More

    VIDEO| ಸ್ವಂತ ಹಣದಲ್ಲಿ 2.50 ಲಕ್ಷ ರೂ. ಮೌಲ್ಯದ ದಿನಸಿ ಖರೀದಿಸಿ ತಮ್ಮ ಠಾಣಾ ವ್ಯಾಪ್ತಿಯ ಬಡವರಿಗೆ ಹಂಚಿದ ಪಿಎಸ್​ಐ

    VIDEOಧಾರವಾಡ: ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಧಾರವಾಡ ಗ್ರಾಮೀಣ ಠಾಣೆ ಪಿಎಸ್‌ಐ ಮಹೇಂದ್ರ ಅವರು ಸಹಾಯಾಸ್ತ ಚಾಚಿದರು.

    ತಮ್ಮ ಸ್ವಂತ ಹಣದಲ್ಲಿ ಒಟ್ಟು 2.50 ಲಕ್ಷ ರೂ. ಮೌಲ್ಯದ ದಿನಸಿ ಖರೀದಿಸಿದ ಪಿಎಸ್‌ಐ ಮಹೇಂದ್ರ ಅವರು ಮನೆ ಮನೆಗೆ ಹೋಗಿ ಖುದ್ದು ವಿತರಣೆ ಮಾಡಿದರು. 5 ಕೆಜಿ ರವೆ, 5 ಕೆಜಿ ಅಕ್ಕಿ, 2 ಕೆಜಿ ಬೆಲ್ಲ, ಬೆಳೆ ಕಾಳು, ಅಡುಗೆ ಎಣ್ಣೆ ಇರುವ ಕಿಟ್ ತಯಾರಿಸಿ ವಿತರಣೆ ಮಾಡಿ ಮಾನವೀಯತೆ ಮೆರೆದರು.

    ಆಹಾರ ಸಾಮಾಗ್ರಿಯಲ್ಲದೇ, ಫೇಸ್​ ಮಾಸ್ಕ್​ಗಳನ್ನು ನೀಡಿ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ಪಿಎಸ್ಐ ಮಹೇಂದ್ರ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ನಿಮ್ಮ ಸೇವೆ ಮತ್ತಷ್ಟು ಮಂದಿಗೆ ಮಾದರಿಯಾಗಲಿ ಎಂದು ಹಾರೈಸಿದರು. (ದಿಗ್ವಿಜಯ ನ್ಯೂಸ್​)

    ಸ್ವಂತ ಹಣದಲ್ಲಿ 2.50 ಲಕ್ಷ ರೂ. ಮೌಲ್ಯದ ದಿನಸಿ ಖರೀದಿಸಿ ತಮ್ಮ ಠಾಣಾ ವ್ಯಾಪ್ತಿಯ ಬಡವರಿಗೆ ಹಂಚಿದ ಪಿಎಸ್​ಐ

    ಧಾರವಾಡ: ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಧಾರವಾಡ ಗ್ರಾಮೀಣ ಠಾಣೆ ಪಿಎಸ್‌ಐ ಮಹೇಂದ್ರ ಅವರು ಸಹಾಯಾಸ್ತ ಚಾಚಿದರು. #DharawadPolice #PSIMahendra #Humanity #FoodDistribution #PoorFamily #Coronavirus #Lockdown

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಏಪ್ರಿಲ್ 22, 2020

    ಲಾಕ್​ಡೌನ್​: ಕೇವಲ 10 ಜನರ ನಡುವೆ ಸರಳ ವಿವಾಹವಾದ ಅಂತಾರಾಷ್ಟ್ರೀಯ ಕುಸ್ತಿಪಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts