More

    ದೇವನಹಳ್ಳಿ ವಿಹಾನ್ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ: ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ ಶಾಲಾ ಸಿಬ್ಬಂದಿ

    ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿಯ ಚಪ್ರಕಲ್ ಸಮೀಪದ ವಿಹಾನ್ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ಸಡಗರ ಕಂಡು ಬಂತು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹಾಗೂ ಪಾಲಕರ ಸಹಕಾರದೊಂದಿಗೆ ಸಂಕ್ರಾಂತಿ ಆಚರಿಸಿದ್ದು ವಿಶೇಷವಾಗಿತ್ತು. ಈ ನಿಮಿತ್ತ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶಾಲೆಯ ಸಿಬ್ಬಂದಿ ಹಾಗೂ ಪಾಲಕರು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮದಲ್ಲಿ ಭಾಗಿಯಾದರು. ಈ ನಿಮಿತ್ತ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿತ್ತಾರದ ರಂಗೋಲಿ ಬಿಡಿಸಿ ಸಂತಸಪಟ್ಟರು.

    ಶಾಲಾ ಮೈದಾನದಲ್ಲಿ ರಾಗಿ ರಾಶಿ ಮಾಡಿ ಕಬ್ಬು, ಎಳ್ಳು-ಬೆಲ್ಲ ಇಟ್ಟು ಪೂಜಿಸಿ, ಸುಗ್ಗಿ ಮಾಡಿ, ಎಲ್ಲರೂ ಭೋಜನ ಸವಿದರು.

    21ನೇ ಶತಮಾನದಲ್ಲಿ ಸಾಮಾಜಿಕ ಜಾಲತಾಣದ ಯುಗದಲ್ಲಿ ಗ್ರಾಮೀಣ ಭವ್ಯಪರಂಪರೆಯನ್ನು ಮಕ್ಕಳಿಗೆ ತಿಳಿಸಲು ಮರೆತ್ತಿದ್ದೇವೆ. ಈಗಲೂ ನಗರ ಪ್ರದೇಶಗಳ ಸಾಕಷ್ಟು ಪ್ರತಿಷ್ಠಿತ ಶಾಲೆಗಳ ಮಕ್ಕಳಿಗೆ ರಾಗಿ, ಭತ್ತ ಎಲ್ಲಿ ಬೆಳೆಯುತ್ತಾರೆ ಎಂಬುದೇ ತಿಳಿದಿಲ್ಲ ಎಂದು ಶಾಲೆ ಸಂಸ್ಥಾಪಕ ಪ್ರತಾಪ್ ಯಾದವ್ ಹೇಳಿದರು.

    ದೇಶೀಯ ಪರಂಪರೆ, ಗ್ರಾಮೀಣ ಸೊಗಡು, ಹಳ್ಳಿಗಳ ಚಿತ್ರಣ ಪರಿಚಯಿಸಬೇಕು. ಸಂಕ್ರಾಂತಿ ಸೇರಿ ನಮ್ಮ ಪರಂಪರೆಯ ಹಬ್ಬಗಳ ಸಂಸ್ಕೃತಿಯನ್ನು ಪರಿಚಯಿಸಬೇಕು ಎಂಬ ಹಂಬಲದಿಂದ ಸಂಕ್ರಾಂತಿ ಸುಗ್ಗಿ ಹಮ್ಮಿಕೊಳ್ಳಲಾಗಿದೆ ಎಂದರು.

    ರಂಗೋಲಿ ಸ್ಪರ್ಧೆ, ಜಾನಪದ ಗೀತೆಗಳ ಸ್ಪರ್ಧೆ, ಕೋಲಾಟ, ಹಗ್ಗ ಜಗ್ಗಾಟ, ಅಡುಗೆ ಮಾಡುವ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶನಾಯಕ್, ಯೋಜನಾಧಿಕಾರಿ ಅಕ್ಷತರೈ, ಕುಂದಾಣ ಗ್ರಾ.ಪಂ ಸದಸ್ಯ ಬಿ.ಕೆ.ನಾರಾಯಣಸ್ವಾಮಿ ಹಾಗೂ ಶಾಲೆಯ ಭೋಧಕ ವೃಂದ ಮತ್ತು ಪೋಷಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts