More

    ಪಾಳುಬಿದ್ದಿವೆ 240 ಮನೆಗಳು: ಫಲಾನುಭವಿಗಳಿಗೆ ಹಸ್ತಾಂತರಿಸಲು ರಾಜಕಾರಣ ಅಡ್ಡಿ

    ರಾಮನಗರ: ರಾಮನಗರದಲ್ಲಿ ನಿರ್ವಣಗೊಂಡು ಪಾಳು ಬೀಳುತ್ತಿರುವ ವಸತಿ ಸಮುಚ್ಚಯಗಳು ಮಾತ್ರ ಸರ್ಕಾರದ ಕಣ್ಣಿಗೆ ಕಾಣುತ್ತಲೇ ಇಲ್ಲ.

    ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಗರದ ಹೊರವಲಯದ ದೊಡ್ಡಮಣ್ಣುಗುಡ್ಡೆ ಸಮೀಪ ನಿರ್ವಣಗೊಂಡಿರುವ 240 ಮನೆಗಳು ಪಾಳು ಬಿದ್ದಿದ್ದು, ಫಲಾನುಭವಿಗಳಿಗೆ ಹಸ್ತಾಂತರ ಮಾಡುವ ವಿಚಾರದಲ್ಲಿ ರಾಜಕೀಯ ಮಾಡಿದ್ದು ಬಿಟ್ಟರೆ ಉಳಿದಂತೆ ಯಾವುದೇ ಪ್ರಗತಿ ಕಾಣದಿರುವುದು ಅರ್ಜಿ ಹಾಕಿದವರ ನೋವಿಗೆ ಕಾರಣವಾಗಿದೆ.

    2006ರಲ್ಲಿ ಕೆಎಸ್​ಡಿಬಿ ವತಿಯಿಂದ ವಸತಿಹೀನರಿಗೆ ಮನೆ ನೀಡá-ವ ಯೋಜನೆ ಅನುಷ್ಠಾನಗೊಳಿಸಲಾಯಿತು. ಪ್ರತಿ ಮನೆಗೆ ಆಕಾಂಕ್ಷಿಗಳಿದ 5,100 ರೂ.ಗಳನ್ನು ಸಂಗ್ರಹಿಸಿತ್ತು. ಈ ಯೋಜನೆಯಡಿ 1,430 ಮಂದಿ ಅರ್ಜಿ ಸಲ್ಲಿಸಿದ್ದರು. ದೊಡ್ಡಮಣ್ಣುಗುಡ್ಡೆ ಪ್ರದೇಶದಲ್ಲಿ ಒಟ್ಟು 30 ಬ್ಲಾಕ್​ಗಳಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ 240 ಮನೆಗಳನ್ನು ನಿರ್ವಿುಸಲಾಯಿತು. ಮನೆ ನಿರ್ವಣಗೊಂಡು ಹಲವು ವರ್ಷಗಳೇ ಕಳೆದರೂ ಫಲಾನುಭವಿಗಳಿಗೆ ಹಸ್ತಾಂತರ ಮಾಡದೆ, ಕೇವಲ ಮೂಗಿಗೆ ತುಪ್ಪ ಸವರುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ರಾಜಕೀಯ ಆಟ: ಮನೆಗಳ ಹಂಚಿಕೆ ವಿಚಾರದಲ್ಲಿ ಇಲ್ಲಿಯವರೆಗೂ ಕೇವಲ ರಾಜಕಾರಣವೇ ನಡೆದಿದೆ. ಫಲಾನುಭವಿಗಳ ಆಯ್ಕೆ ಸಂಬಂಧ ಹಲವಾರು ಬಾರಿ ಕರೆದ ಸಭೆಗೆ ಹಿಂದೆ ಶಾಸಕರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ ದಿನಾಂಕಕ್ಕೆ ಮತ್ತೊಬ್ಬರು ಗೈರಾಗುತ್ತಿದ್ದ ಕಾರಣ ಫಲಾನುಭವಿಗಳ ಆಯ್ಕೆ ನಡೆಯಲೇ ಇಲ್ಲ.

    2018ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್.ಡಿ.ಕುಮಾರಸ್ವಾಮಿ ಅವರು ನಾಮ್ೇವಾಸ್ತೆ ಎನ್ನುವಂತೆ ನಗರದ ಅಂಬೇಡ್ಕರ್ ಭವನದಲ್ಲಿ ಲಾಟರಿ ಮೂಲಕ ಕೆಲವು ಫಲಾನುಭವಿಗಳನ್ನು ಆಯ್ಕೆ ಮಾಡಿ ಹೋದರು. ಆದರೆ ಮನೆಗಳು ಫಲಾನುಭವಿಗಳ ಕೈಸೇರಲಿಲ್ಲ. ಕಳೆದ ಜೂನ್​ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಮನೆಗಳನ್ನು ಹಂಚಿಕೆ ಮಾಡುವ ಸಂಬಂಧ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಿದ್ಧತೆ ನಡೆದಿತ್ತು. ಆದರೆ ಅಂತಿಮ ಕ್ಷಣದಲ್ಲಿ ಇಡೀ ಕಾರ್ಯಕ್ರಮವೇ ರದ್ದಾಗಿ ಫಲಾನುಭವಿಗಳು ಮತ್ತೆ ನಿರಾಸೆಗೊಳ್ಳುವಂತೆ ಆಯಿತು.

    ಜೂಜು ಅಡ್ಡೆಯಾಗಿವೆ ಮನೆಗಳು

    ಮನೆಗಳು ನಿರ್ವಣಗೊಂಡು ವರ್ಷಗಳೇ ಕಳೆದಿದ್ದು, ಫಲಾನುಭವಿಗಳಿಗೆ ಹಸ್ತಾಂತರ ಮಾಡದಿರುವುದರಿಂದ ಪಾಳು ಬಿದ್ದಿವೆ. ಮನೆಗಳ ಮೇಲ್ಛಾವಣಿ, ಹಾಲ್​ನಲ್ಲಿ ಹಾಕಿರುವ ಸಿಮೆಂಟ್ ಕಿತ್ತುಬರುತ್ತಿದೆ. ಬಾಗಿಲುಗಳನ್ನು ಕಳ್ಳರು ಕಿತ್ತೊಯ್ದಿದ್ದಾರೆ. ಮನೆಗಳ ಸುತ್ತ ಗಿಡಮರಗಳು ಬೆಳೆದುನಿಂತಿವೆ. ಮತ್ತೊಂದು ವಿಪರ್ಯಾಸವೆಂದರೆ, ವಸತಿ ಸಮುಚ್ಚಯದ ರಸ್ತೆಗಳು ರೈತರು ಬೆಳೆದ ಬೆಳೆಗಳ ಒಕ್ಕಣೆ ಮಾಡುವ ಕಣವಾಗಿದ್ದರೆ, ಪಾಳು ಬಿದ್ದಿರುವ ಮನೆಗಳು ಕೊಯ್ಲು ಮಾಡಿದ ರಾಗಿಯನ್ನು ಮಳೆಯಿಂದ ರಕ್ಷಿಸುವ ಉಗ್ರಾಣಗಳಾಗಿವೆ. ಇದರ ಜತೆಗೆ ಮನೆಗಳು ಪುಂಡರು ಪೋಕರಿಗಳು ಜೂಜಾಡುವ ಅಡ್ಡೆಯಾಗಿವೆ.

    ಬಡವರಿಗೆ ಸೂರು ನೀಡುವ ಉದ್ದೇಶದಿಂದ ಕಟ್ಟಿದ ಮನೆಗಳು ಈಗ ವಾಸಕ್ಕೆ ಯೋಗ್ಯವಲ್ಲದ ಹಂತ ತಲುಪಿವೆ. ಇವುಗಳನ್ನು ಸರಿಪಡಿಸಿ ನೀಡಬೇಕಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

    | ಎಚ್.ಡಿ.ಕುಮಾರಸ್ವಾಮಿ

    ನನಗೆ ಮನೆಯೂ ಇಲ್ಲ, ನಿವೇಶನವೂ ಇಲ್ಲ. ಅರ್ಜಿ ಸಲ್ಲಿಸಿ ದಶಕಗಳೇ ಕಳೆದರೂ ಮನೆ ಕೊಡಲು ಸ್ಥಳೀಯ ರಾಜಕಾರಣಿಗಳು ಮತ್ತು ಸ್ಲಂ ಬೋರ್ಡ್ ಮೀನಮೇಷ ಎಣಿಸುತ್ತಿವೆ. ಮನೆ ಕೊಡುವ ವಿಚಾರದಲ್ಲಿ ರಾಜಕಾರಣ ಮಾಡಿದ್ದು ಬಿಟ್ಟರೆ ಉಳಿದಂತೆ ಏನೂ ಆಗಿಲ್ಲ.

    | ನರಸಿಂಗರಾವ್ ಮನೆಗಾಗಿ ಅರ್ಜಿ ಸಲ್ಲಿಸಿದ್ದವರು, ರಾಮನಗರ

    ಗಂಗಾಧರ್ ಬೈರಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts