More

    ಅಭಿವೃದ್ಧಿಗೆ ಅಗತ್ಯ ಸಹಕಾರ

    ಬೋರಗಾಂವ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 12 ಕೋಟಿ ರೂ.ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

    ಪಟ್ಟಣದಲ್ಲಿ ಶುಕ್ರವಾರ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅರಿಹಂತ ಉದ್ಯೋಗ ಸಮೂಹ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.

    ಬೋರಗಾಂವ ಪಟ್ಟಣ ಪಂಚಾಯಿತಿಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಸೇರಿ ವಿವಿಧ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಹಕಾರಿ ಧುರೀಣ ರಾವಸಾಹೇಬ ಪಾಟೀಲ ಮಾರ್ಗದರ್ಶನದಲ್ಲಿ ಬೋರಗಾಂವ ಪಟ್ಟಣ ಅಭಿವೃದ್ಧಿ ಆಗುತ್ತಿದೆ. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ತಾವು ಎಲ್ಲ ರೀತಿ ಸಹಕಾರ ನೀಡುವುದಾಗಿ ಸಚಿವ ರಮೇಶ ತಿಳಿಸಿದರು. ಲಾಕ್‌ಡೌನ್‌ನಿಂದಾಗಿ ಗಡಿಭಾಗದ ರೈತರಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಮಹಾಮಾರಿ ಕರೊನಾ ಜನರನ್ನು ಇನ್ನಿಲ್ಲದ ಕಷ್ಟಕ್ಕೆ ನೂಕಿದೆ. ಅಧಿಕಾರಿಗಳ ಜತೆ ಚರ್ಚಿಸಿ ರೈತರು ಹಾಗೂ ವ್ಯಾಪಾರಸ್ಥರ ಎಲ್ಲ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು. ಬೋರಗಾಂವ ಸೇರಿ ನಿಪ್ಪಾಣಿ ತಾಲೂಕಿನ ಅನೇಕ ನಿರಾವರಿ ಯೋಜನೆಗಳು, ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡುವ ಜತೆಗೆ, ವಿವಿಧ ಸಮಸ್ಯೆ ಕೂಡ ಬಗೆಹರಿಸಲಾಗುವುದು ಎಂದು ತಿಳಿಸಿದರು.

    ಮುಖಂಡ ಉತ್ತಮ ಪಾಟೀಲ ಮಾತನಾಡಿ, ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಿದ್ದು, ನಿಪ್ಪಾಣಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ತಾಲೂಕಿನ ರಸ್ತೆಗಳು, ನೀರಾವರಿ ಯೋಜನೆಗಳು, ರೈತರ ಸಮಸ್ಯೆ, ಸರ್ಕಾರಿ ಕಚೇರಿಗಳ ಸ್ಥಾಪನೆ, ಕಾರ್ಯಾಲಯಗಳ ಕಟ್ಟಡ ನಿರ್ಮಾಣ ಸೇರಿ ವಿವಿಧ ಸಮಸ್ಯೆ ಬಗೆಹರಿಸಲು ಮನವಿ ಸಚಿವರಿಗೆ ಈಗಾಗಲೇ ಮಾಡಿದ್ದೇವೆ ಎಂದರು. ಉದ್ಯಮಿ ಅಭಿನಂದನ ಪಾಟೀಲ, ರೋಹಿತ ಚೌಗುಲಾ, ಅಮೋಲ ನಾಯಿಕ್, ಅಭಯಕುಮಾರ ಮಗದುಮ್ಮ, ರಾಜು ಮಗದುಮ್ಮ, ಬಾಹುಬಲಿ ಸೋಲಾಪುರೆ, ಅಶೋಕಕುಮಾರ ಅಸೋದೆ, ರಾಜ್ ಪಠಾಣ, ಪೋಪಟ್ ಪಾಟೀಲ, ಬಾಬಾಸೋ ವಠಾರೆ ಜೀವಂದರ ಫಿರಗಣ್ಣವರ, ಪ್ರಕಾಶ ಗಾಯಕವಾಡ, ಅಭಯ ಚೌಗುಲೆ, ಪ್ರವೀಣ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts