More

    FACT CHECK: ಗಣರಾಜ್ಯೋತ್ಸವದಂದು ರಾಹುಲ್​ ಗಾಂಧಿ ಎಡಗೈನಿಂದ ಧ್ವಜಕ್ಕೆ ಸೆಲ್ಯೂಟ್​ ಮಾಡಿದ್ದಾರಾ? ವೈರಲ್​ ಆದ ಫೋಟೋ ಹಿಂದಿನ ಸತ್ಯ ಏನು?

    ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆ ನಡೆದ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು.

    ರಾಷ್ಟ್ರಧ್ವಜಕ್ಕೆ ರಾಹುಲ್​ ಗಾಂಧಿಯವರು ತಮ್ಮ ಎಡಗೈನಲ್ಲಿ ಸೆಲ್ಯೂಟ್ ಮಾಡಿದ ಫೋಟೋ ಇದು. ಫೋಟೋ ನೋಡುತ್ತಲೇ ಅನೇಕರು ಟೀಕಿಸಿದ್ದರು.

    ಝೀ ನ್ಯೂಸ್​ ಗ್ಲೋಬಲ್​ ಫ್ಯಾನ್ಸ್​ ಎಂಬ ಫೇಸ್​ಬುಕ್​ ಪೇಜ್​ನಲ್ಲಿ ರಾಹುಲ್​ ಗಾಂಧಿಯವರು ಎಡಗೈನಲ್ಲಿ ಸೆಲ್ಯೂಟ್​ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ಇಲ್ಲಿ ನೋಡಿ, ಇವರೊಬ್ಬ ಗ್ರೇಟ್​ ಲೀಡರ್​. ಯಾವ ಕೈಯಲ್ಲಿ ಸೆಲ್ಯೂಟ್ ಮಾಡಬೇಕು ಗೊತ್ತಿಲ್ಲ. ಇವರಿಗೆ ಪ್ರಧಾನ ಮಂತ್ರಿ ಆಗುವ ಆಸೆ ಬೇರೆ ಇದೆಯಂತೆ ಎಂದು ಕ್ಯಾಪ್ಷನ್​ ಬರೆಯಲಾಗಿತ್ತು.

    ಆದರೆ ಈ ಫೋಟೋದ ಸತ್ಯಾಸತ್ಯತೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್ ವಾರ್​ ರೂಂ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ರಾಹುಲ್​ ಗಾಂಧಿಯವರು ಎಡಗೈನಿಂದ ಸೆಲ್ಯೂಟ್ ಮಾಡಿಲ್ಲ. ಅದರ ಒರಿಜಿನಲ್​ ಪೋಟೋ ಸುಮಾರು 9 ವರ್ಷ ಹಳೆಯದು ಎಂಬುದು ಬೆಳಕಿಗೆ ಬಂದಿದೆ.

    ಈ ಫೋಟೋವನ್ನು ಫೇಸ್​ಬುಕ್​ನಲ್ಲಿ ಹಾಕುತ್ತಿದ್ದಂತೆ ಸುಮಾರು 600 ಬಾರಿ ಶೇರ್​ ಆಗಿದೆ. ಆದರೆ ಅದೇ ಫೋಟೋವನ್ನು ರಿವರ್ಸ್​ ಇಮೇಜ್​ ಸರ್ಚ್​ಗೆ ಹಾಕಿದಾಗ ಅದು 2011ರಲ್ಲಿಯೇ ಹಲವು ನ್ಯೂಸ್​ ವೆಬ್ ಸೈಟ್​ಗಳಲ್ಲಿ ಪ್ರಕಟವಾಗಿತ್ತು ಎಂಬುದು ಗೊತ್ತಾಗಿದೆ. ಇದೇ ಫೋಟೋ 2011ರ ಆಗಸ್ಟ್​ 15ರಂದು ಎನ್​ಡಿ ಟಿವಿ ಮತ್ತು ಝೀ ನ್ಯೂಸ್​ ವೆಬ್​ಸೈಟ್​ಗಳಲ್ಲಿ ಪಬ್ಲಿಶ್​ ಆಗಿದೆ. ಹಾಗೇ ಗೆಟ್ಟಿ ಇಮೇಜಸ್​ನ ವೆಬ್​ಸೈಟ್​ನಲ್ಲೂ ಇದೇ ಫೋಟೋ ಇದೆ.

    ಅಂದು ರಾಹುಲ್​ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದರು. ಫೋಟೋ ಕ್ಯಾಪ್ಷನ್​ನಲ್ಲಿ ಕೂಡ ಅದನ್ನೇ ಉಲ್ಲೇಖಿಸಲಾಗಿದೆ. ಎಐಸಿಸಿ ಅಧ್ಯಕ್ಷ 65ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂಬುದು ಸುದ್ದಿಯ ಸಾರಾಂಶ.
    ಇನ್ನೊಂದು ಮುಖ್ಯವಿಷಯ ಏನೆಂದರೆ ರಾಹುಲ್​ ಗಾಂಧಿ ಅಂದು ತಮ್ಮ ಬಲಗೈನಿಂದಲೇ ಧ್ವಜಕ್ಕೆ ಸೆಲ್ಯೂಟ್​ ಮಾಡಿದ್ದರು. ಆದರೆ ಅದನ್ನು ಫೋಟೋಶಾಪ್​ ಮೂಲಕ ಇನ್ವರ್ಟ್​ ಮಾಡಿ ಎಡಿಟ್​ ಮಾಡಲಾಗಿದೆ ಎಂದು ಫ್ಯಾಕ್ಟ್​ ಚೆಕ್​ನಿಂದ ಗೊತ್ತಾಗಿದೆ.(ಏಜೆನ್ಸೀಸ್​)

    FACT CHECK: ಗಣರಾಜ್ಯೋತ್ಸವದಂದು ರಾಹುಲ್​ ಗಾಂಧಿ ಎಡಗೈನಿಂದ ಧ್ವಜಕ್ಕೆ ಸೆಲ್ಯೂಟ್​ ಮಾಡಿದ್ದಾರಾ? ವೈರಲ್​ ಆದ ಫೋಟೋ ಹಿಂದಿನ ಸತ್ಯ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts