More

    ಬಡವರಿಗೆ ರೂ. 25 ಸಾವಿರ ಕೊಡಿ; ಬಹುಜನ ಸಮಾಜವಾದಿ ಪಾರ್ಟಿ ಒತ್ತಾಯ

    ಗ್ರೇಡ್ 2 ತಹಸಿಲ್ದಾರ ಚಾಪೆಲ್‌ಗೆ ಮನವಿ

    ದೇವದುರ್ಗ: ಕರೊನಾ ಎರಡನೇ ಅಲೆ ತಡೆಯಲು ರಾಜ್ಯ ಸರ್ಕಾರ 15 ದಿನಗಳ ಜನತಾ ಕರ್ಫ್ಯೂ ಜಾರಿ ಮಾಡಿದ್ದರಿಂದ ಸಂಕಷ್ಟಕ್ಕೆ ಒಳಗಾದ ಬಡವರಿಗೆ ಮಾಸಿಕ 25 ಸಾವಿರ ರೂ. ಸಹಾಯಧನ ನೀಡುವಂತೆ ಸಮಾಜವಾದಿ ಪಕ್ಷದ ತಾಲೂಕು ಘಟಕ ಒತ್ತಾಯಿಸಿದೆ.

    ಪಟ್ಟಣದ ತಹಸಿಲ್ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಶ್ರೀನಿವಾಸ ಚಾಪೆಲ್ಗೆ ಸೋಮವಾರ ಮನವಿ ಸಲ್ಲಿಸಿತು. ದೇಶದಲ್ಲಿ ಕರೊನಾ ಎರಡನೇ ಅಲೆ ವೇಗವಾಗಿ ಹಬ್ಬಲು ಕೇಂದ್ರ, ರಾಜ್ಯ ಸರ್ಕಾರಗಳೇ ನೇರ ಹೊಣೆ. ಮೊದಲ ಅಲೆ ಬಂದಾಗ ಅಗತ್ಯ ಕ್ರಮ ಕೈಗೊಂಡಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರಲಿಲ್ಲ. ತಜ್ಞರು ನೀಡಿರುವ ಎಚ್ಚರಿಕೆ ಕಡೆಗಣಿಸಿದ ಎರಡೂ ಸರ್ಕಾರಗಳು ವಿವಿಧ ರಾಜ್ಯದ ಚುನಾವಣೆಗಳಿಗೆ ಆದ್ಯತೆ ನೀಡಿದವು. ರಾಜಕೀಯ ಸಮಾವೇಶ, ರ‌್ಯಾಲಿ ನಡೆಸಿದವು. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರುವಂತೆ ಮಾಡಿದವು. ಇದರಿಂದ ಸೋಂಕು ಎಲ್ಲೆಡೆ ಹೆಚ್ಚಾಯಿತು ಎಂದು ಮನವಿಯಲ್ಲಿ ಆರೋಪಿಸಿದೆ.

    ಬಡವರು, ಕೂಲಿ ಕಾರ್ಮಿಕರು, ಪಡಿತರ ಫಲಾನುಭವಿಗಳಿಗೆ 25 ಸಾವಿರ ರೂ ಸಹಾಯಧನವನ್ನು ಅವರವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಉಚಿತವಾಗಿ ಪಡಿತರ ನೀಡಬೇಕು. ಉಚಿತ ಪಡಿತರ ಕೇಳಿದ ರೈತನಿಗೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ಸಚಿವ ಉಮೇಶ ಕತ್ತಿಯನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts