More

    ಪ್ರಾದೇಶಿಕ ಭಾಷೆಗಳಿಗೆ ಬಲ

    ದೇವದುರ್ಗ: ಸ್ವಾತಂತ್ರ್ಯ ನಂತರ ದೇಶದಲ್ಲಿ ಪ್ರಾದೇಶಿಕ ಭಾಷೆಗಳು ಚದುರಿ ಹೋಗಿದ್ದವು. ಭಾಷಾವಾರು ಪ್ರಾಂತ ರಚನೆ ಮಾಡಬೇಕು ಎನ್ನುವ ಕಲ್ಪನೆ ಹುಟ್ಟುಹಾಕಿದ್ದು ಕನ್ನಡಿಗರು. ಕನ್ನಡಗರ ಧ್ವನಿಗೆ ವಿವಿಧ ರಾಜ್ಯಗಳ ಜನರು ಶಕ್ತಿ ತುಂಬಿದ್ದರಿಂದ ದೇಶದಲ್ಲಿ ಭಾಷಾವಾರು ರಾಜ್ಯಗಳ ರಚನೆ ಸಾಧ್ಯವಾಯಿತು ಎಂದು ಮುಖ್ಯಶಿಕ್ಷಕ ಯಲ್ಲಪ್ಪ ಅಂದ್ರಾಳ್ ಹೇಳಿದರು.

    ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಆಲೂರು ವೆಂಕಟರಾಯರು ಕನ್ನಡಿಗರಿಗೆ ಪ್ರತ್ಯೇಕ ರಾಜ್ಯ ರಚನೆಗೆ ಮೊದಲು ಧ್ವನಿ ಎತ್ತಿದರು. ಇದರ ಫಲವಾಗಿ ದಕ್ಷಿಣ ಭಾರತದ ರಾಜ್ಯಗಳ ಜನರು ಭಾಷಾವಾರು ಪ್ರಾಂತ ರಚನೆ ಆಗಬೇಕು ಎಂದು ಹೋರಾಟ ಮಾಡಿದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿ ಅದರ ವರದಿ ಆಧರಿಸಿ ಭಾಷಾವಾರು ರಾಜ್ಯಗಳನ್ನು ರಚನೆ ಮಾಡಿತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts