More

    ಗದಗ ಜಿಲ್ಲಾ ದೇವಾಂಗ ನೌಕರರ ಸಭೆ

    ವಿಜಯವಾಣಿ ಸುದ್ದಿಜಾಲ ಗದಗ
    ಕಳೆದ ಎರಡೂವರೆ ದಶಕಗಳಿಂದ ಗದಗ ಜಿಲ್ಲಾ ದೇವಾಂಗ ನೌಕರರ ಸಮಾಜಕ್ಕೆ ಉಪಯುಕ್ತವಾಗುವ ರಚನಾತ್ಮಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತ ಬಂದಿದೆ. ರಾಷ್ಟ್ರಮಟ್ಟದ ವಧು&ವರರ ಸಮಾವೇಶಗಳನ್ನು ಯಶಸ್ವಿಯಾಗಿ, ವ್ಯವಸ್ಥಿತವಾಗಿ ನೆರವೇರಿಸಿದೆ. ಇಂದಿನ ದಿನಗಳಲ್ಲಿ ವಧು&ವರರ ಸಮಾವೇಶ ಸಮಾಜ ಬಾಂಧವರಿಗೆ ಅತ್ಯಂತ ಅವಶ್ಯವಾಗಿದೆ ಎಂದು ಸಂದ ಅಧ್ಯ ಆರ್​. ಟಿ. ಕೊಪ್ಪಳ ಹೇಳಿದರು.
    ಜಿಲ್ಲಾ ದೇವಾಂಗ ನೌಕರರ ಸಂದಿಂದ ನಗರದ ಹಳೇ ಬನಶಂಕರಿ ದೇವಸ್ಥಾನದ ನೌಕರರ ಸಂದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧ್ಯತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ದೇವಾಂಗ ನೌಕರರ ಸಂದಿಂದ ಮುಂಬರುವ ಮೇ 25, 26 ರಂದು 7 ನೇ ಅಂತರಾಷ್ಟ್ರೀಯ ವಧು&ವರರ ಸಮಾವೇಶವನ್ನು ಆಯೋಜಿಸಲಾಗಿದೆ. ಇದರಲ್ಲಿ ದೇವಾಂಗ ಸಮಾಜದ ವಧು ವರರು ಮೇ.15ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
    ದೇವಾಂಗ ನೌಕರರ ಪತ್ತಿನ ಸಹಕಾರಿ ಸಂದ ಅಧ್ಯ ಶಿವಾನಂದ ಗಿಡ್ನಂದಿ ಮಾತನಾಡಿ, ಸಂವು 1999 ರಂದು ಸ್ಥಾಪನೆಗೊಂಡು ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ಸಂಗದ ಸಂಸ್ಥಾಪಕರ ಹೆಸರಿನಲ್ಲಿ ಬೆಳ್ಳಿಹಬ್ಬವನ್ನು ಮೇ ತಿಂಗಳಿನಲ್ಲಿ ಆಚರಿಸಲಾಗುವುದು. ವಿವಿಧ ೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
    ರಾವೇಂದ್ರ ಕೊಪ್ಪಳ, ರಾಜೇಂದ್ರ ಬರದ್ವಾಡ, ಶಿವಾನಂದ ಗಿಡ್ನಂದಿ, ಶಿವಾನಂದ ಕಲ್ಲೂರ, ಅರವಿಂದ ಗಂಜಿ, ಸುಜಾತಾ ಕಾಕಣಕಿ, ದಶರಥರಾಜ ಕೊಳ್ಳಿ, ಸುಜಾತಾ ಕಾಕಂಡಕಿ, ಎಂ.ಜಿ. ಬೆಲ್ಲದ, ಅನಿಲ್​ ಗಡ್ಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts