More

    ಧರ್ಮಣ್ಣಂಗೆ ‘ರಾಜಯೋಗ’; ನಂಬಿಕೆ-ಮೂಢನಂಬಿಕೆಗಳ ಕುರಿತಾದ ಚಿತ್ರದಲ್ಲಿ ಹೀರೋ …

    ಬೆಂಗಳೂರು: ಇದುವರೆಗೂ ಹಲವು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ‘ರಾಮ ರಾಮಾ ರೇ’ ಖ್ಯಾತಿಯ ಧರ್ಮಣ್ಣ ಈಗ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ‘ರಾಜಯೋಗ’ ಎಂಬ ಚಿತ್ರಕ್ಕೆ ಸದ್ದಿಲ್ಲದೆ ಹೀರೋ ಆಗಿದ್ದಾರೆ. ಈಗಾಗಲೇ 10 ದಿನಗಳ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ‘ಲಾಫಿಂಗ್​ ಬುದ್ಧ’ನಾದ ಪ್ರಮೋದ್​ ಶೆಟ್ಟಿ; ಚಿತ್ರೀಕರಣ ಶುರು

    ಈ ಹಿಂದೆ ಕೆಲವು ಧಾರಾವಾಹಿಗಳಿಗೆ ಕೆಲಸ ಮಾಡಿ ಅನುಭವವಿರುವ ಲಿಂಗರಾಜ ಉಚ್ಚಂಗಿದುರ್ಗ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

    ಚಿತ್ರದ ಕುರಿತು ಮಾತನಾಡುವ ಅವರು, ‘ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಎಲ್ಲರಿಗೂ ಒಂದಲ್ಲ ಒಂದು ದಿನ ರಾಜಯೋಗ ಬಂದೇ ಬರುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆ. ಧರ್ಮಣ್ಣ ಅವರನ್ನು ‘ರಾಮ ರಾಮ ರೇ’ ಚಿತ್ರದಲ್ಲಿ ನೋಡಿದ್ದೆ, ಅವರ ಪಾತ್ರ ಅಭಿನಯ ಇಷ್ಟವಾಗಿತ್ತು. ಈ ಚಿತ್ರದ ಮೂಲಕ ಅವರು ಹೀರೋ ಆಗುತ್ತಿದ್ದಾರೆ. ಇದು ತಂದೆ-ಮಗನ ಸುತ್ತ ನಡೆಯುವ ಕಥೆ. ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗನಿಂದ ದುರಾದೃಷ್ಟ ಬರುತ್ತದೆ ಎಂದು ತಂದೆ ನಂಬಿರುತ್ತಾನೆ. ಆ ಮಗನಿಂದ ಅವನಿಗೆ ಹೇಗೆ ರಾಜಯೋಗ ಬರುತ್ತದೆ ಎನ್ನುವುದು ಚಿತ್ರದ ಕಥೆ. ಜೋತಿಷ್ಯ ಸುಳ್ಳಲ್ಲ, ಅದನ್ನು ಕೆಲವರು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇವೆ. ಒಂದು ಗಂಭೀರ ವಿಷಯವನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನ ಮಾಡಿದ್ದೆವೆ’ ಎನ್ನುತ್ತಾರೆ.

    ಈ ಚಿತ್ರದಲ್ಲಿ ಕಾಮಿಡಿ, ಎಮೋಷನ್​ ಎಲ್ಲವೂ ಇದ್ದು, ಈ ತರಹದ ಪಾತ್ರ ಮಾಡಿಲ್ಲ ಎನ್ನುತ್ತಾರೆ ಧರ್ಮಣ್ಣ. ‘ಗ್ರಾಮೀಣ ಭಾಗದಲ್ಲಿ ನಡೆಯೋ ಕಥೆಯನ್ನು ಲಿಂಗರಾಜು ಅವರು ಮಾಡಿಕೊಂಡಿದ್ದಾರೆ. ಇಲ್ಲಿ ಎಲ್ಲ ಪಾತ್ರಗಳಿಗೂ ಸಮಾನ ಅವಕಾಶವಿದೆ. ನನ್ನನ್ನು ನಂಬಿ ಇಂಥ ದೊಡ್ಡ ಪಾತ್ರವನ್ನು ಕೊಟ್ಟಿದ್ದಾರೆ’ ಎಂದು ಹೇಳಿದರು,

    ಇದನ್ನೂ ಓದಿ: ಜಗದ ಪ್ರೇಕ್ಷಕರಿಗೆ ನಾಟಿತು ‘ನಾಟು ನಾಟು’; ಆಸ್ಕರ್​ನಲ್ಲಿ ಎಲ್ರೂ ಎದ್ದು ನಿಂತು ಚಪ್ಪಾಳೆ ಹೊಡೆದ್ರು!

    ‘ರಾಜಯೋಗ’ದಲ್ಲಿ ಧರ್ಮಣ್ಣಗೆ ನಾಯಕಿಯಾಗಿ ನಿರೀಕ್ಷಾ ರಾವ್​ ಎಂಬ ರಂಗಭೂಮಿಯ ನಟಿ ಇದ್ದಾರೆ. ಮಿಕ್ಕಂತೆ ನಾಗೇಂದ್ರ ಶಾನ್​, ಕೃಷ್ಣಮೂರ್ತಿ ಕವತ್ತಾರ್​, ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಮುಂತಾದವರು ನಟಿಸುತ್ತಿದ್ದಾರೆ. ಈ ಹಿಂದೆ ‘ಕನ್ನಡ ಗೊತ್ತಿಲ್ಲ’ ಚಿತ್ರ ನಿರ್ಮಿಸಿದ್ದ ಕುಮಾರ ಕಂಠೀರವ ಚಿತ್ರ ನಿರ್ಮಿಸುತ್ತಿದ್ದು, ಅವರಿಗೆ ಐವರು ಸಾಥ್​ ನೀಡಿದ್ದಾರೆ. ಅಕ್ಷಯ್​ ರಿಷಭ್​ ಸಂಗೀತ, ವಿಷ್ಣುಪ್ರಸಾದ್​ ಛಾಯಾಗ್ರಹಣ ಮತ್ತು ಬಿ.ಎಸ್​. ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ.

    ಡೆತ್​ ನೋಟ್​ ಬರೆದ ನಟಿ ಪಾಯಲ್​ ಘೋಷ್​ ; ನಾನು ಸತ್ತರೆ ಇವರೇ ಕಾರಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts