More

    ಟೀಮ್ ಇಂಡಿಯಾ, ಆರ್‌ಸಿಬಿ ಮಾಜಿ ವೇಗಿ ಅಶೋಕ್ ದಿಂಡಾ ವಿದಾಯ

    ಕೋಲ್ಕತ: ಟೀಮ್ ಇಂಡಿಯಾ ಮತ್ತು ಆರ್‌ಸಿಬಿ ತಂಡದ ಮಾಜಿ ವೇಗದ ಬೌಲರ್ ಅಶೋಕ್ ದಿಂಡಾ ಅವರು ಮಂಗಳವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ್ದಾರೆ. ಪಶ್ಚಿಮ ಬಂಗಾಳದವರಾದ ದಿಂಡಾ ಐಪಿಎಲ್‌ನಲ್ಲೂ ಹಲವು ತಂಡಗಳ ಪರ ಆಡಿದ್ದಾರೆ.

    36 ವರ್ಷದ ಅಶೋಕ್ ದಿಂಡಾ ಭಾರತ ಪರ 13 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 12 ಮತ್ತು 17 ವಿಕೆಟ್ ಕಬಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 116 ಪಂದ್ಯಗಳಲ್ಲಿ 420 ವಿಕೆಟ್ ಕಬಳಿಸಿದ್ದಾರೆ.

    ಇದನ್ನೂ ಓದಿ: 8 ಪಂದ್ಯಗಳ ಬಳಿಕ ಕೊನೆಗೂ ಗೆಲುವು ಕಂಡ ಬೆಂಗಳೂರು ಎಫ್​ಸಿ

    ಕಳೆದ ದೇಶೀಯ ಕ್ರಿಕೆಟ್ ಋತುವಿನ ವೇಳೆ ಬೌಲಿಂಗ್ ಕೋಚ್ ರಣದೇಬ್ ಬೋಸ್ ಜತೆ ಜಗಳವಾಡಿ ಬಂಗಾಳ ತಂಡದಿಂದ ಹೊರಬಿದ್ದಿದ್ದ ದಿಂಡಾ, ಹಾಲಿ ಋತುವಿನಲ್ಲಿ ಗೋವಾ ತಂಡದ ಪರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ 3 ಪಂದ್ಯಗಳನ್ನು ಆಡಿದ್ದರು. ಅವರು ದೇಶೀಯ ಕ್ರಿಕೆಟ್ ಋತುವಿನಲ್ಲಿ 15 ವರ್ಷಗಳ ಕಾಲ ಬಂಗಾಳ ತಂಡವನ್ನು ಪ್ರತಿನಿಧಿಸಿದ್ದರು.

    ‘ನಾನಿಂದು ಎಲ್ಲ ಪ್ರಕಾರದ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ಬಿಸಿಸಿಐ ಮತ್ತು ಗೋವಾ ಕ್ರಿಕೆಟ್ ಸಂಸ್ಥೆಗೆ ಈ ಬಗ್ಗೆ ತಿಳಿಸಿದ್ದೇನೆ’ ಎಂದು ದಿಂಡಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಅವರ ಪತ್ನಿ ಶ್ರೇಯಸಿ ರುದ್ರಾ ಜತೆಗಿದ್ದರು.

    ಟೀಮ್ ಇಂಡಿಯಾ, ಆರ್‌ಸಿಬಿ ಮಾಜಿ ವೇಗಿ ಅಶೋಕ್ ದಿಂಡಾ ವಿದಾಯ

    ಐಪಿಎಲ್‌ನಲ್ಲಿ ದಿಂಡಾ ಆರ್‌ಸಿಬಿ, ಕೆಕೆಆರ್, ಪುಣೆ ವಾರಿಯರ್ಸ್‌, ಡೆಲ್ಲಿ ಡೇರ್‌ಡೆವಿಲ್ಸ್, ಪುಣೆ ಸೂಪರ್‌ಜೈಂಟ್ಸ್ ತಂಡಗಳ ಪರ ಆಡಿದ್ದಾರೆ. ಐಪಿಎಲ್‌ನಲ್ಲಿ ಒಟ್ಟಾರೆ 78 ಪಂದ್ಯಗಳನ್ನು ಆಡಿ 68 ವಿಕೆಟ್ ಕಬಳಿಸಿದ್ದಾರೆ. 18 ರನ್‌ಗೆ 4 ವಿಕೆಟ್ ಕಬಳಿಸಿದ್ದು ಅತ್ಯುತ್ತಮ ನಿರ್ವಹಣೆಯಾಗಿದೆ. ಐಪಿಎಲ್ ಪಂದ್ಯಗಳಲ್ಲಿ ದುಬಾರಿ ರನ್ ನೀಡುತ್ತಿದ್ದ ಕಾರಣಕ್ಕಾಗಿ ಅಶೋಕ್ ದಿಂಡಾ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗಳನ್ನೂ ಎದುರಿಸಿದ್ದರು. ಈಗಲೂ ಐಪಿಎಲ್‌ನಲ್ಲಿ ದುಬಾರಿ ರನ್ ನೀಡುವ ಬೌಲರ್‌ಗಳನ್ನು ‘ದಿಂಡಾ ಅಕಾಡೆಮಿ’ಯ ಸದಸ್ಯರು ಎಂದೇ ಟ್ರೋಲ್ ಮಾಡಲಾಗುತ್ತದೆ.

    ಐಸಿಸಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ ರಿಷಭ್ ಪಂತ್, ನೀವೂ ಮತ ಹಾಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts