More

    ಅಲ್ಲಿಪುರ ಮಹಾದೇವ ತಾತನವರ ಪುಣ್ಯಾರಾಧನೆ 17ರಿಂದ

    ಧಾರವಾಡ: ರಾಜೀವ ಗಾಂಧಿನಗರದಲ್ಲಿರುವ ಶ್ರೀ ಅಲ್ಲಿಪುರ ಮಹಾದೇವ ತಾತನವರ ಮಠದಲ್ಲಿ ಸದ್ಗುರು ಅಲ್ಲೀಪುರ ಮಹಾದೇವ ತಾತನವರ 36ನೇ ವರ್ಷದ ಪುಣ್ಯಾರಾಧನೆ ಫೆ. 17ಹಾಗೂ 18 ರಂದು ಜರುಗಲಿದೆ. 17ರಂದು ಬೆಳಗ್ಗೆ 7.10ಕ್ಕೆ ಷಟ್‌ಸ್ಥಳ ಧ್ವಜಾರೋಹಣ. 10ಕ್ಕೆ ಶ್ರೀ ತಾತನವರ ವಸಂತೋತ್ಸವ ಹಾಗೂ ತೆಪ್ಪೋತ್ಸವ. ಸಂಜೆ 6ಕ್ಕೆ ದೀಪಾಲಂಕಾರ, ಗಾನಸುಧಾ, ಶೀತಲ ಸತೀಶ ಜೋಶಿ ತಂಡ ಮತ್ತು ಪ್ರಣಮ್ಯದೇವಿ ವಿಶ್ವೇಶ್ವರಯ್ಯ ಹಿರೇಮಠ ಅವರಿಂದ ಭರತನಾಟ್ಯ. ಪತ್ರಕರ್ತ ಪ್ರಸನ್ನಕುಮಾರ ಹಿರೇಮಠ ಅಧ್ಯಕ್ಷತೆ ವಹಿಸುವರು. ಮುಖ್ಯಶಿಕ್ಷಕಿ ಡಾ. ಭಾಗ್ಯಜ್ಯೋತಿ ಹಿರೇಮಠ ಅತಿಥಿಗಳಾಗಿ ಭಾಗವಹಿಸುವರು.
    18ರಂದು ಬೆಳಗಿನ ಜಾವ ತಾತನವರ ಗದ್ದುಗೆಗೆ ರುದ್ರಾಭಿಷೇಕ, ಅಗ್ನಿಕುಂಡ ಕಾರ್ಯಕ್ರಮ. 9ಕ್ಕೆ ಪಲ್ಲಕ್ಕಿ ಉತ್ಸವ. 11ಕ್ಕೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ. ರಾಯನಾಳ ರೇವಣಸಿದ್ಧೇಶ್ವರಮಠದ ಶ್ರೀ ಅಭಿನವ ರೇವಣಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಿವಾನಂದ ಹರಕುಣಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಾಹಿತಿ ಡಾ. ಸಂಗಮನಾಥ ಲೋಕಾಪುರ ಪಾಲ್ಗೊಳ್ಳುವರು.

    ಮಹಾದೇವ ತಾತನವರ ಚರಿತ್ರೆ
    ಜ್ಞಾನಗುರು ಶ್ರೀ ಅಲ್ಲಿಪುರ ತಾತನವರು ಮಾನವ ಕುಲೋದ್ಧಾರಕ್ಕಾಗಿಯೇ ಶಿವನ ಆಣತಿಯಂತೆ ಹುಟ್ಟಿಬಂದ ಮಹಾಯೋಗದ ಸಿದ್ಧಪುರುಷರು. ಜನಸೇವೆಯಲ್ಲಿಯೇ ಜನಾರ್ಧನನನ್ನು ಕಂಡ ಶಿವಯೋಗಿ ಸಾಮ್ರಾಟರು. ತಾತನವರು ಗೌರೀಶಂಕರದ ಗುಹೆಯಲ್ಲಿ ಅಖಂಡ ತಪ್ಪಸ್ಸು ಆಚರಿಸಿ, ಪರಮೇಶ್ವರನನ್ನು ಕಂಡು ಶಿವನಿಂದ ಮಾನವ ಕಲ್ಯಾಣದ ವರ ಪಡೆದವರು.
    ಮೈಸೂರಿನ ಬಂಟವಾಳ ಗ್ರಾಮದಲ್ಲಿ ಭಾದ್ರಪದ ಮಾಸದ ಶುಕ್ಲಪಕ್ಷ ಚವತಿಯ ದಿನ ಗಣೇಶ ಚತುರ್ಥಿ ದಿನ ಮರಯ್ಯಸ್ವಾಮಿ-ಮಹದೇವಮ್ಮನವರ ಪುಣ್ಯ ಗರ್ಭದಲ್ಲಿ ಮಹದೇವ ತಾತನವರು ಜನಿಸಿದರು. ಮುಂದೆ ಕೆಲ ದಿನಗಳ ಬಳಿಕ ಜ್ಞಾನದ ಹಸಿವಿನಿಂದ ಕಾಶಿ ಕ್ಷೇತ್ರಕ್ಕೆ ತೆರಳಿದರು. ಅಲ್ಲಿ ಗಂಗಾನದಿಯಲ್ಲಿ ಒಂಟಿಗಾಲಿನಿಂದ ತಪಸ್ಸು ಮಾಡುವಾಗ ಗಂಗಾದೇವಿ ಪ್ರತ್ಯಕ್ಷಳಾಗಿ ನೀಡಿದ ಅಮೃತ ಕಲಶವನ್ನು ಪಾನಮಾಡಿದ ಮೃತ್ಯುಂಜಯ ಸ್ವರೂಪರು.
    ಜಾತಿ, ಮತಗಳ ಭೇದವಿಲ್ಲದೇ ಮಾನವ ಧರ್ಮ ಒಂದೇ ಎಂದು ಸಾರುತ್ತ ಮನುಕುಲ ಉದ್ಧರಿಸಿದ ತಾತನವರು ವಿವಿಧೆಡೆ ಒಟ್ಟು 9 ಮಠಗಳನ್ನು ಸ್ಥಾಪಿಸಿದ್ದಾರೆ. ಬೇಡಿ ಬಂದ ಭಕ್ತರ ಕಷ್ಟ, ಕಾರ್ಪಣ್ಯ ನಿವಾರಿಸುತ್ತ ಇಂದಿಗೂ ಭಕ್ತರನ್ನು ಕಾಪಾಡುತ್ತಿದ್ದಾರೆ.
    ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಬಳಿ ತ್ರಿವೇಣಿ ಸಂಗಮ ಸ್ಥಳ ಸಂಗಮಕ್ಷೇತ್ರವನ್ನು ತಾತನವರು ಜೀವಂತ ಸಮಾಧಿಗಾಗಿ ಆರಿಸಿಕೊಂಡರು. ಅಲ್ಲಿ 1987ರ ಡಿಸೆಂಬರ್ 30ರಂದು ವೈಕುಂಠ ಏಕಾದಶಿ ದಿನ ಶಿವಯೋಗಿ ಸಾಮ್ರಾಟರು ಶಿವಯೋಗದಲ್ಲಿಯೇ ದಿವ್ಯ ಸಮಾಧಿ ಹೊಂದಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts