More

    ದೇಶದ ಅಭಿವೃದ್ಧಿ ನುಂಗಿದ ಜಾತಿ ವ್ಯವಸ್ಥೆ

    ಸಿದ್ದಾಪುರ: ವಿದ್ಯಾರ್ಥಿಗಳು ಜೀವನದ ಪರೀಕ್ಷೆಗಳನ್ನು ಎದುರಿಸಲು ಪುಸ್ತಕಗಳನ್ನು ಓದಬೇಕು. ಅಂಬೇಡ್ಕರ್ ಪಾಂಡಿತ್ಯವೇ ಅವರಿಗೆ ಸಂವಿಧಾನ ಬರೆಯುವ ಅವಕಾಶವನ್ನು ಹುಡುಕಿಕೊಂಡು ಬರುವಂತೆ ಮಾಡಿತು ಎಂದು ರಾಜಪ್ಪ ಮಾಸ್ತರ್ ಸೊರಬ ಹೇಳಿದರು.

    ಪಟ್ಟಣದ ಹಾಳದಕಟ್ಟಾ ಸರ್ಕಾರಿ ಪದವಿ ಪೂರ್ವ ಕಾಲೇಜ್​ನಲ್ಲಿ ಸಮಾಜ ಕಲ್ಯಾಣ ಇಲಾಖೆ, ಸಹಯಾನ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಸೃ್ಪ್ಯತೆ ಆಚರಣೆ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ‘ವೀಸಕ್ಕಾಗಿ ಕಾಯುವ ಜನ’ (ಅಂಬೇಡ್ಕರ್ ಅವರ ಅನುಭವ ಕಥನ) ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

    ದೇಶದ ಅಭಿವೃದ್ಧಿಯನ್ನು ಜಾತಿ ನುಂಗಿ ಹಾಕಿದೆ. ಮನಸ್ಸಿನಲ್ಲಿ ಗೊಂದಲಗಳು ಇರಬಾರದು. ನಮಗೆ ಏನು ಅನಿಸುತ್ತದೆಯೋ ಅದನ್ನು ಆಯ್ಕೆ ಮಾಡಿಕೊಂಡು ಅನ್ಯಾಯದ ವಿರುದ್ಧ ಪ್ರತಿಭಟಿಸುವಂತೆ ಆಗಬೇಕು ಎಂದರು.

    ತಹಸೀಲ್ದಾರ್ ಪ್ರಸಾದ ಎಸ್.ಎ. ಕಾರ್ಯಕ್ರಮ ಉದ್ಘಾಟಿಸಿದರು. ಇತಿಹಾಸ ನಿವೃತ್ತ ಪ್ರಾಧ್ಯಾಪಕ ಡಿ.ಐ. ಫರ್ನಾಕರ್, ಎಂಜಿಸಿ ಕಾಲೇಜ್ ಕನ್ನಡ ವಿಭಾಗದ ವಿಠ್ಠಲ ಭಂಡಾರಿ, ತಾಪಂ ಇಒ ಪ್ರಶಾಂತ ರಾವ್, ಹಿತರಕ್ಷಣಾ ಸಮಿತಿಯ ಎಚ್.ಕೆ. ಶಿವಾನಂದ, ಅಂಬೇಡ್ಕರ್ ಶಕ್ತಿ ಯುವಕ ಸಂಘದ ಅಧ್ಯಕ್ಷ ನಂದನ್ ಬೋರ್ಕರ್, ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಬಸವರಾಜ ಬಂಡೆರ್, ಕಾಲೇಜ್ ಪ್ರಾಚಾರ್ಯ ಬಿ.ಎಸ್. ಹೆಗಡೆ, ಪಿಎಸ್​ಐ ಮಹಾಂತಪ್ಪ ಕುಂಬಾರ ಇತರರಿದ್ದರು. ಸಾಗರದ ಸಂಪದ ಕಲಾ ತಂಡದವರಿಂದ ಜಾಗೃತಿ ಗೀತೆಗಳು, ಬೀದಿ ನಾಟಕ ಕಾರ್ಯಕ್ರಮ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts