More

  ಅದ್ದೂರಿ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ

  ದೇವರಹಿಪ್ಪರಗಿ: ಈ ಬಾರಿ ನೂತನ ತಾಲೂಕು ಆಡಳಿತ ವತಿಯಿಂದ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ವೈ.ಬಿ. ನಾಗಠಾಣ ಹೇಳಿದರು.
  ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಅಂದು ಎಲ್ಲ ಶಾಲೆ- ಕಾಲೇಜುಗಳ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನೆರವೇರಿಸಬೇಕು. ನಂತರ ಶಾಸಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಾಜರಿದ್ದು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು. ಎಲ್ಲ ಮಕ್ಕಳಿಗೆ ಪಪಂನಿಂದ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ದರಿಂದ ಶಿಕ್ಷಕ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಬೇಕು ಎಂದರು.
  ಶಾಲೆ ಕಾಲೇಜುಗಳ ಕ್ರೀಡಾಕೂಟದಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸ್ಥಾನ ಪಡೆದ ಕ್ರೀಡಾಪಟುಗಳ ಸನ್ಮಾನಕ್ಕೆ ಸಂಬಂಧಿಸಿದಂತೆ ಪಟ್ಟಿ ತಯಾರಿಸುವಂತೆ ಸಿಬ್ಬಂದಿಗೆ ತಿಳಿಸಿದರಲ್ಲದೆ, ಸ್ವಾತಂತ್ರೃ ನಂತರ ಈವರೆಗೂ ಧ್ವಜಾರೋಹಣವನ್ನೇ ಮಾಡದ ಸ್ಥಳೀಯ ಅಂಚೆ ಕಚೇರಿ ಸಿಬ್ಬಂದಿಗೆ ಧ್ವಜಾರೋಹಣ ನೆರವೇರಿಸುವಂತೆ ಎಚ್ಚರಿಸಿದರು.
  ನಂತರ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಕಾರ್ಯಕ್ರಮದ ರೂಪರೇಷೆಗಳ ಕುರಿತು ಚರ್ಚಿಸಲಾಯಿತು.
  ಪಪಂ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ಶಿರಸ್ತೆದಾರ, ಡಿ.ವೈ. ಕಟ್ಟಿಮನಿ, ಕಂದಾಯ ನಿರೀಕ್ಷಕ ಎ.ಪಿ. ಪಮ್ಮಾರ, ಜಿ.ಕೆ. ಹಡಪದ, ಫಿರೋಜ್ ಮುಲ್ಲಾ, ಕಾಶೀನಾಥ ಕಡ್ಲೇವಾಡ, ಪ್ರಾಚಾರ್ಯರಾದ ಎಸ್.ಕೆ. ಬಾಗಿ, ಎಸ್.ಎಸ್. ಕರಕಲ್‌ಮನಿ, ಜಗದೀಶ ಧನಗೊಂಡ, ಶಿಕ್ಷಕ ಸಿಬ್ಬಂದಿ ರೇಣುಕಾ ಒಡೆಯರ್, ಬಿ.ಬಿ. ಪಾಟೀಲ, ಆರ್.ಎಂ. ಹಳ್ಳಿ, ಎ.ವಿ. ವಡ್ಡೋಡಗಿ, ಗಾವುಡಿ, ಎಸ್.ಐ. ರಾಮಪೂರ ಕೃಷಿ ಇಲಾಖೆಯ ಸೋಮನಗೌಡ ಬಿರಾದಾರ, ದಲಿತಪರ ಸಂಘಟನೆಗಳ ಪ್ರಕಾಶ ಗುಡಿಮನಿ, ಜಾನು ಗುಡಿಮನಿ, ರಾಜಕುಮಾರ ಸಿಂದಗೇರಿ, ಅಂಚೆ ಇಲಾಖೆಯ ಸಿ.ಟಿ. ಯಲಗೋಡ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts