More

    ಜಾನಪದ ವಿದ್ವಾಂಸ ಬಸವಲಿಂಗಯ್ಯ ಹಿರೇಮಠ ನಿಧನ

    ಧಾರವಾಡ: ಜಾನಪದ ವಿದ್ವಾಂಸ ಬಸವಲಿಂಗಯ್ಯ ಹಿರೇಮಠ (63) ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

    ಧಾರವಾಡದ ನಿವಾಸಿಯಾಗಿದ್ದ ಬಸವಲಿಂಗಯ್ಯ ಜಾನಪದ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು. ರಂಗಭೂಮಿ ಜೊತೆಗೆ ಜಾನಪದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಬಸವಲಿಂಗಯ್ಯ ಅವರು ಬೆಳಗಾವಿ ಜಿಲ್ಲೆ ಬೇಲೂರು ಗ್ರಾಮದ ಮೂಲ ನಿವಾಸಿ. ಅವರ ಪತ್ನಿ ವಿಶ್ವೇಶ್ವರಿ ಕೂಡ ಜಾನಪದ ಕಲಾವಿದೆ ಆಗಿದ್ದಾರೆ. ದಂಪತಿಯಿಂದ ಅನೇಕ ಜಾನಪದ ಕಾರ್ಯಕ್ರಮಗಳು ಕೂಡ ಪ್ರಸ್ತುತ ಪಡಿಸಲಾಗಿದೆ.

    ದಂಪತಿ ಜಾನಪದ ಸಂಶೋಧನಾ ಕೇಂದ್ರದ ಮೂಲಕ ಕಲಾ ಸೇವೆ ಮಾಡುತ್ತಿದ್ದರು. ಪತ್ನಿ ಹಾಗೂ ಓರ್ವ ಪುತ್ರನನ್ನು ಬಸವಲಿಂಗಯ್ಯ ಅವರು ಅಗಲಿದ್ದಾರೆ. ಸುಮಾರು 4000 ಹಾಡುಗಳನ್ನು ಹಾಡಿದ್ದಾರೆ. ಜಾನಪದಗಳ ಜೊತೆಗೆ ರಂಗಗೀತೆ, ತತ್ವಪದ, ಭಾವಗೀತೆಗಳನ್ನೂ ಹಾಡುತ್ತಿದ್ದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts