More

    ಸತ್ವವಿರುವ ಧರ್ಮಕ್ಕೆ ಎಂದಿಗೂ ಅಪಾಯವಿಲ್ಲ

    ಕಡೂರು: ಮಾನವೀಯ ಮೌಲ್ಯಗಳು ಜೀವನದ ಆಧಾರಸ್ತಂಭಗಳಾಗಿದ್ದು,ಆದರ್ಶ ಗ್ರಾಮದ ನಿರ್ಮಾಣಕ್ಕೆ ಶಿವಶರಣರ ಪರಿಕಲ್ಪನೆಗೆ ಅನುಗುಣವಾಗಿ ಜೀವನ ಅಳವಡಿಸಿಕೊಳ್ಳಬೇಕಿದೆ ಎಂದು ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಹೇಳಿದರು. ಗಿರಿಯಾಪುರದಲ್ಲಿ ಸೋಮವಾರ ಆಯೋಜಿಸಿದ್ದ ಶಿವಾನುಭವ ಅಮೃತ ಮಹೋತ್ಸವ ಸಮ್ಮೇಳನದ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸತ್ವವಿರುವ ಧರ್ಮಕ್ಕೆ ಎಂದಿಗೂ ಅಪಾಯವಿಲ್ಲ, ಧರ್ಮ ದೇವರು ಮತ್ತು ಮಂದಿರಗಳ ಬಗ್ಗೆ ಮಾತನಾಡುವ ನಾವು ಮಾನವೀಯತೆಯ ಒಳಗೊಂಡು ಮಹಿಳಾ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ. ರಾಜಕಾರಣ ಸೇರಿದಂತೆ ಪ್ರತಿಯೊಂದು ರಂಗವೂ ವ್ಯಾಪಾರಿಕರಣಗೊಳ್ಳುತ್ತಿರುವುದು ವಿಪರ್ಯಾಸ ಎಂದರು. ಹಳ್ಳಿಗಳು ವೃದ್ಧಾಶ್ರಮವಾಗುತ್ತಿರುವ ಕಾಲಘಟ್ಟಕ್ಕೆ ತಲುಪುತ್ತಿದ್ದೇವೆ. ಈಗಿನ ಪರಿಸ್ಥಿತಿ ಹೀಗೆ ಮುಂದುವರಿದರೆ ವಿಶ್ವವನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ .ಕೃಷಿಕ, ಸೈನಿಕ, ಶಿಕ್ಷಕ ಮತ್ತು ಕಾರ್ಮಿಕರಿಗೆ ಗೌರವ ನೀಡದ ರಾಷ್ಟ್ರ ಎಂದಿಗೂ ಅಭಿವೃದ್ಧಿಯಾಗುವುದಿಲ್ಲ. ಆತಂಕದ ಸಂಕೀರ್ಣ ಪರಿಸ್ಥಿತಿಯಲ್ಲಿರುವ ವಿಶ್ವಕ್ಕೆ ಪ್ರಸ್ತುತ ಆಧ್ಯಾತ್ಮಿಕ ಶಕ್ತಿ ಮಾತ್ರ ನವಚೇತನ ನೀಡಬಲ್ಲದು ಎಂಬ ನಂಬಿಕೆ ನನ್ನದಾಗಿದೆ ಎಂದರು. ಭಾರತೀಯ ಸೇನೆ ನಿವೃತ್ತ ಜನರಲ್ ಬಿ.ಎಸ್.ರಾಜು ಮತ್ತು ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಜಿ.ಪಿ.ಜಗದೀಶ್ ಅವರನ್ನು ಗೌರವಿಸಲಾಯಿತು. ಮೈಸೂರು ಕುಂದೂರು ಮಠದ ಶರತ್‌ಚಂದ್ರ ಸ್ವಾಮೀಜಿ ವಿಭೂತಿ ಗ್ರಂಥ ಲೋಕಾರ್ಪಣೆ ಮಾಡಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts