More

    ಬ್ರೇಕಪ್ ಬಳಿಕ ಗಂಡು ಮಗುವನ್ನು ದತ್ತು ಪಡೆದ ನಟಿ ಸುಷ್ಮಿತಾ ಸೇನ್?

    ಇತ್ತೀಚೆಗೆ, ನಟಿ ಸುಶ್ಮಿತಾ ಸೇನ್ ಅವರು ಮುಂಬೈನ ಬಾಂದ್ರಾದಲ್ಲಿ ತಮ್ಮ ಹೆಣ್ಣುಮಕ್ಕಳಾದ ರೆನೀ ಮತ್ತು ಅಲಿಸಾ ಜತೆಗೆ ಒಂದು ಗಂಡು ಮಗುವಿನೊಂದಿಗೆ ಕಾಣಿಸಿಕೊಂಡರು. ಅವರು ಕಾಣಿಸಿಕೊಂಡ ವಿಡಿಯೋ ಸದ್ಯ ವೈರಲ್ ಆಗಿದೆ. ಇನ್ನು, ವಿಡಿಯೋದಲ್ಲಿರುವ ಮೂರನೇ ಮಗು ಆರ್ಯ ನಟಿಯ ಹೊಸ ದತ್ತುಪುತ್ರ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ ತೊಡಗಿದವು. ಆದರೆ, ನಟಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ವೀಡಿಯೊದಲ್ಲಿ ನಟಿ ಮೂರು ಮಕ್ಕಳೊಂದಿಗೆ ಮಾದ್ಯಮದವರಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

    ಕಳೆದ ತಿಂಗಳು ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆಗಿನ ಸಂಬಂಧಕ್ಕೆ ಗುಡ್ ಬೈ ಹೇಳಿರುವ ನಟಿ ಸುಶ್ಮಿತಾ ಸೇನ್, ನಂತರ ಮೂರನೇ ಮಗುವಾಗಿ ಒಂದು ಗಂಡು ಮಗುವನ್ನು ದತ್ತು ತೆಗೆದುಕೊಂಡಿದ್ದಾರೆ ಎಂಬ ಊಹಾಪೋಹಗಳು ಹರಡಿವೆ. ಆದರೆ, ಈ ವರದಿಗಳು ನಿಜವಲ್ಲ. ನಟಿ ಸುಶ್ಮಿತಾ ಸೇನ್ ವಿಡಿಯೋದಲ್ಲಿ ತಮ್ಮ ಒಬ್ಬರ ಸ್ನೇಹಿತರ ಮಗುವಿನ ಜತೆ ಕಾಣಿಸಿಕೊಂಡಿರುವುದು. ಡಿಸೆಂಬರ್ 23 ರಂದು ನಟಿ ಸುಶ್ಮಿತಾ ಸೇನ್ ಅವರು ಇನ್​ಸ್ಟಾಗ್ರಾಂನಲ್ಲಿ, ರೋಹ್ಮನ್ ಅವರ ಜತೆ ಬ್ರೇಕಪ್ ಬಗ್ಗೆ ಅಭಿಮಾನಿಗಳಿಗೆ ಖಚಿತಪಡಿಸಿದರು

    ಅಲ್ಲು ಅರ್ಜುನ್ ಮಗಳ ಜೊತೆ ಕುಣಿದ ಪೂಜಾ ಹೆಗ್ಡೆ! ಯಾವ ಹಾಡು ಗೊತ್ತಾ? ವಿಡಿಯೋ ವೈರಲ್…

    ‘ಅವಳ ಖುಷಿಯೇ, ನನ್ನ ಖುಷಿ’ ಎಂದ ನಾಗ ಚೈತನ್ಯ! ಯಾರದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts