More

    ಸಮಾಜದ ಏಳಿಗೆಗೆ ಅರಸು ಭವನ ಸಹಕಾರಿ

    ನರಗುಂದ: ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಕ ಹೋರಾಟದಿಂದಾಗಿ ದಿ. ದೇವರಾಜ ಅರಸುರವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದ ಪರಿಣಾಮ ಬಡವರು ಇಂದು ಉತ್ತಮ ಜೀವನ ನಡೆಸುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಕೆಆರ್​ಐಡಿಎಲ್​ನಿಂದ ಪಟ್ಟಣದ ಮಿನಿವಿಧಾನ ಸೌಧದ ಬಳಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ಡಿ. ದೇವರಾಜ ಅರಸು ಭವನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿ ದೇವರಾಜ ಅರಸು ಭವನ ನಿರ್ವಣಕ್ಕೆ ಸಾರ್ವಜನಿಕರಿಂದ ಬೇಡಿಕೆ ಇತ್ತು. ಹೀಗಾಗಿ 5 ಗುಂಟೆ ನಿವೇಶನದಲ್ಲಿ ಭವನವನ್ನು ನಿರ್ವಿುಸಲಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು, ವಿದ್ಯಾಸಿರಿ ಸೇರಿ ವಿವಿಧ ತರಬೇತಿ ಕಾರ್ಯಕ್ರಮಗಳ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಭವನ ಸಹಾಯಕವಾಗಲಿದೆ ಎಂದರು.

    ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಾ ಹೂಗಾರ ಮಾತನಾಡಿದರು. ಕೆಆರ್​ಐಡಿಎಲ್ ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಕೆ. ಮಲ್ಲಿಕಾರ್ಜುನಸ್ವಾಮಿ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ರತ್ನಮ್ಮ ಹೊಸಮನಿ, ವಿಸ್ತರಣಾಧಿಕಾರಿ ಯು.ಐ. ಲಮಾಣಿ, ಅಜ್ಜಪ್ಪ ಹುಡೇದ, ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ಸಿದ್ದಪ್ಪ ಯಲಿಗಾರ, ಮಹೇಶ ಬೋಳಶೆಟ್ಟಿ, ಹುಸೇನಸಾಬ ಗೋಟುರ, ವಾಸು ಜೋಗಣ್ಣವರ, ಪ್ರಕಾಶ ಹಾದಿಮನಿ, ಚಂದ್ರಗೌಡ ಪಾಟೀಲ, ಮಂಜು ಮೆಣಸಗಿ, ಪವಾಡೆಪ್ಪ ವಡ್ಡಿಗೇರಿ, ಸುಜಾತಾ ಕಾಳೆ, ಉಮೇಶ ಅವರಾದಿ, ಎಸ್.ಬಿ. ಪಾಟೀಲ, ಬಿ.ಬಿ.ಮಲ್ಲೂರ, ಸಿದ್ಧೇಶ ಹೂಗಾರ, ಪ್ರಕಾಶ ಪಟ್ಟಣಶೆಟ್ಟಿ, ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts