ ಎಲ್ಇಡಿ ಪರದೆಯ ಮೇಲೆ ‘ಆರ್​ಆರ್​ಆರ್’ ಚಿತ್ರತಂಡದಿಂದ ಅಪ್ಪುಗೆ ವಿಶೇಷ ಗೌರವ!

    61ರ ಬಾಲಯ್ಯನ ಚಿತ್ರ ರಿಜೆಕ್ಟ್ ಮಾಡಿ 42ರ ಪ್ರಭಾಸ್ ಚಿತ್ರಕ್ಕೆ ಸಹಿ ಹಾಕಿದ 18ರ ಕೃತಿ ಶೆಟ್ಟಿ?

    ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಜತೆ ಕಂಗನಾ ಹೊಸ ಚಿತ್ರ?

    8 ರಾಜ್ಯದಲ್ಲಿ ತೆರಿಗೆ ವಿನಾಯತಿ ಪಡೆದ ದಿ ಕಾಶ್ಮೀರ್​ ಫೈಲ್ಸ್ ಒಂದು ವಾರದಲ್ಲಿ ಗಳಿಸಿದ್ದೆಷ್ಟು ಕೋಟಿ?

    ಹೇಗಿತ್ತು ಅಮೆರಿಕದಲ್ಲಿ ಪ್ರಿಯಾಂಕಾ ಚೋಪ್ರಾ ಹೋಳಿ ಸಂಭ್ರಮ? ಫೋಟೋಗಳು ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts