More

    ಆತ್ಮಹತ್ಯೆ ಹೇಡಿಗಳು ಮಾಡಿಕೊಳ್ಳುವ ಕೃತ್ಯ: ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ.ನಾಗರಾಜ ಅಭಿಮತ

    ದೇವದುರ್ಗ: ಮಾನಸಿಕವಾಗಿ ನೊಂದು, ಜೀವನದ ಕಷ್ಟ ಹಾಗೂ ಸವಾಲುಗಳನ್ನು ಎದುರಿಸಲಾಗದೆ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಮನುಷ್ಯ ಜೀವನ ದೇವರು ಕೊಟ್ಟ ಅದ್ಭುತ ವರವಾಗಿದ್ದು, ಇದ್ದು ಜಯಿಸದೆ ಆತ್ಯಹತ್ಯೆ ಮಾಡಿಕೊಳ್ಳವುದು ಹೇಡಿತನದ ಕೃತ್ಯ ಎಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ.ನಾಗರಾಜ ಹೇಳಿದರು.

    ತಾಲೂಕಿನ ಕರಡಿಗುಡ್ಡ ಗ್ರಾಪಂ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ, ಜೀವನದಲ್ಲಿ ಎಂಥದ್ದೇ ಸಂಕಷ್ಟ, ಸಮಸ್ಯೆ ಎದುರಾದರೂ ಅದನ್ನು ಹಿಮ್ಮೆಟ್ಟಿಸುವ ಮನಸ್ಥಿತಿ ಅಗತ್ಯ. ಸಮಸ್ಯೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗುವುದಿಲ್ಲ. ಅಲ್ಲದೆ ನಿಮ್ಮನ್ನು ನಂಬಿಕೊಂಡ ಕುಟುಂಬವನ್ನು ಜೀವನವಿಡೀ ಸಂಕಷ್ಟಕ್ಕೆ ದೂಡಿದಂತಾಗುತ್ತದೆ. ಹೀಗಾಗಿ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.

    ಹಿರಿಯ ಆರೋಗ್ಯ ನಿರೀಕ್ಷಕ ದೇವೇಂದ್ರಪ್ಪ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಹೆಚ್ಚು ಯುವಕರಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆತ್ಮಹತ್ಯೆ ತಡೆ ದಿನ ಆಚರಿಸಲಾಗುತ್ತಿದೆ. ಈ ಬಗ್ಗೆ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ.ದುಶ್ಚಟಗಳಿಂದ ದೂರ ಇಡಲು ಪಾಲಕರು ಮುಂದಾಗಬೇಕು ಎಂದು ಹೇಳಿದರು.

    ಸಮುದಾಯ ಆರೋಗ್ಯಾಧಿಕಾರಿ ಚಂದ್ರಶೇಖರ, ರಾಮನಗೌಡ ಪೊಪಾ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಫಕ್ರುದ್ದೀನ್, ಶಶಿಕಲಾ, ಪಿಎಚ್‌ಸಿಒ ಸುವರ್ಣಾ, ಚನ್ನಬಸಯ್ಯ ಹಿರೇಮಠ, ಓಂಕಾರ ಜಾಂತೇಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts