More

    ಪರಿಸರ ಪ್ರೇಮ ಜೀವನದುದ್ದಕ್ಕೂ ಇರಲಿ

    ದೇವರಹಿಪ್ಪರಗಿ: ಪರಿಸರ ಪ್ರೀತಿ ಕೇವಲ ವಿಶ್ವ ಪರಿಸರ ದಿನಾಚರಣೆಗೆ ಸೀಮಿತವಾಗದೆ ಜೀವನದುದ್ದಕ್ಕೂ ಬೆಳೆಯಬೇಕೆಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.

    ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಅರಣ್ಯ ಇಲಾಖೆ ಸಿಂದಗಿ ಹಾಗೂ ಪಟ್ಟಣ ಪಂಚಾಯಿತಿ ದೇವರಹಿಪ್ಪರಗಿ ಇವರ ಸಹಯೋಗದಲ್ಲಿ ಶುಕ್ರವಾರ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಎಲ್ಲರೂ ಗಿಡಮರ ಬೆಳೆಸಿ ನಿಸರ್ಗದ ಕೋಪ ಇಳಿಸಬೇಕಾಗಿದೆ. ನಿಸರ್ಗದ ಕೋಪ ಯಾವೆಲ್ಲ ಅನಾಹುತಗಳನ್ನು ಸೃಷ್ಟಿಸಬಲ್ಲದು ಎಂದು ಹೇಳಲಾಗದು. ಅದನ್ನು ಹಲವು ಬಾರಿ ಅನುಭವಿಸಿದ್ದೇವೆ ಎಂದರು.

    ಕಳೆದ ಎರಡು ವರ್ಷಗಳಿಂದ ಕೋವಿಡ್ ಇಂದು ನಮಗೆ ಆಕ್ಸಿಜನ್ ಮಹತ್ವ ತಿಳಿಸಿದೆ. ಗಿಡಮರಗಳ ಕೊರತೆಯಿಂದ ನಾವೆಲ್ಲ ಶುದ್ಧ ಆಕ್ಸಿಜನ್ ಇಲ್ಲದೆ ಬಳಲುವಂತಾಗಿದೆ. ಆದ್ದರಿಂದ ಎಲ್ಲರೂ ಮನೆಗೊಂದು ಮರ ನೆಡೋಣ. ಸ್ವಚ್ಛ ಸುಂದರ ಪರಿಸರ ನಿರ್ಮಿಸೋಣ ಎಂದರು.

    ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪತಹಸೀಲ್ದಾರ್ ಇಂದಿರಾ ಬಳಗಾನೂರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ಪಿಎಸ್‌ಐ ರವಿ ಯಡವಣ್ಣವರ, ಕಂದಾಯ ನಿರೀಕ್ಷಕ ಆನಂದ ಪಮ್ಮಾರ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮೇಶ ಮಸಬಿನಾಳ, ಅರಣ್ಯ ಇಲಾಖೆಯ ಎಸ್.ಎಸ್. ಬಿರಾದಾರ, ಗಿರಿರಾಜ ರಾಮಗೀರಿಮಠ, ವಿವೇಕಾನಂದ ವಿಭೂತಿ, ಫಿರೋಜ್ ಮುಲ್ಲಾ, ಮುನೀರ್ ಅಹ್ಮದ್ ಮಳಖೇಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts