More

    ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ 23ರಿಂದ ಸೇವೆ ಸ್ಥಗಿತಗೊಳಿಸಲು ಆಯುಷ್ ವೈದ್ಯರ ನಿರ್ಧಾರ

    ಲಿಂಗಸುಗೂರು: ರಾಜ್ಯದ ಎನ್‌ಆರ್‌ಎಚ್‌ಎಂ, ಎನ್‌ಎಚ್‌ಎಂ, ಆರ್‌ಬಿಎಸ್‌ಕೆ ಹಾಗೂ ಅಗೆನೆಸ್ಟ್ ಪೋಸ್ಟ್ ಆಯುಷ್ ವೈದ್ಯರ ವೇತನ ಹೆಚ್ಚಿಸುವಂತೆ ಮನವಿ ಮಾಡಿದರೂ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಮೇ 23 ರಿಂದ ಆಯುಷ್ ವೈದ್ಯರುಗಳು ಸಾಮೂಹಿಕವಾಗಿ ಸೇವೆ ಸ್ಥಗಿತಗೊಳಿಸುವುದಾಗಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಪದಾಧಿಕಾರಿಗಳು ಟಿಎಚ್‌ಒ ಡಾ.ರುದ್ರಗೌಡಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಕೋವಿಡ್-19 ತುರ್ತು ಸಮಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಖಾಸಗಿ ಆಯುಷ್ ವೈದ್ಯರುಗಳು ಫಿವರ್ ಕ್ಲಿನಿಕ್ ಮತ್ತು ಕ್ವಾರಂಟೈನ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಸರ್ಕಾರಿ ಆಯುಷ್ ವೈದ್ಯರಿಗೆ ನೀಡಿರುವ ಆದೇಶವನ್ನು ಖಾಸಗಿ ಆಯುಷ್ ವೈದ್ಯರಿಗೂ ವಿಸ್ತರಿಸಬೇಕೆಂದು ಒತ್ತಾಯಿಸಿ ಮೇ 23 ರಿಂದ ಎಲ್ಲ ಸರ್ಕಾರಿ ಗುತ್ತಿಗೆ ಆಯುಷ್ ವೈದ್ಯರು ಮತ್ತು ಖಾಸಗಿ ಆಯುಷ್ ವೈದ್ಯರುಗಳು ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಇದರಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಸರ್ಕಾವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಆಯುಷ್ ವೈದ್ಯರಾದ ವಿಕ್ರಮ್ ಪಾಟೀಲ್, ಡಾ.ವಿಜಯಕುಮಾರ ಪತ್ತಾರ, ಡಾ.ಲಕ್ಷ್ಮೀಕಾಂತ, ಡಾ.ರವಿ, ಡಾ.ಸೂಗೂರೇಶ ಹಿರೇಮಠ, ಡಾ.ಸಂಗನಗೌಡ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts