More

    ದೇವಳಗಳಿಗೆ ಭಕ್ತರ ದರ್ಶನ ಅವಕಾಶ ಕ್ರಮ ಬಗ್ಗೆ ಚರ್ಚೆ:ಸಚಿವ ಕೋಟ ಶ್ರೀನಿವಾಸ ಪೂಜಾರಿ

    ಕೋಟ: ಕರೊನಾದಿಂದಾಗಿ ದೇವಳಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಜುಲೈ 5ರ ನಂತರ ಎಲ್ಲವೂ ಸರಿಯಾಗುವ ನಿರೀಕ್ಷೆಯಿದೆ. ದೇಗುಲಗಳನ್ನು ಯಾವ ರೀತಿ ಭಕ್ತರಿಗೆ ಪ್ರವೇಶ ನೀಡಬೇಕು. ಪೂಜೆಗಳನ್ನು ಯಾವ ರೀತಿ ನಡೆಸಬೇಕು ಎಂದು ಚರ್ಚಿಸಲಾಗುತ್ತಿದೆ ಎಂದು ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
    ಕೋಡಿ ಕನ್ಯಾನದಲ್ಲಿ ವಿಶೇಷ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ದೇವಳಗಳ ದೈವ ಪರಿಚಾರಕರನ್ನು ಕಲಾವಿದರ ಪಟ್ಟಿಗೆ ಸೇರಿಸಲಾಗಿದೆ. ಆದರೆ ಯಕ್ಷಗಾನ ಕಲಾವಿದರನ್ನು ಯಾವ ವ್ಯಾಪ್ತಿಗೂ ಸೇರಿಸಿಲ್ಲ. ಈ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು
    ರಾಜ್ಯದಲ್ಲಿ ಹಿಂದುಳಿದ ವರ್ಗದ ಒಟ್ಟು 2,400 ಹಾಸ್ಟೆಲ್‌ಗಳಿವೆ. ಅದರಲ್ಲಿ 1,92,000 ವಿದ್ಯಾರ್ಥಿಗಳಿದ್ದು, ಪ್ರತಿ ಹಾಸ್ಟೆಲ್‌ನಲ್ಲಿ 100 ಸಂಖ್ಯೆಯಾದರೆ ಅಡುಗೆಯವರು, ಮೇಲ್ವಿಚಾರಕರು, ತಾಲೂಕು ಮಟ್ಟದ ಅಧಿಕಾರಿಗಳು ಎಷ್ಟು ಜನ ಬೇಕು ಎಂದು ಚರ್ಚಿಸಲಾಗಿದೆ. ಕೆಲವು ಕಡೆಯಲ್ಲಿ ಅಡುಗೆಯವರನ್ನು ಗುತ್ತಿಗೆ ಆಧಾರದಲ್ಲಿ ಹಾಕಿಕೊಳ್ಳಲಾಗಿದೆ. ಮೇಲ್ವಿಚಾರಕರು ಕಡಿಮೆಯಾದಾಗ ಎರಡು ಹಾಸ್ಟೆಲ್‌ಗೆ ಒಬ್ಬರಂತೆ ಚಾರ್ಚ್ ನೀಡಲಾಗಿದೆ.
    ಸಮಸ್ಯೆ ಇರುವುದು ಗುತ್ತಿಗೆ ಆಧಾರದಲ್ಲಿ. ಅಡುಗೆ ಕೆಲಸಕ್ಕೆ ತೆಗೆದುಕೊಂಡವರಿಗೆ ಕರೊನಾ ಸಮಯದಲ್ಲಿ ಸಂಬಳ ನೀಡಿಲ್ಲ. ಅಡುಗೆ ಕೆಲಸವನ್ನೆ ನಂಬಿ ಇವರೆಲ್ಲ ಇರುವುದರಿಂದ ಆರ್ಥಿಕ ಇಲಾಖೆ ಜತೆ ಚರ್ಚೆ ನಡೆಸಿ ಇದಕ್ಕೊಂದು ಸೂಕ್ತ ಪರಿಹಾರ ನೀಡಲು ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts