More

    FACT CHECK| ಛಪಾಕ್​ ಸಿನಿಮಾದಲ್ಲಿ ಧರ್ಮದ ಕಾರಣಕ್ಕೆ ಆ್ಯಸಿಡ್ ದಾಳಿಕೋರನ ಹೆಸರನ್ನು ರಾಜೇಶ್ ಎಂದು ಬದಲಾಯಿಸಲಾಗಿದೆಯೇ?

    ದೀಪಿಕಾ ಪಡುಕೋಣೆ ಜೆಎನ್​ಯುಗೆ ಭೇಟಿ ನೀಡಿದ ನಂತರದ ಬೆಳವಣಿಗೆಯಲ್ಲಿ ಬುಧವಾರ ಬೆಳಗ್ಗೆ ಟ್ವಿಟರ್​ನಲ್ಲಿ #shameonbollywood ಟ್ರೆಂಡ್ ಆಗಿತ್ತು. ಅಲ್ಲದೆ, #Rajesh ಮತ್ತು #NadeemKhan ಹೆಸರುಗಳು ಹ್ಯಾಷ್​ ಟ್ಯಾಗ್ ಇಲ್ಲದೆಯೇ ಟ್ರೆಂಡ್ ಆಗಿತ್ತು. ಬುಧವಾರ ಸಂಜೆ ವೇಳೆಗೆ ಇದರ ಜತೆಗೆ #BashirKhan ಎಂಬ ಹೆಸರೂ ಟ್ರೆಂಡಿಂಗ್​ನಲ್ಲಿತ್ತು.

    ಈ ಟ್ರೆಂಡ್​ಗಳನ್ನು ಗಮನಿಸಿದರೆ ದೀಪಿಕಾ ಪಡುಕೋಣೆ ನಟನೆಯ ಛಪಾಕ್ ಸಿನಿಮಾ ಬಿಡುಗಡೆಗೆ ಮೊದಲೇ ಸದ್ದು ಮಾಡುತ್ತಿದ್ದು, ಧಾರ್ಮಿಕ ಕಾರಣಗಳಿಗೆ ಆ್ಯಸಿಡ್ ದಾಳಿಕೋರನ ಹೆಸರನ್ನು ರಾಜೇಶ್ (#Rajesh) ಎಂದು ಬದಲಾಯಿಸಲಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂತು.
    ಈ ಸಿನಿಮಾ ಲಕ್ಷ್ಮಿ ಅಗರವಾಲ್ ಎಂಬ ಮಹಿಳೆಯ ನಿಜ ಜೀವನದ ಕಥೆಯನ್ನು ಆಧರಿಸಿದ್ದಾಗಿದೆ. ನಿಜ ಜೀವನದಲ್ಲಿ ಆ್ಯಸಿಡ್ ದಾಳಿಕೋರನ ಹೆಸರು ನದೀಂ ಖಾನ್​ ( #NadeemKhan). ಸ್ವರಾಜ್ಯ ಎಂಬ ವೆಬ್ ತಾಣದಲ್ಲಿ ಈ ಬಗ್ಗೆ ಲೇಖನವೊಂದು ಪ್ರಕಟವಾದ ಬೆನ್ನಲ್ಲೇ #Rajesh ಮತ್ತು #NadeemKhan ಹೆಸರುಗಳು ಟ್ರೆಂಡ್ ಆದವು.

    ಸ್ವರಾಜ್ಯದ ಲೇಖನದ ಸಾರ: ಛಪಾಕ್ ಸಿನಿಮಾ ಲಕ್ಷ್ಮಿ ಅಗರವಾಲ್ ಅವರ ಜೀವನಾಧಾರಿತ ಸಿನಿಮಾ. ನಿಜ ಜೀವನದಲ್ಲಿ 2005ರಲ್ಲಿ ನಡೆದ ಘಟನೆ ಇದು. ಆಗ ಲಕ್ಷ್ಮಿಗೆ 15 ವರ್ಷ. ದೆಹಲಿಯಲ್ಲಿ ವಿದ್ಯಾರ್ಥಿನಿ. ಖಾನ್ ಮಾರ್ಕೆಟ್​ನ ಬುಕ್​ಸ್ಟೋರ್​ಗೆ ಹೋಗುತ್ತಿದ್ದ ವೇಳೆ ನದೀಂ ಖಾನ್ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಲಕ್ಷ್ಮಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು. ಖಾನ್​ ಅಲಿಯಾಸ್ ಗುಡ್ಡು ಲಕ್ಷ್ಮಿಯ ಬೆನ್ನು ಬಿದ್ದು ಮದುವೆಗೆ ಒತ್ತಾಯಿಸಿದ್ದ. ನಿರಾಕರಿಸಿದ್ದರ ಪರಿಣಾಮವೇ ಆ್ಯಸಿಡ್ ದಾಳಿ.

    ಆದರೆ, ಸಿನಿಮಾದಲ್ಲಿ ಹೆಸರುಗಳನ್ನು ಬದಲಾಯಿಸಿದ್ದು, ಆ್ಯಸಿಡ್ ದಾಳಿಕೋರನ ಹೆಸರನ್ನು ಮರೆಮಾಚಲಾಗಿದೆ. ರಾಜೇಶ್ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಚಿತ್ರದ ನಟರು ಮತ್ತು ಅವರ ಪಾತ್ರ ಪರಿಚಯದಲ್ಲೂ ಧಾರ್ಮಿಕ ಕಾರಣಕ್ಕೆ ಈ ಹೆಸರುಗಳನ್ನು ಮರೆಮಾಚಲಾಗಿದೆ.

    ವಾಸ್ತವ ಏನು?: ಸಿನಿಮಾದಲ್ಲಿ ನಿಜ ಜೀವನದ ಹೆಸರುಗಳನ್ನು ಬದಲಾಯಿಸಲಾಗಿದ್ದು, ಲಕ್ಷ್ಮಿಯ ಪಾತ್ರ ಸಿನಿಮಾದಲ್ಲಿ ಮಾಲತಿ ಅಗರ್​ವಾಲ್ ಆಗಿಯೂ ನದೀಂ ಹೆಸರು ಬಬ್ಬೂ ಅಲಿಯಾಸ್ ಬಷೀರ್ ಖಾನ್ ಆಗಿಯೂ ಬದಲಾಗಿದೆ. ಮಾಲತಿಯ ಬಾಯ್​ ಫ್ರೆಂಡ್ ಹೆಸರು ರಾಜೇಶ್ ಎಂದು ಹಿಂದುಸ್ತಾನ್​ಟೈಮ್ಸ್ ಫ್ಯಾಕ್ಟ್​ಚೆಕ್​ನಲ್ಲಿ ತಿಳಿಸಿದೆ. (ಏಜೆನ್ಸೀಸ್) 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts