More

    2 ವರ್ಷದಲ್ಲಿ ರಸ್ತೆಗಳ ಅಭಿವೃದ್ಧಿ: ಮಧು ಬಂಗಾರಪ್ಪ

    ಸೊರಬ: ತಾಲೂಕಿನ ಶೇ.90 ರಸ್ತೆಗಳನ್ನು 2 ವರ್ಷಗಳಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ತಾಲೂಕಿನ ಉಳವಿ ಗ್ರಾಮದಲ್ಲಿ ಶನಿವಾರ 17 ಲಕ್ಷ ರೂ. ಹಾಗೂ 45 ಲಕ್ಷ ರೂ. ಅನುದಾನದಲ್ಲಿ ಉಳವಿ, ದೂಗೂರು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಮಕ್ಕಳಿಗೆ ಶಿಕ್ಷಣ ಕೊಡುವುದೇ ನಿಜವಾದ ಆಸ್ತಿ. ದೇವಸ್ಥಾನ ಚಿಕ್ಕದು ಕಟ್ಟಿ ಶಾಲೆ ದೊಡ್ಡದಾಗಿ ನಿರ್ಮಿಸಿ. ಆ ಶಾಲೆಯಲ್ಲಿ ಓದಿದ ಮಕ್ಕಳು ಭವಿಷ್ಯ ಕಟ್ಟಿಕೊಂಡು ನಂತರ ದೇವಸ್ಥಾನ ನಿರ್ಮಿಸುತ್ತಾರೆ ಎಂದರು.
    ದೂಗೂರು ಗ್ರಾಪಂ ಅಧ್ಯಕ್ಷ ಯಾಸ್ ಅಹ್ಮದ್ ಮಾತನಾಡಿ, ಮಧು ಬಂಗಾರಪ್ಪ ಸಚಿವರಾದ ನಂತರ ತಾಲೂಕಿನ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಉಳವಿ ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿಗೂ ಆದ್ಯತೆ ನೀಡಿದ್ದಾರೆ. ಸರ್ಕಾರಕ್ಕೆ ಸಚಿವರು ಅನೇಕ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರು ಆಗುವ ವಿಶ್ವಾಸವಿದೆ ಎಂದರು.
    ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಮಾಜಿ ಸದಸ್ಯ ನಾಗರಾಜ್ ಚಿಕ್ಕಸವಿ, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ, ಗಣಪತಿ ಮೈಸಾವಿ, ಪುಟ್ಟಪ್ಪ, ಶಿವಮೂರ್ತಿ, ದೂಗೂರು ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ, ಸದಸ್ಯರಾದ ಎಂ.ಬಿ.ಪುಟ್ಟಪ್ಪ, ಶಶಿಕಲಾ, ತುಳಸಿ, ಪಿಡಿಒ ನಾಗರಾಜ್, ಉಳವಿ ಗ್ರಾಪಂ ಪ್ರೇಮಾ, ಪ್ರಶಾಂತ, ನಾಗರತ್ನ, ಪಿಡಿಒ ರವಿಚಂದ್ರ ಇತರರಿದ್ದರು. ಕಾರ್ಯದರ್ಶಿ ನಂದಿನಿ ನಿರೂಪಿಸಿದರು. ಉಷಾ ಪ್ರಾರ್ಥಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts