More

    ತರಬೇತಿ ಪಡೆಯದ ಪೈಲೆಟ್​ನಿಂದ ವಿಮಾನ ಲ್ಯಾಂಡಿಂಗ್​: ಈ ವಿಮಾನಯಾನಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

    ನವದೆಹಲಿ: ವಿಸ್ತಾರ ವಿಮಾನಯಾನಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಭಾರೀ ದಂಢ ವಿಧಿಸಿದೆ. ಪೈಲೆಟ್​ ಮಾಡಿದ ಅವಾಂತರದಿಂದ ವಿಸ್ತಾರ ವಿಮಾನಯಾನ ಸಂಸ್ಥೆ ಬರೋಬ್ಬರಿ 10 ಲಕ್ಷ ರೂ. ದಂಡ ತೆರಬೇಕಿದೆ.

    ಪ್ರಯಾಣಿಕರಿದ್ದ ವಿಮಾನವನ್ನು ತರಬೇತಿ ಇಲ್ಲದ ಪೈಲೆಟ್​​ನಿಂದ ಲ್ಯಾಂಡ್​ ಮಾಡಿಸಿದ್ದರಿಂದ ಡಿಜಿಸಿಎ ದಂಡ ವಿಧಿಸಿದೆ. ಮಧ್ಯಪ್ರದೇಶದ ಇಂದೋರ್​​ನಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ.

    ತರಬೇತಿ ಪಡೆಯದ ಪೈಲೆಟ್​​ ಪ್ರಯಾಣಿಕರಿದ್ದ ವಿಮಾನವನ್ನು ಲ್ಯಾಂಡಿಂಗ್​ ಮಾಡಿದ್ದರು. ಇದೀಗ ಇದು ಭಾರೀ ಚರ್ಚೆಗೂ ಗ್ರಾಸವಾಗಿದೆ. ತರಬೇತಿ ಇಲ್ಲದ ಪೈಲೆಟ್​ಗಳಿಗೆ ಅನುಮತಿ ನೀಡಿದ ವಿಸ್ತಾರ ಸಂಸ್ಥೆಗೆ ಡಿಜಿಸಿಎ ತರಾಟೆಗೆ ತೆಗೆದುಕೊಂಡಿದೆ.

    ವಿಮಾನದ ಕ್ಯಾಪ್ಟನ್​ ಅಥವಾ ಸಿಮ್ಯುಲೇಟರ್​ನಲ್ಲಿ ತರಬೇತಿ ಪಡೆಯದೆ ಇಳಿಸಲಾಗಿದ್ದು, ಇದು ವಿಮಾನದಲ್ಲಿದ್ದ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಗಂಭೀರ ಉಲ್ಲಂಘನೆಯಾಗಿದೆ. ಹಾಗಾಗಿ 10 ಲಕ್ಷ ರೂ. ದಂಡವನ್ನು ಪಾವತಿಸಬೇಕು ಎಂದು ಡಿಜಿಸಿಎ ತಿಳಿಸಿದೆ. ಸದ್ಯಕ್ಕೆ ಈ ವಿಮಾನ ಎಲ್ಲಿಂದ ಟೇಕ್​ಆಫ್​ ಆಗಿದೆ ಎಂಬ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಿಲ್ಲ. (ಏಜೆನ್ಸೀಸ್​)

    ಮೋದಿ ಹೇಳಿಕೊಟ್ಟ ಸಾಬುದಾನಿ ಖಿಚಡಿ: ಪ್ರಧಾನಿಯ ಅಡುಗೆ ಗುಟ್ಟು ಬಿಚ್ಚಿಟ್ಟ ಬಿಜೆಪಿ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts