More

    Fact Check| ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ಪತ್ನಿ ಜಶೋದಾಬೆನ್ ಭಾಗಿಯಾಗಿದ್ದರಾ?

    ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾಬೆನ್​, ಪ್ರತಿಭಟನೆ ನಡೆಸಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ವೈರಲ್​ ಮಾಡಿರುವ ಸುದ್ದಿ ಸುಳ್ಳೆಂಬು ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗವಾಗಿದೆ.

    ಪತ್ರಿಭಟನೆ ನಡೆಸುತ್ತಿರುವ ಮಹಿಳೆಯರ ಗುಂಪಿನಲ್ಲಿ ಜಶೋದಾ ಬೆನ್​ ಇರುವ ಫೋಟೋವನ್ನು ತೌಸಿಫ್​ ನೂರಿ ಎಂಬ ಫೇಸ್​ಬುಕ್​ ಬಳಕೆದಾರ ಅಪ್​ಲೋಡ್​ ಮಾಡಿಕೊಂಡಿದ್ದಾರೆ. ಅಲ್ಲದೆ, ಝೋಯಾ ಹೆಸರಿನ ಟ್ವಿಟರ್​ ಖಾತೆಯಲ್ಲೂ ಪೋಸ್ಟ್​ ಮಾಡಲಾಗಿದೆ. ಅದಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಶಹೀನ್​ ಬಾಘ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜಶೋದಾಬೆನ್​ ಸಾಥ್​ ನೀಡಿದರು ಎಂದು ಅಡಿಬರಹವನ್ನು ಬರೆದು ವೈರಲ್​ ಮಾಡಿದ್ದಾರೆ. ಅಲ್ಲದೆ, ಈ ಪೋಸ್ಟ್​ ಅನ್ನು ಅನೇಕ ಮಂದಿ ಶೇರ್​ ಕೂಡ ಮಾಡಿಕೊಂಡಿದ್ದಾರೆ.​

    भक्तो तुम्हारी अम्मा यसोदा मैया भी #ShaheenBaghProtest पहुंच गई पैसे लेने …🧐लेकिन तुम्हारे पप्पा #मोदीजी_शाहीनबाग_कब_आओगे

    Tauseef Noori ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಜನವರಿ 18, 2020

    ಈ ವೈರಲ್​ ಫೋಟೋ ಬೂಮ್​ ವೆಬ್​ಸೈಟ್​ ಗಮನಕ್ಕೆ ಬಂದು ಸತ್ಯಾಂಶ ತಿಳಿಯಲು ಫ್ಯಾಕ್ಟ್​ಚೆಕ್​ ನಡೆಸಿದಾಗ ಅಸಲಿ ಮಾಹಿತಿ ಬಹಿರಂಗವಾಗಿದೆ. ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ಗೆ ಹಾಕಿ ನೋಡಿದಾಗ, ಫೋಟೋ ಹಳೆಯದು ಎಂದು ತಿಳಿದುಬಂದಿದೆ.

    ಫೋಟೋ ಸಂಬಂಧ ಡೆಕನ್​ ಕ್ರೋನಿಕಲ್​ ಮಾಧ್ಯಮದಲ್ಲಿ 2016, ಫೆಬ್ರವರಿ 13ರಂದು “ಅನಾಥರು, ಕೊಳಗೇರಿ ನಿವಾಸಿಗಳ ಪರ ನರೇಂದ್ರ ಮೋದಿ ಪತ್ನಿ ಉಪವಾಸ ಸತ್ಯಾಗ್ರಹ” ಎಂಬ ಶೀರ್ಷಿಕೆಯೊಂದಿಗೆ ವರದಿ ಪ್ರಕಟವಾಗಿದೆ.

    ಇದರ ಪ್ರಕಾರ ಮಾನ್ಸೂನ್​ ಋತುವಿನಲ್ಲಿ ಕೊಳಗೇರಿ ನಿವಾಸಿಗಳ ಮನೆಗಳನ್ನು ಧ್ವಂಸ ಮಾಡಿದ್ದಕ್ಕೆ ಆಜಾದ್​ ಮೈದಾನದಲ್ಲಿ ಪ್ರಧಾನಿ ಮೋದಿ ಪತ್ನಿ ಜಶೋದಾಬೆನ್​ ಉಪವಾಸ ಕುಳಿತಿದ್ದರು. ಹೀಗಾಗಿ ಸದ್ಯ ವೈರಲ್​ ಮಾಡಿರುವ ಫೋಟೋಗೂ ಸಿಎಎ ಪ್ರತಿಭಟನೆಗೂ ಸಂಬಂಧವಿಲ್ಲ ಎಂಬುದು ಫ್ಯಾಕ್ಟ್​ಚೆಕ್​ ಬಯಲಿಗೆ ಎಳೆದಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts